1,600 ಕೋಟಿ ರೂ.ಗಳ ವಂಚನೆಯ ಪ್ಯಾರಾಬಾಲಿಕ್ ಡ್ರಗ್ಸ್ ಪ್ರಕರಣ: ಅಶೋಕ ವಿವಿ ಸ್ಥಾಪಕರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಈ.ಡಿ. ದಾಳಿ
Update: 2023-10-27 15:00 GMT
ಹೊಸದಿಲ್ಲಿ: ಪ್ಯಾರಾಬಾಲಿಕ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ.)ವು ಶುಕ್ರವಾರ ಅಶೋಕ ವಿವಿಯ ಸ್ಥಾಪಕರಿಗೆ ಸಂಬಂಧಿಸಿದ ದೇಶದ ಹಲವು ಕಡೆಗಳಲ್ಲಿ ದಾಳಿಗಳನ್ನು ನಡೆಸಿದೆ. ಈ.ಡಿ.ಅಕ್ರಮ ಹಣ ವರ್ಗಾವಣೆ (ತಡೆ) ಕಾನೂನಿನಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ.
ದಿಲ್ಲಿ,ಮುಂಬೈ,ಚಂಡಿಗಡ,ಪಂಚಕುಲಾ ಮತ್ತು ಅಂಬಾಲಾಗಳಲ್ಲಿಯ 17 ಸ್ಥಳಗಳಲ್ಲಿ ಈ.ಡಿ.ದಾಳಿಗಳನ್ನು ನಡೆಸಿದೆ.
ಪ್ಯಾರಾಬಾಲಿಕ್ ಡ್ರಗ್ಸ್ ಪ್ರೈ.ಲಿ.ನ ನಿರ್ದೇಶಕರು ಮತ್ತು ಪ್ರವರ್ತಕರಾದ ಪ್ರಣವ ಗುಪ್ತಾ ಮತ್ತು ವಿನೀತ ಗುಪ್ತಾ ಅವರು 1,600 ಕೋ.ರೂ.ಗಳ ಬ್ಯಾಂಕ್ ವಂಚನೆಯನ್ನು ಎಸಗಿದ್ದಾರೆ ಎಂದು ಹೇಳಲಾಗಿದೆ.
ಪ್ರಣವ ಗುಪ್ತಾ ಮತ್ತು ವಿನೀತ ಗುಪ್ತಾ ಅಶೋಕ ವಿವಿಯ ಸ್ಥಾಪಕರಾಗಿದ್ದಾರೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.