ಉತ್ತರ ಪ್ರದೇಶ | ವಿವಾಹ ಮೆರವಣಿಗೆಗೆ ತಡೆಯೊಡ್ಡಿದ ಮೇಲ್ಜಾತಿ ಸಮುದಾಯ

Update: 2024-10-12 13:46 GMT

ಸಾಂದರ್ಭಿಕ ಚಿತ್ರ

ಬರೇಲಿ : ವಿವಾಹ ಮೆರವಣಿಗೆಯೊಂದರಲ್ಲಿ ಧ್ವನಿವರ್ಧಕದ ಮೂಲಕ ಪ್ರಸಾರ ಮಾಡಲಾಗುತ್ತಿದ್ದ ಕೆಲವು ನಿರ್ದಿಷ್ಟ ಗೀತೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಮೇಲ್ಜಾತಿ ಸಮುದಾಯವೊಂದು, ವಿವಾಹ ಮೆರವಣಿಗೆಯು ಗ್ರಾಮ ಪ್ರವೇಶಿಸದಂತೆ ತಡೆಯೊಡ್ಡಿರುವ ಘಟನೆ ಸಿರೌಲಿ ಪ್ರದೇಶದ ಗಿರಿಧರ್ ಪುರ್ ಗ್ರಾಮದಲ್ಲಿ ಶನಿವಾರ ನಡೆದಿದೆ.

ನಂತರ, ಮಧ್ಯಪ್ರವೇಶಿಸಿರುವ ಪೊಲೀಸರು, ಗ್ರಾಮಸ್ಥರ ಮನವೊಲಿಸಿ, ವಿವಾಹ ಮೆರವಣಿಗೆ ಗ್ರಾಮ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದಾರೆ ಎಂದು ವರದಿಯಾಗಿದೆ. ವರನ ಕಡೆಯುವರು ವಿವಾಹ ಮೆರವಣಿಗೆಯ ಸಂದರ್ಭದಲ್ಲಿ ಪ್ರಸಾರ ಮಾಡಿದ ಕೆಲವು ಗೀತೆಗಳಿಂದ ಮೇಲ್ಜಾತಿ ಸಮುದಾಯದ ಸದಸ್ಯರು ಸಿಟ್ಟಿಗೆದ್ದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ವಿವಾಹ ಮೆರವಣಿಗೆಯು ಸುರಕ್ಷಿತವಾಗಿ ಗ್ರಾಮ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು ಎಂದು ಸಿರೌಲಿ ಪೊಲೀಸ್ ಠಾಣಾಧಿಕಾರಿ ಪ್ರಯಾಗ್ ರಾಜ್ ಸಿಂಗ್ ತಿಳಿಸಿದ್ದಾರೆ.

ಘಟನೆಯ ಮಧ್ಯಪ್ರವೇಶಿಸಿದ ಪೊಲೀಸರು, ಎರಡು ಗುಂಪುಗಳ ನಡುವೆ ರಾಜಿಸಂಧಾನ ನಡೆಸಿ, ಮೆರವಣಿಗೆಯು ಸುರಕ್ಷಿತವಾಗಿ ಗ್ರಾಮ ಪ್ರವೇಶಿಸಲು ಅನುವು ಮಾಡಿಕೊಟ್ಟರು ಎಂದು ಸಿಂಗ್ ಹೇಳಿದ್ದಾರೆ.

ಈ ಘಟನೆಯ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಳ್ಳಲಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News