ವಯನಾಡ್ ಭೂಕುಸಿತ | ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದ ನಟ ಪ್ರಭಾಸ್

Update: 2024-08-07 16:18 GMT

PC:instagram/actorprabhas 

ಹೈದರಾಬಾದ್ : ವಯನಾಡ್ನ ಭೂಕುಸಿತ ಸಂತ್ರಸ್ತರ ನೆರವಿಗಾಗಿ ‘ಬಾಹುಬಲಿ’ ಖ್ಯಾತಿಯ ಚಿತ್ರ ನಟ ಪ್ರಭಾಸ್ ಕೇರಳ ಮುಖ್ಯಮಂತ್ರಿ ಸಂಕಷ್ಟ ಪರಿಹಾರ ನಿಧಿ (ಸಿಎಂಡಿಆರ್ಎಫ್)ಗೆ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಈ ಹಿಂದೆ ತೆಲುಗು ಚಿತ್ರ ನಟರಾದ ಚಿರಂಜೀವಿ, ರಾಮ್ ಚರಣ್ 1 ಕೋಟಿ ರೂ. ಹಾಗೂ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಇದಲ್ಲದೆ, ನಯನ್ತಾರಾ ಹಾಗೂ ವಿಘ್ನೇಶ್ ಶಿವನ್ ಕೂಡ ದೇಣಿಗೆ ನೀಡಿದ್ದಾರೆ.

ಇತ್ತೀಚೆಗೆ ‘ಪುಷ್ಪ’ ಚಲನಚಿತ್ರದ ನಟನೆಯ ಮೂಲಕ ಕೇರಳೀಯರ ಮೆಚ್ಚುಗೆ ಪಾತ್ರವಾಗಿದ್ದ ರಶ್ಮಿಕಾ ಮಂದಣ್ಣ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಸಿಎಂಡಿಆರ್ಎಫ್ಗೆ 20 ಲಕ್ಷ ನೀಡುವ ಮೂಲಕ ಪರಿಹಾರ ಪ್ರಯತ್ನಕ್ಕೆ ಮೊದಲು ಬೆಂಬಲ ನೀಡಿದವರಲ್ಲಿ ಚಿಯಾನ್ ವಿಕ್ರಮ್ ಕೂಡ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News