ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಪ್ರಕರಣ: ಏಳು ಆರೋಪಿಗಳು ದೋಷಿ, ಇಬ್ಬರಿಗೆ 20 ವರ್ಷ ಜೈಲು ಸಜೆ

Update: 2023-07-07 07:17 GMT

Photo: Twitter@NDTV

ಜೋಧ್ಪುರ (ರಾಜಸ್ಥಾನ): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಪಾಲಿ ಜಿಲ್ಲೆಯ ನ್ಯಾಯಾಲಯವು ಏಳು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಜೈಲಿಗೆ ಕಳುಹಿಸಿದೆ.

ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಗುಪ್ತಾ ಅವರು ಪ್ರಮುಖ ಆರೋಪಿ 42 ವರ್ಷದ ದುಂಗರಾಮ್ ಹಾಗೂ ಸಂತ್ರಸ್ತೆಯ 21 ವರ್ಷದ ಸ್ನೇಹಿತೆ ರೋಷ್ನಾಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

ಬಾಲಕಿಯ ಗರ್ಭಪಾತ ಮಾಡಿದ ವೈದ್ಯರು ಸೇರಿದಂತೆ ಇತರ ನಾಲ್ವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ದುಂಗರಾಮ್ ಪತ್ನಿ ನಾಟ್ಕಿ ದೇವಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ದುಂಗರಾಮ್ , ತನ್ನ ಗೆಳತಿ ರೋಶ್ನಾ ನೆರವು ಪಡೆದು ಸಂತ್ರಸ್ತೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ತಾನು ನಿನ್ನ ಸಹೋದರನಂತೆ ಎಂದು ಬಾಲಕಿಯ ಪುಸಲಾಯಿಸಿದ್ದ ಆರೋಪಿಯು ನಂತರ ರೋಶ್ನಾ ನೆರವಿನಿಂದ 2020ರಿಂದ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ನೆಹ್ರಾ ಹೇಳಿದ್ದಾರೆ.

ಡಾ. ಚಿರಾಗ್ ಪರ್ಮಾರ್, ಶಂಕರಲಾಲ್, ರೋಷ್ನಾ ತಂದೆ ಮಂಗಿಲಾಲ್ ಹಾಗೂ ಸೀತಾ ದೇವಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನಟ್ಕಿ ದೇವಿಯ ಸಂಬಂಧಿ ರಾಣಾರಾಮ್ ಎಂದು ಗುರುತಿಸಲಾದ ಇತರ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News