ಬಿರು ಬೇಸಿಗೆಯಲ್ಲೂ ಕರಿಮತ್ತಿ ಮರದಿಂದ ಚಿಮ್ಮಿದ ನೀರಿನ ಬುಗ್ಗೆ

Update: 2024-03-31 14:40 GMT

Photo : twitter

ಅಮರಾವತಿ : ಬೇಸಿಗೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಆರಂಭಗೊಂಡಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆಯಿರುವಾಗ, ಅರಣ್ಯ ಸಂಪತ್ತು ಈ ಬಿಸಿಲಿಗೆ ಹೇಗೆ ಬದುಕುಳಿಯುತ್ತವೆ ಎನ್ನುವ ಕುತೂಹಲ ಮೂಡುವುದು ಸಹಜ.

ಇದಕ್ಕೆ ಉತ್ತರವೆಂಬಂತೆ, ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯದೊಳಗೆ ತೋರಿಸಿದ ಪ್ರಾತ್ಯಕ್ಷಿಕೆಯೊಂದು ವನ್ಯ ಜಗತ್ತಿನ ಸೋಜಿಗವನ್ನು ತೆರೆದಿಟ್ಟಿದೆ.

ಶನಿವಾರ, ಆಂಧ್ರಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕರಿಮತ್ತಿ ತೊಗಟೆಯನ್ನು ಕತ್ತರಿಸಿ, ಮರವು ಬೇಸಿಗೆಯಲ್ಲಿ ನೀರನ್ನು ಸಂಗ್ರಹಿಸಿಟ್ಟಿರುವುದನ್ನು ತೋರಿಸಿದ್ದಾರೆ.

ಗೋದಾವರಿ ಪ್ರದೇಶದ ಪಾಪಿಕೊಂಡ ಬೆಟ್ಟದ ಶ್ರೇಣಿಯಲ್ಲಿ ವಾಸಿಸುವ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪಿನ ಕೊಂಡ ರೆಡ್ಡಿ ಬುಡಕಟ್ಟು ಜನಾಂಗದವರು ಈ ಜ್ಞಾನವನ್ನು ಅರಣ್ಯ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ.

ಸೌಜನ್ಯ : The Hindu

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News