ಲೋಕಸಭೆಯಲ್ಲಿ ಟೆಲಿಕಾಂ ಮಸೂದೆ ಅಂಗೀಕಾರ

Update: 2023-12-20 16:37 GMT

ಲೋಕಸಭೆ | Photo : ANI 

ಹೊಸದಿಲ್ಲಿ: ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ ಟೆಲಿಕಾಂ ಸೇವೆಗಳನ್ನು ತಾತ್ಕಾಲಿಕವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸರಕಾರಕ್ಕೆ ಅವಕಾಶ ನೀಡುವ ಹಾಗೂ ಉಪಗ್ರಹ ತರಂಗ ಗುಚ್ಛ ಮಂಜೂರಿಗೆ ಹರಾಜು ರಹಿತ ದಾರಿ ಒದಗಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಸಾರ್ವಜನಿಕ ಸುರಕ್ಷೆಯ ಹಿತಾಸಕ್ತಿ ಅಥವಾ ಯಾವುದೇ ಸಾರ್ವಜನಿಕ ತುರ್ತು ಸಂದರ್ಭ ಟೆಲಿಕಾಂ ನೆಟವರ್ಕ್ ಅನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಅವಕಾಶವನ್ನು ಕೂಡ ಕೇಂದ್ರ ಸರಕಾರಕ್ಕೆ ನೀಡುವ ಟೆಲಿಕಮ್ಯೂನಿಕೇಶನ್ ಮಸೂದೆ-2023 ಅನ್ನು ಸಣ್ಣ ಚರ್ಚೆಯ ಬಳಿಕ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಸಂವಹನ ಸಚಿವ ಅಶ್ವಿನಿ ವೈಷ್ಣವ್ ಮಂಡಿಸಿದ ಮಸೂದೆಯು ಅಪರಾಧ ಎಸಗುವುದಕ್ಕೆ ಪ್ರಚೋದನೆ ನೀಡುವುದನ್ನು ತಡೆಯಲು ಸಾರ್ವಜನಿಕ ಹಿತಾಸಕ್ತಿಯಿಂದ ಸಾರ್ವಜನಿಕ ತುರ್ತು ಸಂದರ್ಭದಲ್ಲಿ ಸಂದೇಶ ಪ್ರಸರಣವನ್ನು ನಿಲ್ಲಿಸುವ ಹಾಗೂ ಮಧ್ಯಪ್ರವೇಶಿಸುವ ಅವಕಾಶವನ್ನು ಒದಗಿಸುತ್ತದೆ.

ಈ ಮಸೂದೆ ಟೆಲಿಕಾಂ ವಲಯದಲ್ಲಿ ರಚನಾತ್ಮಕ ಸುಧಾರಣೆಯನ್ನು ಉತ್ತೇಜಿಸಲಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News