ತಾಯಿ ಬೈದಿದ್ದಕ್ಕೆ ಮನೆ ಬಿಟ್ಟು ತೆರಳಿದ್ದ 13 ವರ್ಷದ ಬಾಲಕನನ್ನು ರಕ್ಷಿಸಿದ ರೈಲ್ವೆ ಪೊಲೀಸರು

Update: 2024-07-23 06:19 GMT

ಸಾಂದರ್ಭಿಕ ಚಿತ್ರ (PTI)

ಥಾಣೆ: ತಾಯಿಯ ಬೈಗುಳ ಮತ್ತು ಹೊಡೆತ ತಿಂದು ಬೇಸರಗೊಂಡು ಥಾಣೆಯಲ್ಲಿನ ತನ್ನ ಮನೆ ಬಿಟ್ಟು ಓಡಿ ಹೋಗಿದ್ದ 13 ವರ್ಷದ ಬಾಲಕನನ್ನು ರೈಲ್ವೆ ಪೊಲೀಸರ ಸಹಕಾರದೊಂದಿಗೆ ರಕ್ಷಿಸಿ ಆತನ ಕುಟುಂಬಕ್ಕೆ ಒಪ್ಪಿಸಲಾಗಿದೆ.

ಜುಲೈ 19ರ ಸಂಜೆ ಸರ್ಕಾರಿ ರೈಲ್ವೆ ಪೊಲೀಸರ ನಿರ್ಭಯಾ ಸೆಲ್ ಥಾಣೆ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 6ರಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಬಾಲಕನೊಬ್ಬ ಅಲ್ಲಿನ ಬೆಂಚ್ ಒಂದರಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ. ಪೊಲೀಸರು ಆತನ ಬಳಿ ಹೋಗಿ ವಿಚಾರಿಸಿದಾಗ ತಾಯಿ ಹೊಡೆದರೆಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದ.

ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ಆತನಿಗೆ ಬುದ್ಧಿ ಹೇಳಿ ಆತನ ಹೆತ್ತವರನ್ನು ಠಾಣೆಗೆ ಬರಲು ತಿಳಿಸಲಾಯಿತು. ಆತನ ತಂದೆ ತಕ್ಷಣ ಬಂದಿದ್ದರು, ಅವರೇ ಆತನ ತಂದೆ ಎಂದು ದೃಢಪಟ್ಟ ನಂತರ ನಂತರ ಬಾಲಕನನ್ನು ಅವರೊಂದಿಗೆ ಕಳುಹಿಸಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News