ಹೊಸ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ: ಕೇಂದ್ರ ಬಜೆಟ್‌ ನಲ್ಲಿ ಘೋಷಣೆ

Update: 2024-07-23 07:24 GMT

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (PTI) 

ಹೊಸದಿಲ್ಲಿ: ಉದ್ಯೋಗಕ್ಕೆ ಸೇರಿಕೊಳ್ಳುವ ಎಲ್ಲ ಹೊಸ ಉದ್ಯೋಗಿಗಳಿಗೆ ಸರ್ಕಾರ ಒಂದು ತಿಂಗಳ ವೇತನವನ್ನು ನೀಡಲಿದೆ ಎಂದು ಇಂದು ಬಜೆಟ್‌ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಈ ಮೊತ್ತವನನು ಉದ್ಯೋಗಿಗಳ ಪ್ರಾವಿಡೆಂಟ್‌ ಫಂಡ್‌ ಕೊಡುಗೆಗೆ ನೀಡಲಾಗುವುದು.

ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವವರಿಗೆ ಈ ಯೋಜನೆ ಅನ್ವಯವಾಗಲಿದೆ. ಇದು 210 ಲಕ್ಷ ಯುವಜನತೆಗೆ ಪ್ರಯೋಜನಕಾರಿಯಾಗಲಿದೆ ಎಂದು ವಿತ್ತ ಸಚಿವೆ ಹೇಳಿದರು.

ಉತ್ಪಾದನಾ ರಂಗದಲ್ಲಿ ಮೊದಲ ಬಾರಿ ಉದ್ಯೋಗ ಪಡೆದವರಿಗೆ ಸಂಬಂಧಿಸಿದಂತೆ ಇನ್ನೊಂದು ಯೋಜನೆಯಲ್ಲಿ ಸರ್ಕಾರವು ಮೊದಲ ನಾಲ್ಕು ವರ್ಷಗಳಲ್ಲಿ ಇಪಿಎಫ್‌ಒ ಕೊಡುಗೆ ನೀಡಲಿದ್ದು ಇದು 30 ಲಕ್ಷ ಯುವಜನತೆ ಮತ್ತು ಅವರ ಉದ್ಯೋಗದಾತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಮೂರನೇ ಯೋಜನೆಯಡಿ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗವನ್ನು ಒಳಗೊಳ್ಳಲಿದೆ. ತಿಂಗಳಿಗೆ ಒಂದು ಲಕ್ಷ ವೇತನದೊಳಗಿನ ಎಲ್ಲಾ ಹೆಚ್ಚುವರಿ ಉದ್ಯೋಗವನ್ನು ಈ ಯೋಜನೆ ಒಳಗೊಳ್ಳಲಿದೆ. ಇದರ ಭಾಗವಾಗಿ ಇಎಫ್‌ಪಿಒ ಕೊಡುಗೆಗಾಗಿ ಉದ್ಯೋಗದಾತರಿಗೆ ಮಾಸಿಕ ರೂ. 3000 ವರೆಗೆ ಎರಡು ವರ್ಷ ಪ್ರತಿ ಉದ್ಯೋಗಿ ಪರ ಕೊಡುಗೆ ನೀಡಲಿದೆ ಎಂದು ಸಚಿವೆ ಹೇಳಿದ್ದಾರೆ. ಇದು 50 ಲಕ್ಷ ಉದ್ಯೋಗಗಳಿಗೆ ಸಂಬಂಧಿಸಿದಂತೆ ಪ್ರಯೋಜನಕಾರಿಯಾಗಲಿದೆ.

ಮಹಿಳಾ ಉದ್ಯೋಗಿಗಳಿಗೆ ನೆರವಾಗಲು ಮಹಿಳಾ ಉದ್ಯೋಗಿಗಳ ಹಾಸ್ಟೆಲ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಲಿದೆ ಎಂದು ಸಚಿವೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News