ಅಂಬೇಡ್ಕರ್- ವರ್ತಮಾನದೊಂದಿಗೆ ಮುಖಾಮುಖಿ

Update: 2016-01-22 18:07 GMT

 ಅಂಬೇಡ್ಕರ್ ವಿಚಾರಧಾರೆಗಳನ್ನು ವಸಾಹತೋತ್ತರ ಭಾರತದ ವಿದ್ಯಮಾನಗಳ ನೆಲೆಯಲ್ಲಿ ಇಟ್ಟು ಚರ್ಚಿಸಿರುವ ಕೃತಿಯೇ ಡಾ. ಬಿ.ಯು. ಸುಮಾ ಅವರು ಬರೆದಿರುವ ‘ಡಾ. ಬಿ. ಆರ್. ಅಂಬೇಡ್ಕರ್-ವರ್ತಮಾನದೊಂದಿಗೆ ಮುಖಾಮುಖಿ’. ಅಂಬೇಡ್ಕರ್ ಚಿಂತನೆಗಳು ವರ್ತಮಾನದಲ್ಲಿ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಭಾರತೀಯ ಸಮಾಜ ಸವಾಲುಗಳು ಇನ್ನೂ ಜಾತಿಯ ತಳಹದಿಯ ಮೇಲೆಯೇ ನಿಂತಿದೆ. ಆಧುನಿಕತೆ, ಈ ಭಾರತದ ಜಾತೀಯತೆಯನ್ನು ಒರೆಸಿಹಾಕುವುದರಲ್ಲಿ ಯಶಸ್ವಿಯಾಗಿಲ್ಲ. ಬದಲಿಗೆ ಜಾತಿ ಬೇರೆ ಬೇರೆ ವೇಷಗಳಲ್ಲಿ ಮತ್ತೆ ನಮ್ಮ ಮನೆಯಂಗಳದಲ್ಲಿ ವಕ್ಕರಿಸಿಕೊಂಡಿದೆ. ಈ ಸವಾಲನ್ನು ಮತ್ತೆ ಅಂಬೇಡ್ಕರ್ ಅವರ ವಿಚಾರಗಳ ಮೂಲಕವೇ ಎದುರಿಸಬೇಕಾದ ಅನಿವಾರ್ಯತೆಯಲ್ಲಿ ಭಾರತ ನಿಂತಿದೆ. ಇಲ್ಲಿ, ಅಂಬೇಡ್ಕರ್, ಬದುಕು ಮತ್ತು ವಿಚಾರಧಾರೆಗಳನ್ನು ಸಂಗ್ರಹವಾಗಿ ಹಿಡಿದು ಕೊಡಲಾಗಿದೆ.

  ಮೊದಲನೆ ಭಾಗದಲ್ಲಿ ಅಂಬೇಡ್ಕರ್ ಬಾಲ್ಯ, ಬದುಕನ್ನು ತೆರೆದಿಡಲಾಗಿದೆಯಾದರೆ, ಎರಡನೆ ಭಾಗದಲ್ಲಿ ಜಾತಿಯ ಕುರಿತಂತೆ ಅಂಬೇಡ್ಕರ್ ನಿಲುವುಗಳು ಮತ್ತು ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಅದರ ವಿರುದ್ಧ ಮಾಡಿರುವ ಸಂಘರ್ಷಗಳನ್ನು ವಿವರಿಸಲಾಗಿದೆ. ಮೂರನೆ ಭಾಗದಲ್ಲಿ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಕಡೆಗೆ ಬೆಳಕು ಹರಿಸಲಾಗಿದೆ. ನಾಲ್ಕನೆ ಭಾಗದಲ್ಲಿ ಧರ್ಮದ ಕುರಿತಂತೆ ಅಂಬೇಡ್ಕರ್ ನಿಲುವು ಮತ್ತು ಬೌದ್ಧಧರ್ಮವನ್ನು ಅವರು ಗ್ರಹಿಸಿದ ರೀತಿಯನ್ನು ಕಟ್ಟಿಕೊಡಲಾಗಿದೆ. ಐದನೆ ಭಾಗದಲ್ಲಿ ರಾಷ್ಟ್ರೀಯತೆಯನ್ನು ಅಂಬೇಡ್ಕರ್ ಕಣ್ಣಲ್ಲಿ ವಿವರಿಸಲಾಗಿದ್ದು, ಪ್ರಜಾಪ್ರಭುತ್ವದ ಹೊಣೆಗಾರಿಕೆಗಳನ್ನು ಎತ್ತಿ ಹಿಡಿದಿದ್ದಾರೆ. ಆರನೆ ಅಧ್ಯಾಯದಲ್ಲಿ ಗಾಂಧೀವಾದದ ಕುರಿತಂತೆ ಅಂಬೇಡ್ಕರ್‌ಗಿರುವ ಭಿನ್ನಾಭಿಪ್ರಾಯಗಳನ್ನು ತೆರೆದಿಡಲಾಗಿದೆ.
  ಈ ಕೃತಿಯ ಎರಡನೆ ಮುದ್ರಣ ಇದಾಗಿದ್ದು, ಲಡಾಯಿ ಪ್ರಕಾಶನ ಗದಗ ಹೊರತಂದಿದೆ. ಆಸಕ್ತರು 9035596267 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News