ಯುಜಿಸಿ-ನೆಟ್ ಪರೀಕ್ಷೆ ರದ್ದು: ಸರಕಾರದ ನಿರ್ಧಾರ ಪ್ರಶ್ನಿಸಿದ್ದ ಪಿಐಎಲ್ ಗೆ ಸುಪ್ರೀಂ ತಿರಸ್ಕಾರ
ಹೊಸದಿಲ್ಲಿ: ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣದಿಂದ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿದ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.
ಅರ್ಜಿಯನ್ನು ವಕೀಲರೋರ್ವರು ಸಲ್ಲಿಸಿದ್ದಾರೆ,ನೊಂದ ವಿದ್ಯಾರ್ಥಿಗಳಲ್ಲ .ಹೀಗಾಗಿ ಅದರ ವಜಾಗೊಳಿಸುವಿಕೆಯು ಪಿಐಎಲ್ನ ಅರ್ಹತೆಗಳ ಕುರಿತು ನಿರ್ಧಾರ ಎಂದು ಪರಿಗಣಿಸಬೇಕಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು,ನೀವೇಕೆ ಬರುತ್ತಿದ್ದೀರಿ?ವಿದ್ಯಾರ್ಥಿಗಳೇ ಇಲ್ಲಿಗೆ ಬರಲಿ ಎಂದು ಅರ್ಜಿದಾರರಿಗೆ ತಿಳಿಸಿತು.
ಕೇಂದ್ರ ಶಿಕ್ಷಣ ಸಚಿವಾಲಯವು ಜೂ.19ರಂದು ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿತ್ತು ಮತ್ತು ವಿಷಯವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿತ್ತು.
ಪ್ರಶ್ನೆಪತ್ರಿಕೆ ಆರೋಪಗಳ ಕುರಿತು ತನ್ನ ತನಿಖೆಯನ್ನು ಸಿಬಿಐ ಪೂರ್ಣಗೊಳಿಸುವವರೆಗೆ ಉದ್ದೇಶಿತ ಯುಜಿಸಿ-ನೆಟ್ ಮರುಪರೀಕ್ಷೆಯನ್ನು ತಕ್ಷಣವೇ ತಡೆಹಿಡಿಯುವಂತೆಯೂ ಅರ್ಜಿದಾರರು ಕೋರಿದ್ದರು.