ಹರ್ಯಾಣ: ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ವಿದ್ಯಾರ್ಥಿನಿಯರಿಗೆ ಒದಗಿಸಿದ್ದ ಉಚಿತ ಬಸ್ ಸೇವೆಯನ್ನು ಸ್ಥಗಿತಗೊಳಿಸಿದ ಮಾಜಿ ಶಾಸಕ

Update: 2024-10-12 10:44 GMT

PC : timesofindia.indiatimes.com

ಗುರ್ಗಾಂವ್: ಇತ್ತೀಚೆಗೆ ನಡೆದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ರೋಹ್ಟಕ್ ನ ಮೇಹಂ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡ ನಂತರ, ಬಾಲಕಿಯರಿಗೆ ಜಿಲ್ಲೆಯೊಳಗೆ ಶಾಲಾ-ಕಾಲೇಜುಗಳಿಗೆ ಸಂಚರಿಸಲು ಒದಗಿಸಲಾಗಿದ್ದ ಉಚಿತ ಬಸ್ ಸೇವೆಯನ್ನು ಮಾಜಿ ಶಾಸಕ ಬಾಲರಾಜ್ ಕುಂದು ಸ್ಥಗಿತಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹರ್ಯಾಣ ಜನಸೇವಕ್ ಪಕ್ಷದ ಮಾಜಿ ಶಾಸಕ ಬಾಲರಾಜ್ ಕುಂದು, ಹಾಲಿ ಚುನಾಯಿತ ಶಾಸಕರು ಈ ಸೇವೆಯನ್ನು ಒದಗಿಸಬೇಕು. ಇಂತಹ ಉತ್ತಮ ಸೇವೆಗೆ ಜನರು ಬೆಂಬಲಿಸಲಿಲ್ಲ ಎಂದು ನನ್ನ ಬೆಂಬಲಿಗರು ಅಸಮಾಧಾನಗೊಂಡಿದ್ದು, ಈ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದರು ಎಂದು ಬಾಲರಾಜ್ ಹೇಳಿದ್ದಾರೆ.

ಮೇಹಂ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಂದ ಬಾಲಕಿಯರನ್ನು ಶೈಕ್ಷಣಿಕ ಸಂಸ್ಥೆಗಳಿಗೆ ಕರೆದೊಯ್ಯಲು ಇಂತಹ 18 ಬಸ್ ಗಳಿದ್ದವು. ಈ ಸೇವೆಯನ್ನು 2017ರಲ್ಲಿ ಪ್ರಾರಂಭಿಸಿದ್ದ ಶಾಸಕ ಕುಂದು, ಮೊದಲಿಗೆ ಎಂಟು ಬಸ್ ಗಳನ್ನು ಪರಿಚಯಿಸಿ, ನಂತರ ಹೆಚ್ಚುವರಿ ಬಸ್ ಗಳನ್ನು ಸೇರ್ಪಡೆ ಮಾಡಿದ್ದರು.

2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ, ತಮ್ಮದೇ ಪಕ್ಷವನ್ನು ಸ್ಥಾಪಿಸಿ, ಅದರ ಚಿಹ್ನೆಯ ಮೇಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News