ಭರವಸೆಯಂತೆ ಸರ್ಫರಾಜ್ ಖಾನ್ ಅವರ ತಂದೆಗೆ ಥಾರ್‌‌ ಕಾರು ಉಡುಗೊರೆಯಾಗಿ ನೀಡಿದ ಆನಂದ್‌ ಮಹೀಂದ್ರ

Update: 2024-03-23 08:55 GMT

Photo: X \ @CricCrazyJohns

ಹೊಸದಿಲ್ಲಿ: ಮಹೀಂದ್ರಾ ಗ್ರೂಪ್ ನ ಮಾಲಕ ಆನಂದ್ ಮಹೀಂದ್ರಾ ಅವರು ತಮ್ಮ ಭರವಸೆಯಂತೆ ಭಾರತದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಅವರ ತಂದೆ ನೌಶಾದ್ ಖಾನ್ ಅವರಿಗೆ ಥಾರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಸರ್ಫರಾಜ್ ಟೆಸ್ಟ್ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದ ನಂತರ ಮಹೀಂದ್ರಾ ನೌಶಾದ್ ಅವರಿಗೆ ಥಾರ್ ನೀಡುವುದಾಗಿ ಭರವಸೆ ನೀಡಿದ್ದರು.

ಭಾರತವನ್ನು ಪ್ರತಿನಿಧಿಸುವ ತನ್ನ ಕನಸನ್ನು ನನಸಾಗಿಸಲು ತಂದೆ ನೌಶಾದ್ ಅವರ ತ್ಯಾಗ ಕಾರಣ ಎಂದು ಸರ್ಫರಾಜ್ ಖಾನ್ ಹೇಳಿದ್ದರು.

ಸರ್ಫರಾಜ್ ಟೆಸ್ಟ್ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡುತ್ತಿದ್ದಂತೆ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು, ಸರ್ಫರಾಜ್ ಅವರ ತಂದೆಗೆ ಮಹೀಂದ್ರ ಥಾರ್ ಅನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡ ವೀಡಿಯೊಗೆ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ, ಸರ್ಫರಾಜ್ ಅವರ ತಂದೆಗೆ ಥಾರ್ ನೀಡುವುದಾಗಿ ಭರವಸೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News