ಹರಿಯಾಣ ಪ್ರವಾಹ: 'ಈಗೇಕೆ ಬಂದೆ?' ಎಂದು ಶಾಸಕನಿಗೆ ಕಪಾಳ ಮೋಕ್ಷ ಮಾಡಿದ ಮಹಿಳೆ

ಶಾಸಕರಿಗೆ ಕಪಾಳ ಮೋಕ್ಷ ಮಾಡಿದ ಆಕೆ, "ಈಗೇಕೆ ಬಂದೆ?" ಎಂದು ಪ್ರಶ್ನಿಸಿದ್ದಾಳೆ. ಸಣ್ಣ ಅಣೆಕಟ್ಟು ಒಡೆದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿರುವುದರಿಂದ ಮಹಿಳೆ ಆಕ್ರೋಶಗೊಂಡಿದ್ದರು.

Update: 2023-07-13 06:48 GMT

Screengrab : Twitter/@ANI

ಘುಲಾ (ಹರಿಯಾಣ): ಹರಿಯಾಣದಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಆಕ್ರೋಶಗೊಂಡಿದ್ದ ಮಹಿಳೆಯೊಬ್ಬಳು ಘುಲಾದಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ಜನನಾಯಕ್ ಜನತಾ ಪಾರ್ಟಿ(ಜೆಜೆಪಿ)ಗೆ ಸೇರಿದ ಶಾಸಕ ಈಶ್ವರ್ ಸಿಂಗ್ ಅವರಿಗೆ ಬುಧವಾರ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ.

ಶಾಸಕರಿಗೆ ಕಪಾಳ ಮೋಕ್ಷ ಮಾಡಿದ ಆಕೆ, "ಈಗೇಕೆ ಬಂದೆ?" ಎಂದು ಪ್ರಶ್ನಿಸಿದ್ದಾಳೆ. ಸಣ್ಣ ಅಣೆಕಟ್ಟು ಒಡೆದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿರುವುದರಿಂದ ಮಹಿಳೆ ಆಕ್ರೋಶಗೊಂಡಿದ್ದರು.

ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಶಾಸಕರ ಸುತ್ತ ಹಲವಾರು ಮಂದಿ ನೆರೆದಿರುವುದನ್ನು ಆ ವಿಡಿಯೊದಲ್ಲಿ ಕಾಣಬಹುದಾಗಿದೆ. ಆ ಜನಸಂದಣಿಯಿಂದ ಮುಂದೆ ಬಂದಿರುವ ಆ ಮಹಿಳೆಯು ಆಕ್ರೋಶದಿಂದ ಶಾಸಕರಿಗೆ ಕಪಾಳ ಮೋಕ್ಷ ಮಾಡಿರುವುದು ಸೆರೆಯಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಜೆಜೆಪಿ ಶಾಸಕ ಈಶ್ವರ್ ಸಿಂಗ್, ನಾನು ಪ್ರವಾಹ ಪರಿಸ್ಥಿತಿಯ ಪರಿಶೀಲನೆಗೆ ತೆರಳಿದ್ದಾಗ ಜನರು ಜನ ನನ್ನ ಕುಶಲೋಪರಿ ವಿಚಾರಿಸಿದರು ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಹರಿಯಾಣ ಸರಕಾರದಲ್ಲಿ ಜೆಜೆಪಿ ಮೈತ್ರಿ ಪಕ್ಷವಾಗಿದೆ.

"ಇದು ನೈಸರ್ಗಿಕ ವಿಕೋಪವಾಗಿದ್ದು, ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ ಎಂದು ನಾನು ಆಕೆಗೆ ವಿವರಿಸಿದರೂ, ಸಣ್ಣ ಅಣೆಕಟ್ಟು ಒಡೆಯಬಾರದಿತ್ತು ಎಂದು ಆಕೆ ನನಗೆ ತಿಳಿಸಿದಳು" ಎಂದು ಶಾಸಕ ಈಶ್ವರ್ ಸಿಂಗ್ ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಾನು ಆಕೆಯ ಕೃತ್ಯವನ್ನು ಕ್ಷಮಿಸಿದ್ದೇನೆ ಹಾಗೂ ಆಕೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಘಗ್ಗರ್ ನದಿ ಉಕ್ಕೇರಿ ಹರಿಯುತ್ತಿರುವುದರಿಂದ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ಹಲವಾರು ಗ್ರಾಮಗಳು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿವೆ. ಈ ಗ್ರಾಮಗಳಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News