ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

Update: 2025-01-09 16:09 GMT

ಸಾಂದರ್ಭಿಕ ಚಿತ್ರ | PC: NDTV 

ಮುಂಬೈ : ಗುರುವಾರ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಒಂದು ಪೈಸೆ ಕೆಳಗಿಳಿದು 85.92 ರೂಪಾಯಿಯಲ್ಲಿ ನೆಲೆಗೊಂಡಿತು. ಇದು ರೂಪಾಯಿಯ ಸಾರ್ವಕಾಲಿಕ ಗರಿಷ್ಠ ಕುಸಿತವಾಗಿದೆ.

ಬಲಿಷ್ಠ ಡಾಲರ್ ಮತ್ತು ಅಧಿಕ ಕಚ್ಚಾತೈಲ ಬೆಲೆಯಿಂದಾಗಿ ಸತತ ಮೂರನೇ ದಿನವೂ ಭಾರತೀಯ ಕರೆನ್ಸಿ ಇಳಿಮುಖದ ದಾರಿಯಲ್ಲಿ ಸಾಗಿತು.

ಅಮೆರಿಕದ ಬಾಂಡ್‌ಗಳಿಂದ ಬರುವ ಪ್ರತಿಫಲ ಹೆಚ್ಚಳವಾಗಿದೆ ಮತ್ತು ಭಾರತದಿಂದ ವಿದೇಶಿ ನಿಧಿಗಳು ನಿರಂತರವಾಗಿ ಹೊರಗೆ ಹರಿದು ಹೋಗುತ್ತಿವೆ. ಇದು ಅಮೆರಿಕದ ಕರೆನ್ಸಿಯನ್ನು ಬಲಿಷ್ಠಗೊಳಿಸಿದೆ. ಕುಸಿಯುತ್ತಿರುವ ಭಾರತೀಯ ಶೇರು ಮಾರುಕಟ್ಟೆಗಳು ರೂಪಾಯಿ ಮೌಲ್ಯವನ್ನು ಕೆಳಗೆ ತಳ್ಳಿವೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.

ಅಂತರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ವ್ಯವಹಾರವು ಐತಿಹಾಸಿಕ ಕನಿಷ್ಠವಾದ ಡಾಲರ್‌ಗೆ 85.94 ರಿಂದ ಆರಂಭಗೊಂಡಿತು. ಬಳಿಕ, ದಿನದ ವ್ಯವಹಾರ ಮುಗಿಯುವ ವೇಳೆಗೆ ಅದು ಡಾಲರ್‌ಗೆ 85.92ಕ್ಕೆ ಏರಿತು. ಇದು ನಿನ್ನೆಯ ಮುಕ್ತಾಯಕ್ಕಿಂತ ಒಂದು ಪೈಸೆಯಷ್ಟು ಕಡಿಮೆಯಾಗಿದೆ.

ಬುಧವಾರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 17 ಪೈಸೆಯಷ್ಟು ಕೆಳಗಿಳಿದು ಸಾರ್ವಕಾಲಿಕ ಕನಿಷ್ಠವಾದ 85.91ರಲ್ಲಿ ನೆಲೆಗೊಂಡಿತ್ತು .

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News