ಶಾಲೆಗಳಲ್ಲಿ ಪ್ರಾರ್ಥನೆ

Update: 2016-03-07 11:14 GMT

ಸಾರ್ವತ್ರಿಕವಾದ ಜೀವನ ವೌಲ್ಯಗಳನ್ನು ನೀಡುವ, ಪ್ರಾರ್ಥನೆಗಳು ನಮಗೆ ಬೇಕಾಗಿದೆ. ಹಾಗೆಯೇ ಯಾವುದೋ ಒಂದು ಪೌರಾಣಿಕ ವ್ಯಕ್ತಿಯ ಗುಣವರ್ಣನೆ ಮಾಡುವ, ಸ್ತುತಿಸುವ, ಅವನೇ ಗ್ರೇಟ್ ಅವನಿಲ್ಲದೆ ಇನ್ನೊಬ್ಬನಿಲ್ಲ ಎಂದು ದೇವರ ಪರಿಕಲ್ಪನೆಯನ್ನೇ ಕಿರಿದಾಗಿಸುತ್ತಾ, ಪ್ರಾರ್ಥನೆಯ ಅರ್ಥವನ್ನು ಸಂಕುಚಿತಗೊಳಿಸುವ, ವ್ಯಕ್ತಿಪೂಜೆ ಮಾಡುವಂತಹ ಪ್ರಾರ್ಥನೆಗಳು ಬೇಡ.

ಭಾಷೆಯಲ್ಲಿ ಮೈಲಿಗೆ

ಮಾಂಟೆಸೆರಿ ಶಾಲೆಗೆ ಹೋಗುವ ನಮ್ಮ ಮಗುವೊಂದು ಭೂರ್ಭುವಸ್ಸುವಃ ಎಂದು ಗಾಯತ್ರಿ ಮಂತ್ರವನ್ನು ಕಲಿತುಕೊಂಡು ದಿನವೆಲ್ಲಾ ಹೇಳಿಕೊಳ್ಳುತ್ತಿತ್ತು. ಶಾಲೆಯ ಆಡಳಿತ ಮಂಡಳಿಯಲ್ಲಿ ಇದರ ಬಗ್ಗೆ ಪ್ರಶ್ನಿಸಿದೆವು. ಏಕೆಂದರೆ ನಾವು ಮಗುವನ್ನು ಶಾಲೆಗೆ ಸೇರಿಸುವಾಗಲೇ ತಾಕೀತು ಮಾಡಿ ಕೇಳಿದ್ದೇನೆಂದರೆ ಮಗುವಿಗೆ ಯಾವುದೇ ಧಾರ್ಮಿಕತೆಯನ್ನು ತುಂಬಬಾರದು. ಹಾಗೆ ಒಂದು ವೇಳೆ ಧಾರ್ಮಿಕತೆಯ ಪ್ರತಿಪಾದನೆಯ ಅಜೆಂಡಾ ಇದ್ದಲ್ಲಿ ಮಗುವನ್ನೇ ಸೇರಿಸುವುದಿಲ್ಲ ಎಂದು. ಈಗ ಅವರು ಹೇಳಿದ್ದೇನೆಂದರೆ, ಈ ಬಗೆಯ ಸಂಸ್ಕೃತ ಶ್ಲೋಕಗಳನ್ನು ಹೇಳಿಕೊಡುವುದರಿಂದ ಮಕ್ಕಳಿಗೆ ಪದಗಳ ಉಚ್ಚಾರಣೆ ಚೆನ್ನಾಗಿ ಬರುವುದು. ಹಾಗೂ ಈ ಮಂತ್ರಗಳಿಂದ ಪಾಸಿಟಿವ್ ವೈಬ್ರೆಶನ್‌ಗಳು ಎಲ್ಲೆಡೆ ಹರಡಿ ಪರಿಸರ ಮತ್ತು ಮನಸ್ಸು ಶಕ್ತಿಯುತವಾಗುವುದು ಎಂದು. ನಾವು ಬೇರೆ ಇನ್ನು ಯಾವ ಭಾಷೆಯ ನುಡಿಗಳನ್ನು ಹೇಳಿಕೊಡುತ್ತಿದ್ದಾರೆ ಎಂದು ಕೇಳಿದರೆ, ಯಾವುದೂ ಇಲ್ಲ! ಉಚ್ಚಾರಣೆಯನ್ನು ಸ್ಪಷ್ಟಗೊಳಿಸಲು, ಅವರ ಪ್ರಕಾರ ಸಂಸ್ಕೃತವೊಂದೇ ಏಕ ಮಾತ್ರ ಸಾಧನ. ಪಾಸಿಟಿವ್ ವೈಬ್ರೆಶನ್ ಎಂದು ಹೇಳುತ್ತಾ ಧಾರ್ಮಿಕತೆಯನ್ನು ಎಲ್ಲರ ಮೇಲೂ ಹೇರುವಂತಹ ತಂತ್ರಗಳು ಬಹಳಷ್ಟು ಕಡೆ ಯಶಸ್ವಿಯಾಗುತ್ತಿದೆ. ಅದನ್ನು ಚರ್ಚಿಸಲು ಬೇರೆಯೇ ವಿಷಯ, ಬೇರೆಯೇ ಅಂಕಣ. ಅದೇನೇ ಇರಲಿ, ಮಕ್ಕಳಿಗೆ ಉಚ್ಚಾರಣೆಯನ್ನು ಚಂದಗೊಳಿಸಲು, ಹೊಸ ಹೊಸ ಪದಗಳನ್ನು ಸುಲಲಿತವಾಗಿ ಹೇಳುವಂತೆ ಮಾಡಲು ಇರುವ ಪರಿಮಿತಿಯಲ್ಲಿ ಬೇರೆ ಬೇರೆ ಭಾಷೆಗಳ ಸಣ್ಣ ಸಣ್ಣ ಗೀತೆಗಳನ್ನು, ನುಡಿಗಟ್ಟುಗಳನ್ನು ಹೇಳಿಕೊಡುವಂತಹ ಒಂದು ವ್ಯವಸ್ಥೆ ನಿಜಕ್ಕೂ ಪ್ರಶಂಸನೀಯ. ಕನ್ನಡದವರಿಗೆ ಉಚ್ಚರಿಸಲು ತೊಡಕಾಗುವಂತಹ ಎಷ್ಟೋ ಪದಗಳು