ಪ್ರಧಾನಿ ಮೋದಿ 2 ದಿನಗಳ ಫ್ರಾನ್ಸ್ ಪ್ರವಾಸ ಇಂದು ಆರಂಭ

Update: 2023-07-13 07:53 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಆರಂಭಿಸಿದ್ದಾರೆ. ಇಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಪ್ಯಾರಿಸ್ ಗೆ ತೆರಳಿದರು.

ಮೋದಿ ಅವರು ನಾಳೆ ನಡೆಯಲಿರುವ ಫ್ರಾನ್ಸ್ ರಾಷ್ಟ್ರೀಯ ದಿನವಾದ ಬಾಸ್ಟಿಲ್ ಡೇ ಆಚರಣೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ತೆರಳಿದ್ದಾರೆ.

ಈ ಕಾರ್ಯಕ್ರಮ ಪರೇಡ್ ನಲ್ಲಿ ಭಾರತದ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಸೇನೆಯ ತುಕಡಿಗಳು ಭಾಗವಹಿಸಲಿವೆ. 2015ರಲ್ಲಿ ಫ್ರಾನ್ಸ್ ನಿಂದ ಖರೀದಿಸಲಾಗಿರುವ 36 ರಫೆಲ್ ಜೆಟ್ ಗಳ ಪೈಕಿ 2 ಜೆಟ್ ಗಳು ಈ ಪರೇಡ್ ನಲ್ಲಿ ತಾಲೀಮು ನಡೆಸಲಿವೆ

ಫ್ರಾನ್ಸ್ ನಲ್ಲಿರುವ ಭಾರತೀಯ ಸಮುದಾಯ ಹಾಗೂ ಉನ್ನತ ಮಟ್ಟದ ಸಿಇಒ ಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News