ಡಬ್ಲ್ಯುಟಿಸಿ ಅಂಕಪಟ್ಟಿ: ಮತ್ತೊಮ್ಮೆ ದ್ವಿತೀಯ ಸ್ಥಾನಕ್ಕೇರಿದ ಭಾರತ

Update: 2024-02-05 16:57 GMT

Photo: PTI 

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ವಿಝಾಗ್ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 106 ರನ್ನಿಂದ ಜಯ ಸಾಧಿಸಿರುವ ಟೀಮ್ ಇಂಡಿಯಾ 2023-25ರ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್‌ ನ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ದ್ವಿತೀಯ ಸ್ಥಾನಕ್ಕೇರಿದೆ.

ಹೈದರಾಬಾದ್ನಲ್ಲಿ ಅಚ್ಚರಿಯ ಸೋಲು ಕಂಡಿದ್ದ ಭಾರತವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿಷಿಕ್ಷ್ತಿು.

ಸೋಮವಾರ ಜಯ ಸಾಧಿಸಿರುವ ಭಾರತವು ಆಸ್ಟ್ರೇಲಿಯ ನಂತರ 2ನೇ ಸ್ಥಾನಕ್ಕೆ ವಾಪಸಾಗಿದೆ. ಈ ಗೆಲುವಿನ ಮೂಲಕ ರೋಹಿತ್ ಬಳಗ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿದೆ.

ಈ ಗೆಲುವಿನ ಮುಖಾಂತರ ಭಾರತದ ಅಂಕದ ಶೇಕಡಾಂಶ 52.77ಕ್ಕೆ ಏರಿದೆ.

ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಅಂಕಪಟ್ಟಿಯಲ್ಲಿ 3ನೇ, 4ನೇ ಹಾಗೂ ಐದನೇ ಸ್ಥಾನದಲ್ಲಿವೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News