ಮಲೆಯಾಳಂ, ತಮಿಳು, ಉರ್ದು ಭಾಷೆಗಳಲ್ಲಿವೆ. ಸ್ವರ ಹುಟ್ಟುವ ಸ್ಥಾನವೇ ವಿಭಿನ್ನವಾಗಿರುತ್ತವೆ. ಅಂತಹ ನುಡಿಗಟ್ಟುಗಳನ್ನು, ಶಿಶುಗೀತೆಗಳನ್ನು ಹೇಳಿಕೊಟ್ಟರೆ, ಅವರೇ ಹೇಳುವಂತೆ ನಮ್ಮಲ್ಲಿ ಬಳಕೆಯಿರದ ಎಷ್ಟೋ ಪದಗಳು, ನುಡಿಗಟ್ಟುಗಳು ತಿಳಿಯುತ್ತವೆ ಮತ್ತು ಉಚ್ಚಾರಣೆಗಳು ಅಭ್ಯಾಸವಾಗಿ ಸಲಿಲತೆ ಒದಗುತ್ತವೆ. ಜೊತೆಗೆ ಪ್ರಾರಂಭದಿಂದಲೇ ವಿವಿಧತೆಯ ಪರಿಚಯ ಮಕ್ಕಳಿಗಾಗುತ್ತವೆ. ಮಕ್ಕಳು ಯಾವಾಗ ವಿವಿಧತೆಯನ್ನು ಪ್ರಶಂಸೆ ಮಾಡಲು ಕಲಿಯುವರೋ ಆಗಲೇ ಅವರು ತೆರೆದುಕೊಳ್ಳಲು ಪ್ರಾರಂಭಿಸಿದರು ಎಂದರ್ಥ.

ಶಾಲೆಗೆ ಹೋಗುತ್ತಿರುವ ಸಣ್ಣ ಸಣ್ಣ ಮಕ್ಕಳು ಮನೆಯಲ್ಲಿ ಆಡುವಾಗ ತರಗತಿಗಳನ್ನು ನಿರ್ವಹಿಸುವ, ಬೋಧಿಸುವ, ಕಲಿಯುವ ಆಟವಾಡುತ್ತಿರುತ್ತಾರೆ. ಆಗ ಗುಣಾಕಾರದ ಮಗ್ಗಿ, ಪದ್ಯವೇ ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಮತ್ತೊಂದು ಮಗದೊಂದು ಹೇಳುವಂತೆ ಶಾಲೆಯಲ್ಲಿ ಹೇಳಿಕೊಟ್ಟಿರುವ ಪ್ರಾರ್ಥನೆ, ಪ್ಲೆಡ್ಜ್ (ನಾನು ಭಾರತೀಯ, ಭಾರತೀಯರೆಲ್ಲಾ ನನ್ನ ಸಹೋದರರು, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ... ಇತ್ಯಾದಿಗಳ ಪ್ರತಿಜ್ಞೆ) ಮತ್ತು ರಾಷ್ಟ್ರಗೀತೆಗಳನ್ನೆಲ್ಲಾ ಹೇಳುತ್ತಿರುತ್ತಾರೆ. ನಾನು ಹೆಚ್ಚು ಗಮನಿಸಿದಂತೆ ಕ್ರೈಸ್ತ ಆಡಳಿತ ಮಂಡಳಿ ಹಿನ್ನೆಲೆಯ ಶಾಲೆಗಳಿಂದ ಬಂದಿರುವ ಮಕ್ಕಳು ಓ ಅವರ್ ಲಾರ್ಡ್ ಬ್ಲೆಸ್ ಅವರ್ ಟೀಚರ್, ಬ್ಲೆಸ್ ಅವರ್ ಟೀಚರ್ ಇತ್ಯಾದಿ ಇಂಗ್ಲಿಷ್ ಪ್ರಾರ್ಥನೆಗಳನ್ನು ಮಾಡಿದರೆ, ಹಿಂದೂ ಆಡಳಿತವಿರುವ ಶಾಲೆಗಳ ಮಕ್ಕಳು ಅಸತೋಮ ಸದ್ಗಮಯ, ಸಹನಾವವತು ಇತ್ಯಾದಿ ಶಾಂತಿ ಮಂತ್ರಗಳನ್ನು ಕಲಿಸಿರುವುದನ್ನೂ ಹೇಳುತ್ತಿರುತ್ತಾರೆ. ಸಾಮಾನ್ಯವಾಗಿ ಅವು ಸಾರ್ವತ್ರಿಕವಾಗಿಯೇ ಇರುತ್ತದೆ. ಯಾವುದೋ ಕೆಲವು ಶಾಲೆಗಳಲ್ಲಿ ಉದ್ದೇಶ ಪೂರ್ವಕವಾಗಿ ಒಂದು ನಿಶ್ಚಿತ ಧರ್ಮದ ಐಕಾನ್‌ಗಳನ್ನು ಹೇರುವ ಪ್ರಯತ್ನವಿರುತ್ತದೆ. ಅದರೊಂದಿಗೆ ರಾಷ್ಟ್ರಗೀತೆ ಮತ್ತು ಪ್ರತಿಜ್ಞಾಪದಗಳು. ತಮಾಷೆಯೆಂದರೆ, ಮಕ್ಕಳು ಇವನ್ನೆಲ್ಲಾ ಹೇಳುವಾಗ ಅವರಿಗೆ ಇವು ಏನೆಂದೇ ತಿಳಿದಿರುವುದಿಲ್ಲ. ತಮ್ಮ ಶಾಲೆಯಲ್ಲಿ ಬಡಬಡಿಸುವ ಒಂದು ಯಾಂತ್ರಿಕ ಭಾಗವಾಗಿ ಹೇಳುತ್ತಾರೆ. ನಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ (ಕ್ರೈಸ್ತ ಪಾದ್ರಿಗಳ ಆಡಳಿತ) ಒಮ್ಮೆ ನೋಡೇ ಬಿಡುವ ಎಂದು ಯುಕೆಜಿಯಿಂದ ಹತ್ತನೆ ತರಗತಿಯವರೆಗೂ ಹಲವು ಮಕ್ಕಳನ್ನು ಅವರು ಮಾಡುತ್ತಿರುವುದು ಏನೆಂದು ಕೇಳಿದೆ. ಚರ್ಚಿಗೆ ಹೋಗುತ್ತಿರುವ ಮತ್ತು ಮನೆಯಲ್ಲಿ ಪ್ರಾರ್ಥನೆಗಳನ್ನು ಮಾಡುವ ಕೆಲವು ಮಕ್ಕಳು ತಮ್ಮ ತಂದೆ ತಾಯಿಯರು ಹೇಳಿಕೊಟ್ಟಿದ್ದನ್ನು ಮಕ್ಕಿಕಾಮಕ್ಕಿ ಹೇಳಿದರೇ ಹೊರತು ಶಾಲೆಯ ಕಡೆಯಿಂದ ಈ ಪ್ರಾರ್ಥನೆ, ಇರಲಿ ರಾಷ್ಟ್ರಗೀತೆಯ ಬಗ್ಗೆಯೂ ಕೂಡ ಸರಿಯಾದ ವೌಲಿಕ ವಿಚಾರಗಳನ್ನು ಹೇಳಿರಲಿಲ್ಲ. ಎಷ್ಟೆಷ್ಟೋ ದೊಡ್ಡ ದೊಡ್ಡ ಮಕ್ಕಳೂ ಕೂಡ ಇಂಗ್ಲಿಷ್ ಮತ್ತು ಸಂಸ್ಕೃತ ಪ್ರಾರ್ಥನೆಯನ್ನು, ರಾಷ್ಟ್ರಗೀತೆಯನ್ನೂ ಕೂಡ ತಪ್ಪುತಪ್ಪಾಗಿ ಉಚ್ಚರಿಸುತ್ತಿದ್ದರು. ಇನ್ನು ಅದರ ಅರ್ಥ, ಅಂತರಾರ್ಥವೆಲ್ಲ್ಲ ದೂರವೇ ಉಳಿಯಿತು. ಮುಕ್ತವಾದಂತಹ ವೌಲ್ಯಗಳನ್ನು ಗುರುತಿಸುವ ಗಾಂಭೀರ್ಯದ ಬದಲು, ನಮ್ಮದು ಸನಾತನ ಅಥವಾ ಶ್ರೇಷ್ಠ ಅಥವಾ ಪ್ರಪಂಚದಲ್ಲಿ ಹೆಚ್ಚಿನ ಅನುಯಾಯಿಗಳಿರುವ ಧಾರ್ಮಿಕತೆ ಎಂದೋ ಅಥವಾ ದೇವರೆಂದರೆ ಒಬ್ಬ ಸ್ಟ್ರಿಕ್ಟ್ ಆಡಳಿತಾಧಿಕಾರಿ, ಎಲ್ಲವನ್ನೂ ಸಿಸಿ ಕ್ಯಾಂ ನಲ್ಲಿ ನೋಡಿಕೊಂಡು, ಅದನ್ನೆಲ್ಲಾ ಗುರುತು ಹಾಕಿಕೊಂಡು, ದಂಡನೆ ನೀಡುವಂತವನು ಎಂಬಂತಹ ಧೋರಣೆಗಳನ್ನು ಹೊಂದುವಂತಹ ಮನೋಭಾವಗಳನ್ನು ಗುರುತಿಸಿದ್ದೇನೆ. ಇನ್ನು ನಾಸ್ತಿಕ ಮನೋಭಾವದ ಪೋಷಕರ ಮಕ್ಕಳಂತೂ ಇವನ್ನು ಒಂದು ಜೋಕ್ ನೋಡುವಂತೆ ನೋಡುತ್ತಿರುತ್ತಾರೆ. ಮನೆಗೆ ಬಂದ ಮೇಲೆ ಹಿರಿಯರೊಂದಿಗೋ ಅಥವಾ ಗೆಳೆಯರೊಂದಿಗೋ ಅದರ ಬಗ್ಗೆ ತಮಾಷೆ ಮಾಡುತ್ತಿರುತ್ತಾರೆ ಅಥವಾ ಅಣಕು ಪ್ರಾರ್ಥನೆಗಳನ್ನು ಮಾಡುತ್ತಿರುತ್ತಾರೆ. ಶಾಲೆಗಳಲ್ಲಿ ಪ್ರಾರ್ಥನೆಗಳು ಬೇಕೋ ಬೇಡವೋ. ಬೇಕು ಮತ್ತು ಬೇಡ. ಸಾರ್ವತ್ರಿಕವಾದಂತಹ ವೌಲ್ಯಗಳನ್ನು ನೀಡುವಂತಹ, ಅಂತಹುದರ ಬಗ್ಗೆ ಮುದವಾದ ಗಮನ ಸೆಳೆಯುವಂತಹ ಪ್ರಾರ್ಥನೆಗಳು ಬೇಕು. ಹಾಗೆಯೇ ಯಾವುದೋ ಒಂದು ಪೌರಾಣಿಕ ವ್ಯಕ್ತಿಯ ಗುಣವರ್ಣನೆ ಮಾಡುವಂತಹ, ಸ್ತುತಿಸುವಂತಹ, ಅವನೇ ಗ್ರೇಟ್ ಅವನಿಲ್ಲದೆ ಇನ್ನೊಬ್ಬನಿಲ್ಲ ಎಂದು ದೇವರ ಪರಿಕಲ್ಪನೆಯನ್ನೇ ಕಿರಿದಾಗಿಸುತ್ತಾ, ಪ್ರಾರ್ಥನೆಯ ಅರ್ಥವನ್ನು ಸಂಕುಚಿತಗೊಳಿಸುವಂತಹ, ವ್ಯಕ್ತಿಪೂಜೆ ಮಾಡುವಂತಹ ಪ್ರಾರ್ಥನೆಗಳು ಬೇಡ. ಹಾಗೂ ಎಂದಿಗೂ ಪ್ರಾರ್ಥನೆ ಮತ್ತು