ರಾಜ್ಯಪಾಲರನ್ನು ತಕ್ಷಣ ವಾಪಸ್ ಕರೆಸಿಕೊಳ್ಳಿ ; ರಾಷ್ಟ್ರಪತಿಗಳಿಗೆ ಕೇರಳ ಸಿಎಂ ಪತ್ರ

Update: 2023-12-21 17:00 GMT

ಪಿಣರಾಯಿ ವಿಜಯನ್ | Photo: PTI 

ತಿರುವನಂತಪುರ: ವಿವಿಗಳ ಸೆನೆಟ್‌ ಗಳಿಗೆ ನಾಮ ನಿರ್ದೇಶನಗಳು ಮತ್ತು ಶಾಸಕಾಂಗವು ಅಂಗೀಕರಿಸಿರುವ ಮಸೂದೆಗಳಿಗೆ ಸಹಿ ಹಾಕುವಲ್ಲಿ ರಾಜ್ಯಪಾಲರಿಂದ ವಿಳಂಬದ ಕುರಿತು ಕೇರಳ ಸರಕಾರ ಮತ್ತು ರಾಜಭವನದ ನಡುವಿನ ಸುದೀರ್ಘ ಬಿಕ್ಕಟ್ಟು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವನ್ನು ಬರೆಯುವುದರೊಂದಿಗೆ ಗುರುವಾರ ಉತ್ತುಂಗಕ್ಕೇರಿದೆ.

ಖಾನ್ ಮತ್ತು ವಿಜಯನ್ ನಡುವಿನ ತೀವ್ರ ಭಿನ್ನಾಭಿಪ್ರಾಯವು ಆಗಾಗ್ಗೆ ಬಹಿರಂಗ ವಾಗ್ಯುದ್ಧಕ್ಕೆ ಕಾರಣವಾಗಿತ್ತು ಮತ್ತು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳೂ ಕೇಳಿ ಬಂದಿದ್ದವು. ಸಂಪ್ರದಾಯಕ್ಕೆ ಹೊರತಾದ ಸರಕಾರದ ಈ ಬೇಡಿಕೆಯಿಂದಾಗಿ ಈಗ ಚೆಂಡು ರಾಷ್ಟ್ರಪತಿಗಳ ಅಂಗಳದಲ್ಲಿದೆ.

ರಾಜ್ಯ ಅನುದಾನಿತ ವಿವಿಗಳ ಸೆನೆಟ್‌ ಗಳಲ್ಲಿ ಸಂಘ ಪರಿವಾರದ ನಾಮ ನಿರ್ದೇಶಿತರನ್ನು ನೇಮಕಗೊಳಿಸುವ ರಾಜ್ಯಪಾಲರ ಪ್ರಯತ್ನಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಖಾನ್ ಅವರ ರೂಢಿಗೆ ವಿರುದ್ಧವಾದ ವರ್ತನೆಯು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಸರಕಾರವು ಕೇಂದ್ರವನ್ನು ಆಗ್ರಹಿಸಲು ಪ್ರೇರೇಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News