ಬ್ಯಾಂಕ್ ಕಾರ್ಮಿಕ ಸಂಘರ್ಷ-ಸಾಮರಸ್ಯ

Update: 2016-02-15 18:39 GMT

  ಸಂಘರ್ಷದಿಂದ ಸಾಮರಸ್ಯದೆಡೆಗೆ-ವೃತ್ತಿ ಸಂಘಟನೆಯ ಹಾದಿ’ ಕೃತಿಯನ್ನು ಟಿ. ಆರ್. ಭಟ್ ಅವರ ಆತ್ಮಕಥನ ಎನ್ನುವುದಕ್ಕಿಂತ ಅವರ ಸಂಘಟನಾ ಬದುಕಿನ ಕಥನ ಎನ್ನುವುದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಕಾರ್ಮಿಕರೆಂದರೆ, ಬಯಲಲ್ಲಿ ಬೆವರು ಸುರಿಸಿ ದುಡಿಯುವ ಶ್ರಮ ಜೀವಿಗಳಷ್ಟೇ ಅಲ್ಲ. ಆಧುನಿಕ ದಿನಗಳಲ್ಲಿ ಶ್ರಮ ಬೇರೆ ಬೇರೆ ರೀತಿಯಲ್ಲಿ ವಿಂಗಡನೆಗೊಂಡಿದೆ. ಶೋಷಣೆಯೆನ್ನುವುದು ಅನಕ್ಷರಸ್ಥರಿಗಷ್ಟೇ ಸೀಮಿತವಾದ ಪದವಲ್ಲ. ಅಕ್ಷರಸ್ಥರೂ ಕೂಡ ದಿನನಿತ್ಯ ಶೋಷಣೆಗೀಡಾಗುತ್ತಾರೆ. ಬ್ಯಾಂಕು ಕಚೇರಿಗಳಲ್ಲೂ ಇದನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಟಿ. ಆರ್. ಭಟ್ ಅವರು ಬ್ಯಾಂಕ್ ಅಧಿಕಾರಿಗಳ ಸಂಘಟನೆಯನ್ನು ರೂಪಿಸಿ, ಅದನ್ನು ಚಳವಳಿಯಾಗಿ ವಿಸ್ತರಿಸಿದ ಅನುಭವವನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಲೇಖಕರೇ ಹೇಳುವಂತೆ, ಮೇಲ್ನೋಟಕ್ಕೆ ಸೀಮಿತವಾದ ವಸ್ತುವನ್ನು ಹೊಂದಿದೆ ಎನ್ನಿಸಿದರೂ, ಅದಕ್ಕೆ ಸಂಬಂಧಿಸಿದ ವಿಷಯಗಳ ‘ಕ್ಯಾನ್ವಾಸ್’ ವಿಸ್ತೃತವಾದುದು. ಸಾಮೂಹಿಕ ಚಳವಳಿಯನ್ನು ಮುನ್ನಡೆಸುವಲ್ಲಿ ಬಂದ ಸವಾಲುಗಳು, ಸಂಸ್ಥೆ ಮತ್ತು ಉದ್ಯೋಗಿಗಳ ಸಂಬಂಧ, ಕಾರ್ಮಿಕ ಚಳವಳಿಯ ಮುಂದೆ ಆಗಾಗ ಏಳುವ ಪ್ರಶ್ನೆಗಳು, ಅವುಗಳ ಸಾಮಾಜಿಕ ಜವಾಬ್ದಾರಿ, ರಾಜಕೀಯ ಧೋರಣೆ ಮುಂದಾದ ವಿಭಿನ್ನ ಆದರೆ ಮುಖ್ಯವಸ್ತುವಿಗೆ ಪೂರಕವಾದ ವಿಷಯಗಳು ಇಲ್ಲಿ ಬಂದಿವೆ. ಬ್ಯಾಂಕುಗಳನ್ನು ಸುತ್ತುವರಿದಿರುವ ರಾಜಕೀಯಗಳು, ಅದರೊಳಗಿನ ಕಾರ್ಮಿಕ ಬಿಕ್ಕಟ್ಟು, ಕಾರ್ಮಿಕ ಸಂಘಟನೆ ಮತ್ತು ಅದರ ಹೊರಗಿನ ಚಟುವಟಿಕೆಗಳು, ಬ್ಯಾಂಕುಗಳಲ್ಲಿ ಮಾನವ ಸಂಪನ್ಮೂಲ ನೀತಿ, ಬ್ಯಾಂಕುಗಳಲ್ಲಿ ಕಾರ್ಮಿಕ ಸಂಘಟನೆಗಳ ಪ್ರಸ್ತುತತೆ ಮೊದಲಾದ ವಿಷಯಗಳು ಇಲ್ಲಿ ಚರ್ಚಿಸಲ್ಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News