ಶೇ. 95 ಪ್ರಕರಣ ಪ್ರತಿಪಕ್ಷದ ನಾಯಕರ ವಿರುದ್ಧ ದಾಖಲು : ಸುಪ್ರಿಯಾ ಸುಳೆ ಆರೋಪ
Update: 2024-01-24 17:12 GMT
ಮುಂಬೈ : ಸಂಸತ್ತಿನಲ್ಲಿ ಮಂಡಿಸಲಾದ ಸರಕಾರದ ದತ್ತಾಂಶದಂತೆ ಕೇಂದ್ರ ತನಿಖಾ ಸಂಸ್ಥೆಗಳು ಶೇ. 95ರಷ್ಟು ಪ್ರಕರಣಗಳು ಪ್ರತಿಪಕ್ಷದ ನಾಯಕರ ವಿರುದ್ಧ ದಾಖಲಿಸಿದೆ ಎಂದು ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು ಬುಧವಾರ ಪ್ರತಿಪಾದಿಸಿದ್ದಾರೆ.
ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು ಹಾಗೂ ಅಂತಿಮವಾಗಿ ಸತ್ಯ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.
ಶಾಸಕ ರೋಹಿತ್ ಪವಾರ್ ಅವರೊಂದಿಗೆ ಜಾರಿ ನಿರ್ದೇಶನಾಲಯಕ್ಕೆ ತೆರಳುತ್ತಿದ್ದ ಸಂದರ್ಭ ದಕ್ಷಿಣ ಮುಂಬೈಯಲ್ಲಿರುವ ಪಕ್ಷದ ಕಚೇರಿಯ ಹೊರಗೆ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
‘‘ಸತ್ಯಮೇವ ಜಯತೆ. ಇದು ಹೋರಾಟದ ಅವಧಿಯಾಗಿದೆ. ಭವಿಷ್ಯದಲ್ಲಿ ಸವಾಲುಗಳಿವೆ. ಆದರೆ, ನಾವು ಅವುಗಳನ್ನು ಜಯಿಸುತ್ತೇವೆ. ನಾವು ಹೋರಾಡುತ್ತೇವೆ. ಆದರೆ, ಸತ್ಯದ ಹಾದಿಯಲ್ಲಿ ನಡೆಯುವುದನ್ನು ಮುಂದುವರಿಸುತ್ತೇವೆ. ಈ ಹೋರಾಟ ಮಹಾರಾಷ್ಟ್ರದ ಹೆಮ್ಮೆ’’ ಎಂದು ಸುಪ್ರಿಯಾ ಸುಳೆ ಹೇಳಿದರು.