ಧ್ಯಾನಗಳಿಗೆ, ಯೋಗಾಸನ, ಪ್ರಾಣಾಯಾಮದಂತಹ ಅಭ್ಯಾಸಗಳಿಗೂ ಕೂಡ ಯಾವುದೇ ಧಾರ್ಮಿಕತೆಯ ಲೇಪ ಹಚ್ಚಿ ಕಲಿಯಲು ಉತ್ತೇಜಿಸಬಾರದು, ಅದೇ ಕಾರಣದಿಂದ ನಿರಾಕರಿಸಲೂ ಕಲಿಸಬಾರದು. ಹಾಗೆಯೇ ವಿವಿಧ ಧರ್ಮೀಯ ಹಿನ್ನೆಲೆಗಳನ್ನು ಹೊಂದಿರುವ ಆ ಪ್ರಾರ್ಥನೆಗಳನ್ನು ಹೇಳಿಕೊಡುವಾಗ ಆಯಾ ಧರ್ಮವನ್ನೂ ಉಲ್ಲೇಖಿಸುತ್ತಾ, ಅವುಗಳಲ್ಲಿ ಇಂತಹ ಧ್ವನಿಗಳಿವೆ, ಆಶಯಗಳಿವೆ ಎಂಬುದರ ಪರಿಚಯವೂ ಅಲ್ಲಾಗಬೇಕು. ಆಗ ಮಕ್ಕಳಿಗೆ ಯಾವುದೊಂದು ಧರ್ಮದ ಬಗ್ಗೆ ಅಂಧಾಭಿಮಾನವೋ ಅಥವಾ ಮುಂದೆ ತಿರಸ್ಕಾರ ಮನೋಭಾವವೋ ಉಂಟಾಗದಿರುವಂತ ದಿಕ್ಕಿನಲ್ಲಿ ಒಂದಷ್ಟು ಮಾನಸಿಕ ತಯಾರಿ ಆಗಬಹುದು. ಸಹನಾವವತು ಸಹನೌಭುನಕ್ತು ಓಂ ಸಹನಾವವತು ಸಹನೌಭುನಕ್ತು ಸಹವೀರ್ಯಂ ಕರವಾವಹೈ, ತೇಜಸ್ವಿ ನಾವಧೀತ ಮಸ್ತು, ಮಾವಿದ್ವಿಷಾವಹೈಃ, ಓಂ ಶಾಂತಿಃ ಶಾಂತಿಃ ಶಾಂತಿಃ

(ಜೊತೆಜೊತೆಯಲಿ ನಾವು ಇರುವ, ಆಹಾರ ಸೇವಿಸುವ, ಒಟ್ಟಾಗಿ ಶಕ್ತಿಶಾಲಿಗಳಾಗೋಣ, ಕಲಿಯುತ್ತಾ ಕಲಿಯುತ್ತಾ ಒಟ್ಟಿಗೇ ತೇಜಸ್ವಿಗಳಾಗೋಣ, ನಾವು ಒಬ್ಬರನ್ನೊಬ್ಬರು ದ್ವೇಷಿಸದೇ ಇರುವಂತಾಗಲಿ. ಶಾಂತಿಯಿರಲಿ, ಶಾಂತಿಯಿರಲಿ, ಶಾಂತಿಯಿರಲಿ) ಉಪನಿಷತ್ತುಗಳಿಂದ ಆಯ್ದಂತಹ ಈ ಶ್ಲೋಕ ಬಹಳಷ್ಟು ಶಾಲೆಗಳಲ್ಲಿ ಸಾಮಾನ್ಯವಾಗಿ ಊಟ ಮಾಡುವ ಮುನ್ನ ಹೇಳಿಸುವುದುಂಟು. ಅಸತೋಮ ಸದ್ಗಮಯ, ಪೂರ್ಣಮದ ಪೂರ್ಣಮಿದ, ಭದ್ರಂ ಕರ್ಣೇಭಿಶೃಣುಯಾಮ ದೇವಾ; ಈ ಬಗೆಯ ಪ್ರಾರ್ಥನೆಗಳು ಸಾರ್ವತ್ರಿಕವಾಗಿವೆ. ಜೊತೆಗೆ ಇವುಗಳನ್ನು ಶಾಂತಿ ಮಂತ್ರ ಅಥವಾ ಶಾಂತಿ ಪಾಠಗಳೆಂದೇ ಕರೆಯುವುದು. ಇವು ಯಾವುದೇ ದೇವತೆಗಳ ಸ್ತುತಿಗಳಾಗಿರುವುದಿಲ್ಲ. ಬದಲಾಗಿ ಮನುಷ್ಯರ ಪರಸ್ಪರ ಸಂಬಂಧಗಳನ್ನು ಸಾಮರಸ್ಯಗೊಳಿಸಿಕೊಳ್ಳುವಂತಹ, ಪ್ರಕೃತಿಯ ವಸ್ತು ಮತ್ತು ವಿಷಯಗಳನ್ನು, ಕೊಡುಗೆಗಳನ್ನು ಸ್ವೀಕರಿಸುತ್ತಾ ಧನ್ಯವಾದಗಳನ್ನು ಅರ್ಪಿಸುವಂತಹ, ಆಂತರಿಕ ಶಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳುವಂತಹ ಆಶಯಗಳನ್ನು ಹೊಂದಿರುತ್ತವೆ. ಅಂತಹ ಪ್ರಾರ್ಥನೆಗಳನ್ನು ಯಾವುದೇ ಬಗೆಯ ಆಡಳಿತ ಮಂಡಳಿಯಿದ್ದರೂ ಪರಿಗಣಿಸಬೇಕೇ ಹೊರತು ಪ್ರತಿಯೊಂದನ್ನೂ ಧಾರ್ಮಿಕತೆಯ ದೃಷ್ಟಿಯಿಂದಲೇ ನೋಡುವುದು ಸಲ್ಲದು. ಯಾವುದೇ ಧಾರ್ಮಿಕತೆಯ ಮೂಲವನ್ನು ಹೊಂದಿದ್ದರೂ ಒಮ್ಮೆ ಅದು ವಿಶ್ವಮಾನವರಿಗೆ ಅರ್ಪಿಸಿದ ಕೂಡಲೇ ಅದು ಸಾರ್ವತ್ರಿಕವಾಗುತ್ತದೆ. ಮಾಡಬೇಕಾದುದೇನೆಂದರೆ, ಬೋಧಕರು ಅವುಗಳನ್ನು ಹೇಳಿಕೊಡುವಾಗ ಅರ್ಥವನ್ನೂ ಮತ್ತು ಆಶಯವನ್ನೂ ಮನವರಿಕೆ ಮಾಡಿಕೊಡಬೇಕು. ಬರಿಯ ಅದೊಂದು ಕಂಪಲ್ಸರಿ (ಸಂಪ್ರದಾಯ) ಎಂಬಂತೆ ಬಿತ್ತುತ್ತಾ ಹೋದರೆ ಅದರಿಂದ ಏನೂ ಪ್ರಯೋಜನವಿಲ್ಲ. ನಿಜಕ್ಕೂ ಪ್ರಾರ್ಥನೆಯ ಪರಂಪರೆ ಮಾನಸಿಕವಾಗಿ ವಿಶ್ರಾಂತಿಯನ್ನೂ, ತನ್ಮೂಲಕ ಶಕ್ತಿಯನ್ನು ನೀಡುವುದೇ ಆಗಿದೆ. ಜೊತೆಗೆ ಅದು ಮಾಡುವ ಕೆಲಸದಲ್ಲಿ ಮತ್ತು ಪರಿಸರದಲ್ಲಿ ಕಾಯಕದ ಗಾಂಭೀರ್ಯವನ್ನು ಹೆಚ್ಚಿಸುತ್ತದೆ. ಗಮನಿಸಲೇಬೇಕಾದ ಸಂಗತಿಯೆಂದರೆ ಪ್ರಾರ್ಥನೆಗಳು ಏನನ್ನು ಉದ್ದೇಶಿಸಿವೆ ಎಂದು.

ಊಟ ಮಾಡುವಾಗ ಸಹನಾವವತು ಸಹನೌಭುನಕ್ತು ಹೇಳುವುದಕ್ಕೂ, ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಬೇ ಹೇಳುವುದಕ್ಕೂ ವ್ಯತ್ಯಾಸವಿದೆ. ಸಹನಾವವತು ಸಾರ್ವತ್ರಿಕವಾಗಿದ್ದರೆ, ಅನ್ನಪೂರ್ಣೇ ಒಂದು ಪೌರಾಣಿಕ ಪಾತ್ರಕ್ಕೆ ಆಹಾರದ ಗುಣವನ್ನು ಆರೋಪಿಸುವುದಾಗಿದೆ. ಸಹನಾವವತು ನಾವು ಹೀಗಿರೋಣ, ನಾವು ಹೀಗೆ ಬಾಳೋಣ ಎಂದು ಹೇಳಿದರೆ, ಅನ್ನಪೂರ್ಣೇ ಮಂತ್ರದಲ್ಲಿ ಅನ್ನಪೂರ್ಣೇ ಎಂಬ ದೇವಿಯಲ್ಲಿ ಆಹಾರ, ಜ್ಞಾನ, ಸೌಭಾಗ್ಯ (ಕೆಲವೊಂದು ಪಾಠಗಳಲ್ಲಿ ವೈರಾಗ್ಯ) ಗಳನ್ನು ಭಿಕ್ಷೆ (ವಿನಯದ ರೂಪ) ಬೇಡುವುದಾಗಿರುತ್ತದೆ. ಸಹನಾವವತು ನಮ್ಮತನವನ್ನು ಇತರರೊಂದಿಗೆ ಸಾಮರಸ್ಯದಿಂದ ಇರುವುದನ್ನು ಉದ್ದೇಶಿಸಿದರೆ, ಅನ್ನಪೂರ್ಣೇ ದೇವಿಮಹಾತ್ಮೆಯನ್ನು, ಒಂದು ಪೌರಾಣಿಕ ಪ್ರತಿಮೆಗೆ ಶರಣಾಗುವುದನ್ನು ಸೂಚಿಸುತ್ತದೆ. ಮಕ್ಕಳಿಗೆ ಬೇಕಾಗಿರುವುದು ತಾವು ಮತ್ತು ತಮ್ಮೆಡನೆ ಇರುವವರೊಡನೆ ಸಾಮರಸ್ಯದಿಂದ, ಒಗ್ಗಟ್ಟಾಗಿ ಸಾಗುವ ಆಶಯವೇ ಹೊರತು, ಯಾರೋ ಒಂದು ಪೌರಾಣಿಕ ವ್ಯಕ್ತಿಯ ಕರುಣೆಗಾಗಿ ಹಾತೊರೆಯುವುದಲ್ಲ. ಮಠ ಮತ್ತು ಆಶ್ರಮಗಳ ಶಾಲೆಗಳು ಅದು ಮಠವೊಂದು ನಡೆಸುತ್ತಿರುವ ಶಾಲೆ. ಸ್ವಾಮೀಜಿಯವರ ಬೆಳ್ಳಿಯ ಪಾದುಕೆಗಳನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ಪೂಜಾಸ್ಥಾನದಲ್ಲಿಟ್ಟಿರುತ್ತಾರೆ. ಎಲ್ಲಾ ಮಕ್ಕಳೂ ಆ ಪಾದುಕೆಗೆ ನಮಸ್ಕರಿಸಿ ಹೋಗಬೇಕಾಗಿರುವುದು ಸಂಪ್ರದಾಯವಾಗಿಸಿದ್ದಾರೆ. ಅದನ್ನು ನೋಡಿ ಗಾಬರಿಗೊಂಡು ಆಡಳಿತಾಧಿಕಾರಿಗಳಲ್ಲಿ ವಿಚಾರಿಸಿದೆ ಇದು ಏಕೆ ಹೀಗೆಂದು. ಅದಕ್ಕೆ ಅವರು ಹೇಳಿದ್ದು, ಸ್ವಾಮೀಜಿಗಳ ಆಶಯ ಮತ್ತು ಉದ್ದೇಶಗಳನ್ನು ಪಸರಿಸಲೆಂದೇ ಈ ಶಾಲೆಯನ್ನು ಸ್ಥಾಪಿಸಿದ್ದು. ಹಾಗಾಗಿ ಈ ಸಂಪ್ರದಾಯವು ನಮ್ಮ ಶಾಲೆಯಲ್ಲಿದೆ. ಅವರು ಯಾವ ಸ್ವಾಮೀಜಿಯ ಕುರಿತು ಮಾತಾಡುತ್ತಿದ್ದಾರೋ ಆ ಸ್ವಾಮೀಜಿ ಬದುಕಿದ್ದಾಗಲೇ ನಾನು ಅವರ ಕಾರ್ಯಚಟುವಟಿಕೆಗಳನ್ನು ಅರಿತಿದ್ದೆ. ಅವರು ಉತ್ತಮ ಮನಸ್ಸಿನ ಸಂಸ್ಕಾರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಅಪಾರ ಒತ್ತುಕೊಟ್ಟಿದ್ದ ಅವರು ಅನೇಕಾನೇಕ ಪುಸ್ತಕಗಳನ್ನು ರಚಿಸಿದ್ದರು. ನಾನು ಓದಿದ್ದೇನೆ ಕೂಡ. ಯೋಗ, ಪ್ರಾಣಾಯಾಮ, ಧ್ಯಾನ, ಪ್ರಾರ್ಥನೆಗಳಿಗೆ ಮಹತ್ವ ಕೊಟ್ಟಿದ್ದರು, ಅದರ ಮೂಲಕ ವ್ಯಕ್ತಿತ್ವ ವಿಕಾಸದ ಉದ್ದೇಶವನ್ನು ಹೊಂದಿದ್ದರು. ಆದರೆ ಅವರ ಕಾಲಾನಂತರ ಅವರ ಆಶಯಗಳ ವೈಜ್ಞಾನಿಕ ಮತ್ತು ವೈಚಾರಿಕ ಅನುಷ್ಠಾನಗಳನ್ನು ಬಿಟ್ಟು ಪಾದುಕೆ ಪೂಜಿಸುವ ಸಂಪ್ರದಾಯವನ್ನು ಹುಟ್ಟು ಹಾಕಿಕೊಂಡಿದ್ದಾರೆ. ಇದರಿಂದ ಮಕ್ಕಳಿಗೆ ಸ್ವಾಮೀಜಿಯು ಅನುಸರಿಸಿಕೊಂಡು ಬಂದಂತಹ ಒಂದು ಕ್ರಮದ ಪರಂಪರೆಯು ಪರಿಚಿತವಾಗುವ ಬದಲು, ಗೊಡ್ಡು ಸಂಪ್ರದಾಯವನ್ನು ರೂಢಿಗೊಳಿಸಿದಂತಾಗುತ್ತದೆ. ಬಹಳಷ್ಟು ಆಶ್ರಮದ ಶಾಲೆಗಳಲ್ಲಿ ಆಯಾ ಸ್ವಾಮೀಜಿಯವರ ವ್ಯಕ್ತಿಪೂಜೆಯನ್ನು ಪ್ರಧಾನವಾಗಿಸಿಕೊಂಡಿದ್ದಾರೆ. ಇದರಿಂದ ತಮ್ಮ ವ್ಯಕ್ತಿಪೂಜೆಗೆ ಶಿಕ್ಷಣ ಕ್ಷೇತ್ರವನ್ನು ಬಳಸಿಕೊಂಡಂತೆ ಕಾಣುತ್ತದೆಯೇ ಹೊರತು, ಶಿಕ್ಷಣದ ಉದ್ದೇಶವು ಪ್ರಧಾನವೆನಿಸುವುದಿಲ್ಲ. ಧಾರ್ಮಿಕ ವೇದಿಕೆಯ ಮೇಲೆ ಅಥವಾ ಶಾಲಾ ವೇದಿಕೆಗಳ ಮೇಲೆ ಎಲ್ಲರೂ ದೇವರ ಮಕ್ಕಳೇ, ನಾವೆಲ್ಲರೂ ಸೋದರ ಸೋದರಿಯರು, ಪ್ರೀತಿ, ಕರುಣೆ, ಸಮತೆ, ಮಾನವತೆ ಎಂದೆಲ್ಲಾ ಮಾತಾಡುವ ಸ್ವಾಮಿಗಳು ಮತ್ತು ಪಾದ್ರಿಗಳು ತಮ್ಮದೇ ಶಾಲೆಯ ಮಕ್ಕಳೊಡನೆ ವ್ಯವಹರಿಸುವಾಗ ಯಾವ ಹಿಟ್ಲರ್‌ಗೂ ಕಡಿಮೆಯಿಲ್ಲದಂತೆ ಸರ್ವಾಧಿಕಾರದಲ್ಲಿ ಬೆದರಿಸುವುದನ್ನು, ಭೀತಿ ಹುಟ್ಟಿಸುವುದನ್ನು, ಶಿಕ್ಷಿಸುವುದನ್ನು ನೋಡಿದ್ದೇನೆ. ಇದರಿಂದ ಮಕ್ಕಳಲ್ಲಿ ಅವರ ಆಷಾಢಭೂತಿತನ, ಕೃತಕತೆ ಪರಿಚಯವಾಗುತ್ತದೆಯೇ ಹೊರತು, ಅವರು ಮಾಡುವ ಪ್ರಾರ್ಥನೆ ಮತ್ತು ಬೋಧನೆಗಳಲ್ಲಿ ಯಾವ ಶ್ರದ್ಧೆಯೂ ಹುಟ್ಟುವುದಿಲ್ಲ. ಬದಲಿಗೆ ಅದರ ಬಗ್ಗೆ ಜಿಗುಪ್ಸೆ ಅಥವಾ ಅವಹೇಳನದ ಮನೋಭಾವ ಹುಟ್ಟುತ್ತಾ ಹೋಗುವುದು. ಶಾಲೆಗಳಲ್ಲಿ ಪ್ರಾರ್ಥನೆ ನಿಜಕ್ಕೂ ಗಂಭೀರವಾದ ವಿಷಯ. ದೇವಸ್ಥಾನದಲ್ಲಿ, ಚರ್ಚಿನಲ್ಲಿ, ಮಸೀದಿಯಲ್ಲಿ ಮಾಡಿಕೊಳ್ಳುವ ಪ್ರಾರ್ಥನೆ, ಭಜನೆಗಳು ಪರಿಣಾಮಕಾರಿಯಾದದ್ದು ಹೌದೋ ಅಲ್ಲವೋ ನನಗೆ ತಿಳಿಯದು. ಆದರೆ ಶಾಲೆಗಳಲ್ಲಿ ಮಕ್ಕಳ ಎಳೆಯ ಮನುಸುಗಳಲ್ಲಿ ಮುದ್ರೆ ಒತ್ತುವಂತಹ, ಅವರ ಮನೋಭೂಮಿಕೆಯಲ್ಲಿ ವಿಚಾರಗಳನ್ನು ಬಿತ್ತುವಂತಹ ಪ್ರಾರ್ಥನೆಗಳ ಬಗೆಗಳು, ಅವುಗಳನ್ನು ಹೇಳಿಕೊಡುವಂತವರ ಒಲವು, ನಿಲುವು ಮತ್ತು ಮನಸ್ಥಿತಿಗಳು; ಎಲ್ಲವೂ ದೀರ್ಘಕಾಲದ ಪರಿಣಾಮಗಳನ್ನು ಉಂಟುಮಾಡುವವು ಎಂಬ ಪ್ರಜ್ಞೆ ಶಿಕ್ಷಕರು ಮತ್ತು ಆಡಳಿತ ಮಂಡಳಿಗಳಲ್ಲಿರಬೇಕು. ಪ್ರಾರ್ಥನೆಗಳಿಲ್ಲದೆಯೇ ಶಾಲೆಗಳು ಖಂಡಿತವಾಗಿ ಚೆನ್ನಾಗಿಯೇ ನಡೆಯುವವು. ಮಕ್ಕಳು ಚೆನ್ನಾಗಿಯೇ ಕಲಿಯುವವು. ಆದರೆ ಪ್ರಾರ್ಥನೆಗಳೂ ನಮ್ಮ ಶಾಲೆಯಲ್ಲಿರಬೇಕೆಂದರೆ ಎಚ್ಚರಿಕೆ ವಹಿಸಲಿಲ್ಲವೆಂದರೆ ಪೀಳಿಗೆಗಳು ಅಸ್ವಸ್ಥವಾಗುತ್ತವೆ. ವಾಸ್ತವವಾಗಿ ಮಠಗಳು ಮತ್ತು ಆಶ್ರಮಗಳು ಶಾಲೆಗಳನ್ನು ನಡೆಸಲು ಪ್ರಾರಂಭಿಸಿದ್ದು ಎಲ್ಲಾ ವರ್ಗದವರಿಗೂ ಶಿಕ್ಷಣವು ಉನ್ನತ ಮಟ್ಟದಲ್ಲಿ ಸಿಗಲಿ, ಅದು ರಾಜಕೀಯವಾಗಿ ಪ್ರೇರಿತವಾಗಿರದಿರಲಿ, ನೈತಿಕವಾದ ನೆಲೆಗಟ್ಟು ಬಲಗೊಂಡಿರಲಿ ಎಂದು. ಆದರೆ, ಮಠ ಮತ್ತು ಆಶ್ರಮಗಳಿಗೆ ಜಾತಿ ಅಥವಾ ಧರ್ಮಗಳ ಲೇಪಗಳು ಅಂಟಿಕೊಂಡಿರುವುದರಿಂದ, ಅಲ್ಲಿನ ಆಡಳಿತಾಧಿಕಾರಿಗಳು ಮತ್ತು ಶಿಕ್ಷಕರು ಆಯಾ ಜಾತಿಯ, ಧರ್ಮದ ಧಾರ್ಮಿಕ ಮತ್ತು ಮುಖಂಡರ ಓಲೈಸಲು, ಮೆಚ್ಚುಗೆ ಗಳಿಸಲು ಮಕ್ಕಳಲ್ಲಿ ಅವುಗಳನ್ನು ತುರುಕುತ್ತಾ ಹೋಗುತ್ತಾರೆ. ಯಾರೋ ಹಿರಿಯ ಸ್ವಾಮೀಜಿಗಳ ಆದರ್ಶ, ಉದ್ದೇಶವು ಅದೆಷ್ಟೇ ಉದಾತ್ತ ಮತ್ತು ಉನ್ನತವಾಗಿದ್ದರೂ ಅವೆಲ್ಲವೂ ಇಂತಹ ಹೊಗಳುಭಟ್ಟರಿಂದ ಸರ್ವನಾಶವಾಗುತ್ತವೆ ಹಾಗೂ ಅವರ ಆಶಯಗಳು ಮಕ್ಕಳಿಗೆ ಮುಟ್ಟುವುದೇ ಇಲ್ಲ. ಜ್ಞಾನ - ಅರ್ಧಂಬರ್ಧ ಜ್ಞಾನ

ನಾಲ್ಕು ಕಪ್ಪೆಗಳು ನದಿಯ ಪ್ರವಾಹದಲ್ಲಿ ತೇಲಿಕೊಂಡು ಹೋಗುತ್ತಿದ್ದ ಮರದ ದಿಮ್ಮಿಯೊಂದರ ಮೇಲೆ ಕುಳಿತು ವಟಗುಟ್ಟುತ್ತಿದ್ದವು. ಪ್ರವಾಹದ ಭರತ ಜೋರಾಗಿ ದಿಮ್ಮಿ ನದಿಯ ಇಳಿಜಾರಿನಲ್ಲಿ ರಭಸದಿಂದ ಸಾಗತೊಡಗಿತು. ದಿಮ್ಮಿಯನ್ನು ಪ್ರವಾಹ ಸೆಳೆದೊಯ್ಯುತ್ತಿದ್ದ ರಭಸದಿಂದ ಕಪ್ಪೆಗಳಿಗೆ ರೋಮಾಂಚನವಾಯಿತು. ಅವು ಇಷ್ಟು ವೇಗದಲ್ಲಿ, ಇಷ್ಟೊಂದು ರಭಸಗತಿಯಲ್ಲಿ ಎಂದೂ ಪಯಣಿಸಿರಲಿಲ್ಲ.

ಸ್ವಲ್ಪ ದೂರ ಸಾಗಿದ ಅನಂತರ ಮೊದಲ ಕಪ್ಪೆ ಹೇಳಿತು: ‘‘ಅಯ್ಯೆ ಮಂಡೂಕ ಮಿತ್ರ, ಇದೊಂದು ಅದ್ಭುತವಾದ ದಿಮ್ಮಿ. ಅದು ಜೀವಂತ ಇರುವಂತೆ ಚಲಿಸುತ್ತಿರುವುದು ನದಿ. ನದಿ ರಭಸದಲ್ಲಿ ಸಮುದ್ರದತ್ತ ಹರಿಯುತ್ತಿದೆ. ತನ್ನೊಡನೆ ಮರದ ದಿಮ್ಮಿಯನ್ನೂ ಸೆಳೆದುಕೊಂಡು ಹೋಗುತ್ತಿದೆ, ಅಷ್ಟೆ.’’

ಮೂರನೆಯ ಮಂಡೂಕ ಹೇಳಿತು: ‘‘ನದಿಯೂ ಚಲಿಸುತ್ತಿಲ್ಲ, ದಿಮ್ಮಿಯೂ ಚಲಿಸುತ್ತಿಲ್ಲ. ಚಲನೆ ಇರುವುದು ನಮ್ಮ ಚಿಂತನೆಯಲ್ಲಿ. ಚಿಂತೆ ಇಲ್ಲದೆ ಯಾವುದೂ ಚಲಿಸದು.’’

ಹಾಗಿದ್ದಲ್ಲಿ ನಿಜವಾಗಿ ಚಲಿಸುತ್ತಿರುವುದು ಯಾವುದು? ಮೂರು ಕಪ್ಪೆಗಳ ಮಧ್ಯೆ ವಾಗ್ವಾದ ಶುರುವಾಯಿತು. ಜೋರು, ಬಿಸಿಬಿಸಿ ಜಗಳವಾಯಿತು. ಒಂದು ಕಪ್ಪೆಯ ಮಾತನ್ನು ಇನ್ನೊಂದು ಒಪ್ಪಿಕೊಳ್ಳಲಿಲ್ಲ. ಆಗ ಅವು ನಾಲ್ಕನೆಯ ಮಂಡೂಕ ಮಿತ್ರನತ್ತ ಮುಖ ಮಾಡಿದವು. ನಾಲ್ಕನೆಯ ಕಪ್ಪೆ ಉಳಿದವುಗಳ ವಟವಟ ಕೇಳಿಸಿಕೊಂಡು ಸುಮ್ಮನೆ ಕುಳಿತಿತ್ತು. ನಾಲ್ಕನೆಯ ಕಪ್ಪೆಯ ಅಭಿಪ್ರಾಯ ಕೇಳಿದವು. ನಾಲ್ಕನೆಯ ಕಪ್ಪೆ ಹೇಳಿತು:

‘‘ನಿಮ್ಮೆಲ್ಲರ ಮಾತು ಸರಿಯಾಗಿದೆ. ನಿಮ್ಮ ವಾದಗಳಲ್ಲಿ ತಪ್ಪಿಲ್ಲ. ನೀವೆಲ್ಲರೂ ಹೇಳುವುದು ಸರಿಯೇ. ದಿಮ್ಮಿ, ನೀರು ಮತ್ತು ನಿಮ್ಮ ಆಲೋಚನೆಗಳು ಇವೆಲ್ಲವೂ ಚಲಿಸುತ್ತಿವೆ.’’

ಇದನ್ನು ಕೇಳಿ ಮೂರು ಕಪ್ಪೆಗಳಿಗೂ ಕೋಪ ಬಂತು. ಏಕೆಂದರೆ ತಾನು ಹೇಳಿದ್ದೇ ಸಂಪೂರ್ಣ ಸತ್ಯವಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅವು ಸಿದ್ಧವಾಗಿರಲಿಲ್ಲ. ಉಳಿದೆರಡು ಕಪ್ಪೆಗಳ ಅಭಿಪ್ರಾಯವೂ ಸಂಪೂರ್ಣವಾಗಿ ತಪ್ಪಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆ ವೇಳೆಗೆ ದಿಢೀರನೆ ಒಂದು ವಿಚಿತ್ರ ಘಟಿಸಿತು. ಮೂರು ಕಪ್ಪೆಗಳು ಸೇರಿಕೊಂಡು ನಾಲ್ಕನೆಯ ಕಪ್ಪೆಯನ್ನು ದಿಮ್ಮಿಯ ಮೇಲಿಂದ ನದಿಗೆ ತಳ್ಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News