ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಅರ್ಜಿ ಆದೇಶವನ್ನು ಜುಲೈ 21ಕ್ಕೆ ಕಾಯ್ದಿರಿಸಿದ ನ್ಯಾಯಾಲಯ
ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತ ತನ್ನ ಆದೇಶವನ್ನು ವಾರಣಾಸಿ ನ್ಯಾಯಾಲಯ ಶುಕ್ರವಾರ ಜುಲೈ 21ಕ್ಕೆ ಕಾಯ್ದಿರಿಸಿದೆ. ಸಂಪೂರ್ಣ ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
‘ವುಝೂಖಾನಾ’ವನ್ನು ಹೊರತುಪಡಿಸಿ ಸಂಪೂರ್ಣ ಜ್ಞಾನವಾಪಿ ಮಸೀದಿ ಸಂಕೀರ್ಣದ ಪುರಾತತ್ವ ಹಾಗೂ ವೈಜ್ಞಾನಿಕ ತನಿಖೆ ನಡೆಸುವಂತೆ ಆಗ್ರಹಿಸಿ ನಾವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆವು. ಎರಡು ಕಡೆಯವರ ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಜುಲೈ 21ಕ್ಕೆ ಕಾಯ್ದಿರಿಸಿದೆ ಎಂದು ಹಿಂದೂ ಸಮುದಾಯದ ಪರ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.
ಸಂಪೂರ್ಣ ಮಸೀದಿ ಸಂಕೀರ್ಣವನ್ನು ಪುರಾತತ್ವ ಇಲಾಖೆಯಿಂದ ತನಿಖೆ ನಡೆಸುವ ಮೂಲಕ ಮಾತ್ರ ಕಾಶಿ ವಿಶ್ವನಾಥ ದೇವಾಲಯ-ಜ್ಞಾನವ್ಯಾಪಿ ಮಸೀದಿಯ ವಿವಾದವನ್ನು ಬಗೆಹರಿಸಬಹುದು ಎಂದು ತಾನು ವಾದಿಸಿದ್ದೇನೆ ಎಂದು ಜೈನ್ ಹೇಳಿದ್ದಾರೆ.