ರಾಜಸ್ಥಾನ: ನೀಟ್ ಆಕಾಂಕ್ಷಿ ಆತ್ಮಹತ್ಯೆ

Update: 2024-06-06 15:13 GMT

ಸಾಂದರ್ಭಿಕ ಚಿತ್ರ

ಕೋಟಾ: ನೀಟ್-ಯುಜಿ ಫಲಿತಾಂಶ ಪ್ರಕಟವಾದ ಒಂದು ದಿನದ ಬಳಿಕ 18 ವರ್ಷದ ನೀಟ್ ಆಕಾಂಕ್ಷಿಯೊಬ್ಬಳು ಇಲ್ಲಿನ ಕಟ್ಟಡದ 9ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತಪಟ್ಟ ನೀಟ್ ಆಕಾಂಕ್ಷಿಯನ್ನು ಬಾಗೀಶಾ ತಿವಾರಿ ಎಂದು ಗುರುತಿಸಲಾಗಿದೆ. ಇಲ್ಲಿನ ಕಟ್ಟಡದ 5ನೇ ಮಹಡಿಯಲ್ಲಿ ತನ್ನ ತಾಯಿ ಹಾಗೂ ಸಹೋದರನೊಂದಿಗೆ ವಾಸಿಸುತ್ತಿದ್ದ ಈಕೆ ಬುಧವಾರ 9ನೇ ಮಹಡಿಯಿಂದ ಕೆಳಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆ ಗಂಟೆಗಳ ಬಳಿಕ ಸಾವನ್ನಪ್ಪಿದಳು ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯವರಾದ ಬಾಗೀಶಾ ತಿವಾರಿ ಅವರು ಕೋಟಾದ ತರಬೇತು ಕೇಂದ್ರವೊಂದರಲ್ಲಿ ನೀಟ್-ಯುಜಿಗೆ ತರಬೇತಿ ಪಡೆಯುತ್ತಿದ್ದಳು.

12ನೇ ತರಗತಿಯಲ್ಲಿ ಕಲಿಯುತ್ತಿರುವ ಆಕೆಯ ಸಹೋದರ ಕೂಡ ಜೆಇಇಗೆ ಸಿದ್ಧತೆ ನಡೆಸುತ್ತಿದ್ದ ಎಂದು ಜವಾಹರ್ ನಗರ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹರಿನಾರಾಯಣ ಶರ್ಮಾ ಅವರು ಗುರುವಾರ ತಿಳಿಸಿದ್ದಾರೆ.

ದೇಶದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತು ಕೇಂದ್ರವಾದ ಕೋಟಾದಲ್ಲಿ ಈ ವರ್ಷ ಜನವರಿಯಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ 10ನೇ ಪ್ರಕರಣ ಇದಾಗಿದೆ. ಕಳೆದ ವರ್ಷ ಇಲ್ಲಿ ಕೋಚಿಂಗ್ ಪಡೆಯುತ್ತಿದ್ದ 26 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News