ರಾಹುಲ್ ಗಾಂಧಿ, ಕೇಜ್ರಿವಾಲ್ ಗೆ ಪಾಕ್ ಬೆಂಬಲ ಗಂಭೀರ ವಿಚಾರ; ಈ ಬಗ್ಗೆ ತನಿಖೆ ನಡೆಸಬೇಕು : ಪ್ರಧಾನಿ ಮೋದಿ

Update: 2024-05-27 15:37 GMT

ನರೇಂದ್ರ ಮೋದಿ| PTI 

ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಪಾಕಿಸ್ತಾನದಿಂದ ಬೆಂಬಲ ವ್ಯಕ್ತವಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದು ಅತ್ಯಂತ ಗಂಭೀರ ವಿಷಯ. ಈ ಕುರಿತು ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ. ಸುದ್ದಿಸಂಸ್ಥೆ ಐಎಎನ್ಎಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೋದಿ ಅವರು, ನಾನು ಇರುವ ಸ್ಥಾನದಿಂದ ಇಂತಹ ವಿಷಯಗಳ ಬಗ್ಗೆ ಮಾತನಾಡೇಕು ಎಂದು ಭಾವಿಸುವುದಿಲ್ಲ. ಆದರೆ, ನಾನು ನಿಮ್ಮ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದರು.

ಇತ್ತೀಚೆಗೆ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಅವರು ರಾಹುಲ್ ಗಾಂಧಿ ಅವರ ವೀಡಿಯೊವನ್ನು ಶೇರ್ ಮಾಡಿದ್ದರು. ಕೇಜ್ರಿವಾಲ್ ಅವರಿಗೆ ಹೆಚ್ಚಿನ ಅಧಿಕಾರ ಸಿಗಲಿ ಎಂದೂ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದರು.

ಈ ವಿಷಯದ ಕುರಿತು ಪ್ರಶ್ನಿಸಿದಾಗ ಪ್ರಧಾನಿ ಅವರು, ನನ್ನೊಂದಿಗೆ ದ್ವೇಷ ಹೊಂದಿರುವ ಕೆಲವೇ ಜನರನ್ನು ಪಾಕಿಸ್ತಾನದವರು ಏಕೆ ಇಷ್ಟಪಡುತ್ತಾರೆ, ಇಲ್ಲಿನ ಕೇವಲ ಕೆಲವರ ಬೆಂಬಲದಿಂದ ಅಲ್ಲಿನವರು ಯಾಕೆ ಧ್ವನಿ ಎತ್ತುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದರು.

ಪಾಕ್ ಬೆಂಬಲ ಕಳವಳಕಾರಿ ಸಂಗತಿ ಎಂದು ಒಪ್ಪಿಕೊಂಡ ಮೋದಿ ಅವರು, ಭಾರತೀಯ ಮತದಾರರು ಪ್ರಬುದ್ಧರಾಗಿದ್ದಾರೆ. ಗಡಿಯಾಚೆಗಿನ ಹೇಳಿಕೆಗಳು ಭಾರತದ ಚುನಾವಣೆಯ ಮೇಲೆ ಪರಿಣಾಮ ಬೀಳುವುದಿಲ್ಲ ಎಂದರು.

ಭಾರತದ ಚುನಾವಣೆ ಹಾಗೂ ಭಾರತದ ಪ್ರಜಾಪ್ರಭುತ್ವ ಬಹಳ ಪ್ರಬುದ್ಧವಾಗಿದೆ. ಆರೋಗ್ಯಕರ ಸಂಪ್ರದಾಯಗಳನ್ನು ಹೊಂದಿದೆ. ಭಾರತದ ಮತದಾರರು ಯಾವುದೇ ಹೊರಗಿನ ಚಟುವಟಿಕೆಗೆ ಪ್ರಭಾವಿತರಾಗಿ ಮತ ಚಲಾಯಿಸಲಾರರು ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News