ವಿಘ್ನೇಶ್ ಪುತ್ತೂರು ಬದುಕಿನ ಸ್ಪಿನ್ನರ್ ಶರೀಫ್ ಉಸ್ತಾದ್

Update: 2025-03-27 18:18 IST
Vignesh Puttur

ವಿಘ್ನೇಶ್ ಪುತ್ತೂರು | PC : PTI 

  • whatsapp icon

ಈ ಬಾರಿಯ IPL ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿ ಎದುರಾಳಿ ತಂಡದ ಪ್ರಮುಖ ಮೂರು ವಿಕೆಟ್ ಪಡೆದುಕೊಂಡ ವಿಗ್ನೇಶ್ ಪುತ್ತೂರು ಈಗ ಸೋಷಿಯಲ್ ಮಿಡಿಯ ಸ್ಟಾರ್. ಜೊತೆಗೆ ತನ್ನ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದಾರೆ

ವಿಗ್ನೇಶ್ ಪುತ್ತೂರು ಎಂಬ ಯುವ ಸ್ಪಿನ್ನರ್ ಗೆ ಮಾರ್ಚ್ 23 ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆದ ಮೊದಲ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಸಿಕ್ಕಿತ್ತು.ತಾನು ಎಸೆದ 24 ಚೆಂಡುಗಳಲ್ಲಿ 32 ರನ್ ಬಿಟ್ಟುಕೊಟ್ಟು ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ್ , ಹೊಡಿಬಡಿ ದಾಂಡಿಗ ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ವಿಕೆಟ್ ಗಳನ್ನು ಪಡೆದು ವಿಗ್ನೇಶ್ ಮಿಂಚಿದರು.

ತನ್ನ ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಈ ಯುವ ಆಟಗಾರನಿಗೆ ಮಹೇಂದ್ರಸಿಂಗ್ ದೋನಿ, ಕ್ರೀಡಾಂಗಣದಲ್ಲೇ ಬೆನ್ನುತಟ್ಟಿ ಶಹಬಾಸ್ ಎಂದಿದ್ದರು. ಅಲ್ಲದೆ ವಿಗ್ನೇಶ್ ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಗ್ನೇಶ್ ಪುತ್ತೂರು ಬಗ್ಗೆ ಹೆಚ್ಚಿನ ವಿವರ ಪಡೆಯಲು ಹುಡುಕಾಟ ಆರಂಭವಾಗಿತ್ತು.

18 ನೇ ಆವೃತ್ತಿಯ IPL ನಲ್ಲಿ ಸಣ್ಣ ದೇಹ, ಮುಖ ತುಂಬಾ ನಗು ಹೊತ್ತ ಅದ್ಬುತ ಬೌಲಿಂಗ್ ಶೈಲಿ ಯ ಈ ಆಟಗಾರ ವಿಗ್ನೇಶ್ ಪುತ್ತೂರು ಒಬ್ಬ ಅಟೋ ಚಾಲಕನ ಪುತ್ರ. ಕೇರಳದ ಮಲಪ್ಪುರಂ ನಿವಾಸಿಯಾಗಿದ್ದು ಕೇರಳ ತಂಡದಲ್ಲಿ ರಣಜಿಯನ್ನೂ ಆಡದ ವಿಗ್ನೇಶ್ ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶದಲ್ಲಿ ಜಗತ್ತಿನ ಗಮನ ಸೆಳೆದ ವಿಗ್ನೇಶ್ ಪುತ್ತೂರು.

ಕೇರಳದ ಪ್ರಮುಖ ಮಾಧ್ಯಮಗಳು ವಿಗ್ನೇಶ್ ಅವರ ಅವರ ಸಂದರ್ಶನ ಮಾಡಿದಾಗ ವಿಗ್ನೇಶ್ ತನ್ನನ್ನು ಕ್ರಿಕೆಟ್ ಗೆ ಕರೆತಂದದ್ದು, ಪ್ರೋತ್ಸಾಹಿಸಿದ್ದು ನೆರೆ ಮನೆಯ ಶರೀಫ್ ಎಂದು ಹೇಳಿದ್ದರು. ಮಾಧ್ಯಮಗಳು ಶರೀಫ್ ಉಸ್ತಾದ್ ಅವರ ಬಳಿ ಈ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ.

