ಅಸ್ಸಾಂನಿಂದ ವಿಶೇಷ ಪಡೆಗಳ ವಿಶೇಷಾಧಿಕಾರ ಕಾಯಿದೆ ಸಂಪೂರ್ಣ ವಾಪಸ್‌ ಪಡೆಯಲು ಶಿಫಾರಸು ಮಾಡಿದ ರಾಜ್ಯ ಸರ್ಕಾರ

Update: 2023-09-09 17:03 GMT

 ಹಿಮಂತ ಬಿಸ್ವ ಶರ್ಮ | Photo: PTI 

ಗುವಹಾಟಿ: ಅಸ್ಸಾಂ ರಾಜ್ಯದಲ್ಲಿ ಅಕ್ಟೋಬರ್‌ 1ರಿಂದ ಅಸ್ಸಾಂ ಪಡೆಗಳ (ವಿಶೇಷಾಧಿಕಾರ) ಕಾಯಿದೆ 1958 ಅನ್ನು ಸಂಪೂರ್ಣವಾಗಿ ವಾಪಸ್‌ ಪಡೆಯಲು ಕೇಂದ್ರ ಸರಕಾರಕ್ಕೆಅಸ್ಸಾಂ ಸರ್ಕಾರ ಶಿಫಾರಸು ಮಾಡಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಿರುವುದರಿಂದ ಈ ಕಾಯಿದೆಯನ್ನು ಉಳಿದ ಎಂಟು ಜಿಲ್ಲೆಗಳಿಂದ ವಾಪಸ್‌ ಪಡೆಯಲು ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿದೆ ಎಂದು ಸರ್ಮ ಹೇಳಿದ್ದಾರೆ.

ಆದರೆ ಅಂತಿಮ ನಿರ್ಧಾರವನ್ನು ಭಾರತ ಸರ್ಕಾರ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಈ ಕಾಯಿದೆಯನ್ವಯ ಭದ್ರತಾ ಪಡೆಗಳು ಯಾವುದೇ ವಾರಂಟ್‌ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸಬಹುದಾಗಿದೆ ಹಾಗೂ ಯಾರನ್ನಾದರೂ ಗುಂಡಿಕ್ಕಿ ಹಾರಿಸಿದರೂ ಭದ್ರತಾ ಪಡೆಗಳ ಯಾರನ್ನೇ ಆದರೂ ಬಂಧಿಸುವುದು ಅಥವಾ ಕಾನೂನು ಕ್ರಮಕೈಗೊಳ್ಳುವಂತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News