ಪಾಕಿಸ್ತಾನಕ್ಕೆ ಬಿಎಸ್‌ಎಫ್‌ನ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ನೀಲೇಶ್ ಬೈದ್ಯ ಬಂಧನ
"ನೀಲೇಶ್ ವಿರುದ್ಧ ಐಪಿಸಿ ಆಕ್ಟ್ 121ಕೆ-ಕೆ 123 ಮತ್ತು 120ಬಿ ಕಾಯ್ದೆಯಡಿ ಅಪರಾಧದ ಆರೋಪ ಹೊರಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಹ್ಮದಾಬಾದ್: ಗುಜರಾತ್ ನ ಭಯೋತ್ಪಾದನಾ ವಿರೋಧಿ ಪಡೆಯು ಪಾಕಿಸ್ತಾನದ ಐಎಸ್‌ಐಗೆ ರಹಸ್ಯ ಮಾಹಿತಿಗಳನ್ನು ನೀಡುತ್ತಿದ್ದ ಜಾಲವನ್ನು ಶನಿವಾರ ಬೇಧಿಸಿದೆ. ಗುಜರಾತ್ ನ ಕಛ್ ನಲ್ಲಿ ಬಿಎಸ್‌ಎಫ್ ನ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ನೀಲೇಶ್ ಬೈದ್ಯ ಎಂಬ ಆರೋಪಿಯನ್ನು ಬಂಧಿಸಲಾದ ಕುರಿತು newindianexpress.com ವರದಿ ಮಾಡಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಹನಿಟ್ರ್ಯಾಪ್ ಗೆ ಒಳಗಾದ ನೀಲೇಶ್ ಹಲವು ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ್ದಾನೆ. ಇಂಟರ್‌ನೆಟ್ ನಲ್ಲಿ ಅದಿತಿ ಎಂಬ ಹೆಸರಿನ ಪ್ರೊಫೈಲ್ ನೀಲೇಶ್ ನನ್ನು ಸಂಪರ್ಕಿಸಿತ್ತು. ಬಿಎಸ್‌ಎಫ್‌ಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದ್ದು, ಅದಕ್ಕೆ ಪ್ರತಿಯಾಗಿ ಹಣವನ್ನೂ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಎಟಿಎಸ್ ಅಧಿಕಾರಿಗಳು ಅಹಮದಾಬಾದ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ್ದು, “ಕಳೆದ ಐದು ವರ್ಷಗಳಿಂದ ಬಿಎಸ್‌ಎಫ್ ಬೆಟಾಲಿಯನ್ 59 ಹೆಡ್‌ಕ್ವಾರ್ಟರ್ಸ್ ಭುಜ್‌ನಲ್ಲಿ ಸಿಪಿಡಬ್ಲ್ಯುನ ಎಲೆಕ್ಟ್ರಿಕಲ್ ವಿಭಾಗದಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದ ನಿಲೇಶ್ ಬಲಿಯಾ ಪಾಕಿಸ್ತಾನಿ ಮಹಿಳಾ ಏಜೆಂಟ್ ಎಂಬ ಹೆಸರಿನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ" ಎಂದಿದ್ದಾರೆ.
"ನೀಲೇಶ್ ವಿರುದ್ಧ ಐಪಿಸಿ ಆಕ್ಟ್ 121ಕೆ-ಕೆ 123 ಮತ್ತು 120ಬಿ ಕಾಯ್ದೆಯಡಿ ಅಪರಾಧದ ಆರೋಪ ಹೊರಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.