ಉತ್ತರ ಪ್ರದೇಶ: ಬಿಜೆಪಿಗೆ ಎಂಟು, ಎಸ್ಪಿಗೆ ಎರಡು ಸ್ಥಾನ

Update: 2024-02-27 17:21 GMT

Photo: PTI 

ಹೊಸದಿಲ್ಲಿ: ಉತ್ತರ ಪ್ರದೇಶದಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿದ್ದರೆ,ಶಾಸಕರಿಂದ ಅಡ್ಡ ಮತದಾನದ ಬಳಿಕ ಎಸ್ಪಿ ಎರಡು ಸ್ಥಾನಗಳನ್ನು ಗಳಿಸಿದೆ.

‘ನಮ್ಮ ಎಲ್ಲ ಎಂಟೂ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ನಾವು ಆರಂಭದಿಂದಲೇ ಹೇಳುತ್ತ ಬಂದಿದ್ದೆವು. ಇಂದು ನಮ್ಮ ಎಲ್ಲ ಎಂಟೂ ಅಭ್ಯರ್ಥಿಗಳು ಗೆದ್ದಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿಯ ವಿಜಯಯಾತ್ರೆಯು ಲೋಕಸಭಾ ಮತ್ತು ನಂತರದ ವಿಧಾನಸಭಾ ಚುನಾವಣೆಗಳಲ್ಲಿಯೂ ಮುಂದುವರಿಯಲಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಹೇಳಿದರು.

ಹಿಮಾಚಲ ಪ್ರದೇಶದ ಏಕೈಕ ಸ್ಥಾನ ಬಿಜೆಪಿಗೆ

68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕೇವಲ 25 ಶಾಸಕರನ್ನು ಹೊಂದಿದ್ದರೂ ಏಕೈಕ ರಾಜ್ಯಸಭಾ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಗೆ ಆಘಾತವನ್ನು ನೀಡಿದೆ. ಕಾಂಗ್ರೆಸ್ ಶಾಸಕರ ಅಡ್ಡ ಮತದಾನದಿಂದಾಗಿ ಬಿಜೆಪಿ ಸ್ಥಾನವನ್ನು ಗೆದ್ದುಕೊಂಡಿದೆ. ಸಮಾನ ಫಲಿತಾಂಶ ಬಂದಿದ್ದು,ಚೀಟಿ ಎತ್ತಿದಾಗ ವಿಜಯಲಕ್ಷ್ಮಿ ಬಿಜೆಪಿಗೆ ಒಲಿದಿದ್ದಳು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News