ಉ.ಪ್ರದೇಶ: ಅಪ್ರಾಪ್ತ ವಯಸ್ಕ ಬಾಲಕನ ಮತಾಂತರ,ಮೂವರು ವಶಕ್ಕೆ
Update: 2025-03-27 21:54 IST

ಸಾಂದರ್ಭಿಕ ಚಿತ್ರ
ಮುಝಫ್ಫರ್ನಗರ: ಇಲ್ಲಿಯ ಸಿವಿಲ್ ಲೈನ್ಸ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕನೋರ್ವನನ್ನು ಹಣದ ಆಮಿಷವೊಡ್ಡಿ ಇಸ್ಲಾಮ್ಗೆ ಮತಾಂತರಿಸಲಾಗಿದೆ ಎಂದು ಅಧಿಕಾರಿಯೋರ್ವರು ಗುರುವಾರ ತಿಳಿಸಿದರು.
ಆರೋಪಿಗಳಾದ ಇಮ್ರಾನ್,ನೂರ್ ಅಲಿ ಮತ್ತು ಮಾಂಗೆ ರಾಮ್ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸರ್ಕಲ್ ಆಫೀಸರ್ ರಾಜಕುಮಾರ ಸಾವ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಪೋಲಿಸರು ಬಿಎನ್ಎಸ್ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ,2021ರಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಾಲಕನ ತಂದೆಯು ಸಲ್ಲಿಸಿರುವ ದೂರಿನ ಪ್ರಕಾರ ಹಣಕ್ಕಾಗಿ ಮತಾಂತರಗೊಳ್ಳುವಂತೆ ಆತನ ಮೇಲೆ ಒತ್ತಡ ಹೇರಲಾಗಿತ್ತು. ಹಿಂದು ಕ್ಷೌರಿಕನೋರ್ವ ಬಾಲಕನಿಗೆ ಸುನ್ನತಿಯನ್ನೂ ಮಾಡಿದ್ದ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ತನಿಖೆಯು ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದರು.