ಟ್ರಂಪ್ ಸ್ನೇಹಿತರಾಗಿದ್ದ ಮೋದಿ ಗಡೀಪಾರು ಮಾಡಲಾದ ಭಾರತೀಯರಿಗೆ ಕೈಕೋಳ ಹಾಕಲು ಅವಕಾಶ ನೀಡಿದ್ದೇಕೆ?: ಪ್ರಿಯಾಂಕಾ ಗಾಂಧಿ ಪ್ರಶ್ನೆ
Update: 2025-02-06 16:46 IST

ಪ್ರಿಯಾಂಕಾ ಗಾಂಧಿ (PTI)
ಹೊಸದಿಲ್ಲಿ: ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಉತ್ತಮ ಸ್ನೇಹಿತರು ಎನ್ನಲಾಗಿದ್ದು, ಹೀಗಿದ್ದೂ ಗಡೀಪಾರಿಗೊಳಗಾದ ಭಾರತೀಯರಿಗೆ ಕೈಕೋಳ ತೊಡಿಸಲು ಅಮೆರಿಕಗೆ ಅವಕಾಶ ನೀಡಿದ್ದೇಕೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಅಮೆರಿಕದಿಂದ ಗಡೀಪಾರಿಗೊಳಗಾಗಿರುವ ಭಾರತೀಯ ವಲಸಿಗರ ಕುರಿತು ಪ್ರತಿಕ್ರಿಯಿಸಿದ ಅವರು, “ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಗೆಳೆತನದ ಬಗ್ಗೆ ಸಾಕಷ್ಟು ಮಾತನಾಡಲಾಗುತ್ತದೆ. ಹೀಗಿದ್ದ ಮೇಲೆ, ಅವರನ್ನೆಲ್ಲ ವಾಪಸು ಕರೆತರಲು ನಾವು ನಮ್ಮ ವಿಮಾನವನ್ನು ಕಳಿಸಲು ಸಾಧ್ಯವಿರಲಿಲ್ಲವೆ? ಪ್ರಧಾನಿ ಮೋದಿ ಉತ್ತರಿಸಬೇಕು” ಎಂದು ಆಗ್ರಹಿಸಿದರು.