" ಅವರು ಆ ತರ ಹೇಳೋದು ಅವರ ವಿನಯದಿಂದ, ಮಕ್ಕಳು ಕ್ರಿಕೆಟ್ ಆಡುತ್ತಿರುವ ಸಂದರ್ಭ ಅವರಲ್ಲಿ ಪ್ರತಿಭೆ ಕಂಡಾಗ ಅವರನ್ನು ಸ್ವಾಭಾವಿಕವಾಗಿ ನಾವು ಪ್ರೋತ್ಸಾಹಿಸುತ್ತೇವೆ .ಇದು ಎಲ್ಲರೂ ಮಾಡುವ ಕೆಲಸ. ನಾನು ಅದನ್ನೇ ಮಾಡಿದ್ದೆ ಅಷ್ಟೆ. ನಾನು ಕ್ರಿಕೆಟ್ ಬಗ್ಗೆ ಒಂದು ಕ್ಯಾಂಪ್ ನಲ್ಲಿ ಸ್ವಲ್ಪ ವಿಷಯ ಕಲಿತಿದ್ದೆ. ಆ ಸಾಮರ್ಥ್ಯ ವಿಗ್ನೇಶ್ ನಲ್ಲಿ ಇದ್ದವು. ಅದರಲ್ಲಿಯೂ ಬೌಲಿಂಗ್ ಮಾಡುವಾಗ ಆತನ ಶೈಲಿ ಉತ್ತಮವಾಗಿತ್ತು. ಬಳಿಕ ಆತನ ಪೋಷಕರಲ್ಲಿ ಮಾತಾಡಿ ಕೋಚಿಂಗ್ ಗೆ ಸೇರಿಸಿದ್ದೆ. ಅಲ್ಲದೆ ಎಡ ಕೈಯಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಮಾಡುವುದನ್ನು ಹೇಳಿಕೊಟ್ಟಿದ್ದೆ. ಅಲ್ಲದೆ ಆತನನ್ನು ಎರಡು ಮೂರು ವರ್ಷಗಳ ಕಾಲ ನನ್ನ ಬೈಕ್ ನಲ್ಲಿ ಮೈದಾನಕ್ಕೆ ಕರೆದುಕೊಂಡು ಹೋಗಿದ್ದೆ", ಎಂದು ಹೇಳಿದ್ದಾರೆ.

ನಾನು ಆತನನ್ನು ಆಟಗಾರನನ್ನಾಗಿ ಮಾಡಿದಲ್ಲ. ಆತನೇ ಆದದ್ದು. ಕೋಚ್ ಬಳಿ ವಿಗ್ನೇಶ್ ಕಲಿತಿದ್ದಾನೆ. ಈಗ ಉತ್ತಮ ಪ್ರದರ್ಶನ ನೀಡಿದಾಗ ನಮ್ಮನ್ನೆಲ್ಲಾ ನೆನೆದುಕೊಂಡ ಅಷ್ಟೆ ಎಂದರು.

ವಿಗ್ನೇಶ್ ಪುತ್ತೂರು ಜನಮೆಚ್ಚುಗೆ ಗೆ ಪಾತ್ರವಾದಾಗ ತನಗೆ ದಾರಿದೀಪವಾದ ಶರೀಫ್ ರನ್ನು ವಿಗ್ನೇಶ್ ಮರೆಯಲಿಲ್ಲ. ತಾನು ಮಾಡಿದ ನಿಸ್ವಾರ್ಥ ಸೇವೆಗೆ ಅಹಂ ತೋರಿಸದೆ ನಾನು ಯಾರಾದರೂ ಮನುಷ್ಯರು ಮಾಡಬೇಕಾದ್ದನ್ನಷ್ಟೇ ಮಾಡಿದ್ದೇನೆ ಎಂದು ಹೇಳಿ ತಮ್ಮ ವಿನಯದಿಂದ ಶರೀಫ್ ಉಸ್ತಾದ್ ಜನರ ಮನಸ್ಸು ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News