ರಾಜಸ್ಥಾನ: ನಿಂತಿದ್ದ ಟ್ರಕ್ ಗೆ ಜೀಪ್ ಢಿಕ್ಕಿ: ಐವರು ಪೊಲೀಸರು ಸಾವು

Update: 2023-11-19 17:09 GMT

ಸಾಂದರ್ಭಿಕ ಚಿತ್ರ | Photo: PTI

ಜೈಪುರ : ನಿಂತಿದ್ದ ಟ್ರಕ್ ಗೆ ಪೊಲೀಸ್ ಜೀಪ್ ಢಿಕ್ಕಿಯಾಗಿ ಅದರಲ್ಲಿದ್ದ ಐವರು ಪೊಲೀಸರು ಮೃತಪಟ್ಟ ಘಟನೆ ಚುರು ಜಿಲ್ಲೆಯ ಸುಜಾನ್ಗಢ ಸದಾರ್ ಪೊಲೀಸ್ ಠಾಣಾ ಪ್ರದೇಶದಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ.

ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ಜೀಪ್ ನಲ್ಲಿ ತಾರಾನಗರಕ್ಕೆ ತೆರಳುತ್ತಿದ್ದರು ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ಚುರು ಪೊಲೀಸ್ ಅಧೀಕ್ಷಕ ಪ್ರವೀಣ್ ನಾಯಕ್ ತಿಳಿಸಿದ್ದಾರೆ.

ಮೃತಪಟ್ಟವರನ್ನು ಖಿನ್ವಸರ್ ಪೊಲೀಸ್ ಠಾಣೆಯ ಎಎಸ್ಐ ರಾಮಚಂದ್ರ, ಕಾನ್ಸ್ಟೆಬಲ್ ಗಳಾದ ಕುಂಭರಾಮ್, ಸುರೇಶ್ ಮೀನಾ, ಥಾನಾರಾಮ್ ಹಾಗೂ ಮಹೇಂದ್ರ ಎಂದು ಗುರುತಿಸಲಾಗಿದೆ.

ಘಟನೆ ಕುರಿತಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ. ‘‘ಚುರುವಿನ ಸುಜಾನ್ಗಢ ಸದಾರ್ ಪ್ರದೇಶದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಪೊಲೀಸರು ಮೃತಪಟ್ಟ ಸುದ್ದಿಯನ್ನು ಇಂದು ಮುಂಜಾನೆ ಸ್ವೀಕರಿಸಿದೆ. ಅಪಘಾತದಲ್ಲಿ ಮೃತಪಟ್ಟ ಎಲ್ಲಾ ಪೊಲೀಸರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖವಾಗಲಿ ಎಂದು ಹಾರೈಸುತ್ತೇನೆ’’ ಎಂದು ಅಶೋಕ್ ಗೆಹ್ಲೋಟ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News