ವಾಟ್ಸಾಪ್ಪಿನಲ್ಲೀಗ ಲಭ್ಯವಿದೆ ಡಾಕ್ಯುಮೆಂಟ್ ಶೇರಿಂಗ್ ಫೀಚರ್
ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಇನ್ಸ್ಟೆಂಟ್ ಮೆಸೇಜಿಂಗ್ ಆ್ಯಪ್‌ನಲ್ಲಿ ಇದೀಗ ಬಳಕೆದಾರರು ಡಾಕ್ಯುಮೆಂಟುಗಳನ್ನು ಕೂಡ ಶೇರ್ ಮಾಡಬಹುದು. ಆದರೆ ಈ ಸೌಲಭ್ಯ ವಾಟ್ಸಾಪ್ಪಿನ ಇತರ ಫೀಚರ್‌ಗಳಂತೆಎಲ್ಲ ಬಳಕೆದಾರರಿಗೆ ಸದ್ಯ ಲಭ್ಯವಾಗುವುದಿಲ್ಲ. ಹೊಸ ಡಾಕ್ಯುಮೆಂಟ್ ಶೇರಿಂಗ್ ಫೀಚರ್ ಆ್ಯಂಡ್ರಾಯ್ಡಾ ಆ್ಯಪ್‌ನೇರವಾಗಿವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡಬಹುದಾಗಿದೆ.
ಬಳಕೆದಾರರು ಡಾಕ್ಯುಮೆಂಟುಗಳನ್ನು ಶೇರ್ ಮಾಡಬಹುದೆಂದು ಐಕಾನ್ ಹೇಳಿದರೆ, ನಾವು ನಡೆಸಿದ ಪರೀಕ್ಷೆಗಳು ಈ ಫೈಲ್ ಶೇರಿಂಗ್ ಪಿಡಿಎಫ್ ಫೈಲುಗಳಿಗೆ ಸೀಮಿತವಾಗಿವೆಯೆಂದು ತಿಳಿಸುತ್ತವೆ ಹಾಗೂ ಅದು ಇತರ ಡಾಕ್ಯುಮೆಂಟ್ ಫಾರ್ಮಾಟುಗಳನ್ನು ತೋರಿಸುತ್ತಿಲ್ಲ.
ನಿಮ್ಮ ಫೋನಿನಲ್ಲಿರುವ ಫೋಲ್ಡರುಗಳಲ್ಲಿನ ಫೈಲುಗಳನ್ನು ಬ್ರೌಸ್ ಮಾಡಲು ಕೂಡ ಇದರಿಂದ ಸಾಧ್ಯವಿಲ್ಲವಾಗಿದ್ದು ಕೇವಲ ಪಿಡಿಎಫ್ ಫೈಲುಗಳ ಒಂದು ಪಟ್ಟಿಯನ್ನು ಅದು ತೋರಿಸುತ್ತದೆ, ಸರ್ಚ್ ಮಾಡುವ ಆಯ್ಕೆಯಿದ್ದರೂ ಅದು ಲಿಸ್ಟ್‌ನಲ್ಲಿರುವುದನ್ನು ಮಾತ್ರ ಹುಡುಕಲು ಸಹಾಯ ಮಾಡುತ್ತದೆ.