ಅನುಭಾವ ಗುಣವುಳ್ಳ ಕವಿತೆಗಳು

Update: 2016-01-19 18:26 GMT

ಹಂದಲಗೆರೆ ಗಿರೀಶ್ ಅವರ ‘ನೀರ ಮೇಗಲ ಸಹಿ’ ಕಿರು ಪದ್ಯಗಳ ಸಂಕಲನ. ಹೈಕುಗಳನ್ನು ಮಾದರಿಯಾಗಿಟ್ಟುಕೊಂಡು ಬರೆದಿರುವ ಈ ಸಂಕಲದ ಪ್ರಧಾನಗುಣವೇ ಲವಲವಿಕೆ. ‘‘ಮುಂಗಾರಿಗೆ ಹಾಡುತ್ತಿವೆ ಗರಿಕೆ

ಅಪ್ಪ

ನೇಗಿಲ ಕೆತ್ತುತ್ತಿದ್ದಾನೆ’’ ನಾಲ್ಕು ಸಾಲುಗಳಲ್ಲಿ ಬದುಕನ್ನು ಕಟ್ಟಿಕೊಡುವ ಇಂತಹ ಹಲವು ಕವಿತೆಗಳು ಇಲ್ಲಿವೆ. ‘ತೊಟ್ಟು ಕಳಚಿತು ಬಾನ ಕಿತ್ತಳೆ,
ಜಗಕೆ ಕತ್ತಲೆ’

‘ಒಲವು ಭೂಮಿ ಮೇಗಲ
ಎರಡನೆ ಗುರುತ್ವ’

ಅನುಭಾವ ಗುಣಗಳುಳ್ಳ ಹಲವು ಕವಿತೆಗಳು ಇವೆ. ಭೂಮಿ, ಪ್ರಕೃತಿಯೇ ಇವು ಗಳ ಗುರುತ್ವ ಶಕ್ತಿ. ಶ್ರಮ ಬೆವರುಗಳ ಆಹ್ಲಾದಗಳನ್ನೂ ಕೆಲವು ಸಾಲುಗಳು ತನ್ನದಾಗಿಸಿ ಕೊಂಡಿವೆ. ‘ಮಣ್ಣೊಳಗೆ
ಎರೆಹುಳು ನಾನು

ಬಯಲು ನನ್ನ ಕೃಷಿ’ ಎನ್ನುವ ಕವಿಯ ಸಾಲುಗಳ ಅಂತರಾಳ ಎರೆಹುಳದ ಸಾಮಾನ್ಯತೆ ಮತ್ತು ಅದು ಮಣ್ಣಿಗೆ ನೀಡುವ ಪೌಷ್ಟಿಕ ಗುಣ ಎರಡನ್ನೂ ತನ್ನದಾಗಿಸಿಕೊಂಡಿದೆ. ಹಿರಿಯ ಕಾವ್ಯದ ಅಂತಸ್ಸತ್ವವನ್ನು ಹೊಂದಿರುವ ಈ ಕಿರುಕವಿತೆಗಳು ನಮ್ಮೆದೆಯೊಳಗೆ ಪುಟ್ಟ ಬೀಜ ವಾಗಿ ಬಿದ್ದು, ನಿಧಾನಕ್ಕೆ ವಿಶಾಲ ಮರದಂತೆ ಹರಡ ತೊಡಗುತ್ತವೆ. ಉಪಾಸನ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂ. ಆಸಕ್ತರು 080 23181799 ದೂರವಾಣಿ ಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News