ಜಾರ್ಖಂಡ್ ವಿಧಾನಸಭಾ ಚುನಾವಣೆ | ನೀತಿ ಸಂಹಿತೆ ಬಳಿಕ ಸೀಟು ಹಂಚಿಕೆ ಕುರಿತು ಮಾತುಕತೆ: ಕಾಂಗ್ರೆಸ್ ಅಧ್ಯಕ್ಷ

Update: 2024-10-12 13:47 GMT

ರಾಹುಲ್ ಗಾಂಧಿ ,ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಪಿಸಿಸಿ) ಅಧ್ಯಕ್ಷ ಕೇಶವ್ ಮಹ್ತೊ ಕಮಲೇಶ್  ಮತ್ತು ಮಲ್ಲಿಕಾರ್ಜುನ ಖರ್ಗೆ  PC : X/@keshavmahtoINC

ರಾಂಚಿ : ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ, ಮೈತ್ರಿಪಕ್ಷಗಳೊಂದಿಗಿನ ಸೀಟು ಹಂಚಿಕೆಯ ಕುರಿತು ನಿರ್ಧರಿಸಲಾಗುವುದು ಎಂದು ಶನಿವಾರ ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೇಶವ್ ಮಹ್ತೊ ಕಮಲೇಶ್ ಹೇಳಿದ್ದಾರೆ.

ಹಾಲಿ ಜಾರ್ಖಂಡ್ ವಿಧಾನಸಭೆಯ ಅವಧಿ ಜನವರಿ 5, 2025ರಂದು ಅಂತ್ಯಗೊಳ್ಳಲಿದ್ದು, ಈ ವರ್ಷಾಂತ್ಯದಲ್ಲಿ 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಹ್ತೊ, “ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ, ಸೀಟು ಹಂಚಿಕೆಯ ಕುರಿತು ಮಿತ್ರಪಕ್ಷಗಳೊಮದಿಗೆ ಚರ್ಚಿಸಿ ನಿರ್ಧರಿಸಲಾಗುವುದು” ಎಂದು ತಿಳಿಸಿದ್ದಾರೆ.

ಮಿತ್ರಪಕ್ಷಗಳು ಒಗ್ಗಟ್ಟಾಗಿದ್ದು, ಜೆಎಂಎಂ ನೇತೃತ್ವದ ಸರಕಾರದೊಂದಿಗಿವೆ ಎಂದೂ ಅವರು ಹೇಳಿದ್ದಾರೆ.

ಈ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಂಚಿಗೆ ಆಗಮಿಸಲಿದ್ದಾರೆ ಎಂದು ಮಹ್ತೊ ತಿಳಿಸಿದರಾದರೂ, ರಾಹುಲ್ ಗಾಂಧಿಯ ರಾಂಚಿ ಭೇಟಿ ದಿನಾಂಕವಿನ್ನೂ ಅಂತಿಮಗೊಂಡಿಲ್ಲ ಎಂದೂ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News