ಜನೌಷಧ ಕೇಂದ್ರಗಳು ಹೆಚ್ಚಲಿ
Update: 2024-08-10 05:09 GMT
ಮಾನ್ಯರೇ,
ಭಾರತದಲ್ಲಿ ಜನರ ಆದಾಯದ ಪ್ರಮಾಣ ಬಹಳ ಕಡಿಮೆಯಿದ್ದು ಜೀವನನಿರ್ವಹಣೆ ಮಾಡುವುದು ಕಷ್ಟಕರ. ಹೀಗಿರುವಾಗ ತಮ್ಮ ದುಡಿಮೆಯ ದೊಡ್ಡ ಪಾಲನ್ನು ಆರೋಗ್ಯ ವೆಚ್ಚಕ್ಕಾಗಿ ಮೀಸಲಿಟ್ಟರೆ ಬೇರೆ ರೀತಿಯ ಖರ್ಚುಗಳನ್ನು ಸರಿದೂಗಿಸುವುದು ತುಂಬಾ ಹೊರೆಯಾಗುತ್ತದೆ. ಹೀಗಾಗಿ ಭಾರತ ಸರಕಾರ ಜನೌಷಧ ಕೇಂದ್ರಗಳನ್ನು ಎಲ್ಲೆಡೆ ತೆರೆಯುವಂತಾದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ.
ಪ್ರಸಕ್ತ ದೇಶದ 766 ಜಿಲ್ಲೆಗಳಲ್ಲಿ 743 ಜಿಲ್ಲೆಗಳನ್ನು ಒಳಗೊಂಡಂತೆ 9,000 ಜನೌಷಧ ಕೇಂದ್ರಗಳಿವೆ ಎಂದು ಹೇಳಲಾಗುತ್ತಿದ್ದು, ಇದರ ಸಂಖ್ಯೆಯನ್ನು ಕನಿಷ್ಠ ಒಂದು ಲಕ್ಷಕ್ಕೆ ಏರಿಸಿದರೆ ದೇಶದ ಹೆಚ್ಚಿನ ಬಡವರಿಗೆ ಸಾಕಷ್ಟು ಉಪಯೋಗವಾಗುತ್ತದೆ.
-ರಾಸುಮ ಭಟ್, ಚಿಕ್ಕಮಗಳೂರು