ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಹಸ್ಯಗಳು
ಜಾಗತಿಕವಾಗಿ ಅತೀ ಹೆಚ್ಚು ಬಳಕೆಯಾಗುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡಾ. ಇದರಲ್ಲಿ ಅತೀ ಕಸ್ಟಮೈಸ್ ಆದ ಆಪರೇಟಿಂಗ್ ಸಿಸ್ಟಮ್ ಇದೆ ಮತ್ತು ಇದರಂತೆ ಹೊಂದಿಕೊಳ್ಳುವ ಗುಣವು ಇತರ ಯಾವುದೇ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಬರುವುದಿಲ್ಲ. ಆದರೆ ಬಹಳ ಮಂದಿಗೆ ತಮ್ಮ ಆಂಡ್ರಾಯ್ಡಾ ಫೋನಿನ ಬಹಳಷ್ಟು ಸತ್ಯಗಳು ಗೊತ್ತಿಲ್ಲ.
- ಆಂಡ್ರಾಯ್ಡಾ ನಮ್ಮ ಮೊಬೈಲ್‌ಗಳಲ್ಲಿ ಜಿಮೈಲ್ ಖಾತೆಯಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ನಾವು ಈವರೆಗೆ ಫೋನಿಗೆ ಇನ್‌ಸ್ಟಾಲ್ ಮಾಡಿಕೊಂಡಿರುವ ಎಲ್ಲಾ ಅಪ್ಲಿಕೇಶನುಗಳ ವಿವರ ಗೂಗಲ್ ಐಡಿಯಿಂದ ಪಡೆದುಕೊಳ್ಳಬಹುದು. ಗೂಗಲ್ ಸರ್ಚ್ ಬಾರ್‌ನಲ್ಲಿ ಪ್ಲೇ ಸ್ಟೋರ್‌ಗೆ ಹೋಗಿ ಮೈ ಆಪ್ಸ್ ವಿಭಾಗದಲ್ಲಿ ಮೆಲ್ಲಗೆ ಬಡಿದರೆ ನಿಮಗೆ ಪಟ್ಟಿ ಸಿಗುತ್ತದೆ. ಮೈ ಪರ್ಚೇಸಸ್ ವಿಭಾಗದಲ್ಲಿ ನೀವು ಪ್ಲೇಸ್ಟೋರಿನಲ್ಲಿ ಖರೀದಿಸಿದ ಎಲ್ಲಾ ಆಪ್ ವಿವರ ಸಿಗುತ್ತದೆ.
- ಮೊಬೈಲಿಗೆ ಲಾಕ್ ಇಲ್ಲದೆ ಕೆಲಸ ಮಾಡಲು ಆಗುವುದಿಲ್ಲ. ಆದರೆ ಈ ಲಾಕ್ ಕೆಲವೊಮ್ಮೆ ಪದೇ ಪದೇ ಬಳಸುವ ಆಪ್‌ಗೆ ಕಿರಿಕಿರಿ ತರುತ್ತದೆ. ಹಾಗಿರುವಾಗ ಸ್ಮಾರ್ಟ್ ಲಾಕ್ ಬಳಸಿಕೊಂಡು ಅದನ್ನು ಮಾತ್ರ ಪ್ರತ್ಯೇಕ ಲಾಕ್ ಮಾಡಿಕೊಳ್ಳಬಹುದು. ಸೆಟ್ಟಿಂಗ್‌ನಲ್ಲಿ ಸೆಕ್ಯುರಿಟಿ ಆಯ್ಕೆಗೆ ಹೋಗಿ ಸ್ಮಾರ್ಟ್ ಲಾಕ್ ಮೇಲೆ ಟ್ರಸ್ಟೆಡ್ ಪ್ಲೇಸಸ್ ಎನ್ನುವ ಕಡೆ ಟಾಪ್ ಮಾಡಿ. ಎಲ್ಲೆಲ್ಲ ನೀವು ಪ್ರತೀ ಬಾರಿ ಪಾಸ್‌ಕೋಡ್ ಬರೆಯಲು ಇಷ್ಟಪಡುವುದಿಲ್ಲವೋ ಅದನ್ನು ಅನ್‌ಲಾಕ್ ಮಾಡಿಕೊಳ್ಳಬಹುದು. - ಕೆಲವೊಮ್ಮೆ ನೊಟಿಫಿಕೇಶನ್ ಬೇಡ ಎಂದು ಡಿಲೀಟ್ ಮಾಡಿರುತ್ತೇವೆ. ಆದರೆ ಅವುಗಳಲ್ಲಿ ಕೆಲವು ಬೇಕಾಗಿರುತ್ತವೆ. ಆಗ ಸರಳ ಟ್ರಿಕ್ ಮೂಲಕ ಅದನ್ನು ಪಡೆದುಕೊಳ್ಳಬಹುದು. ಆಂಡ್ರಾಯ್ಡಾ ವಿಡ್ಗೆಟ್ಸ್ ಮೇಲೆ ಟಾಪ್ ಮಾಡಿ. ಅಲ್ಲಿರುವ ಸೆಟ್ಟಿಂಗ್ ಶಾರ್ಟ್‌ಕಟ್ ವಿಡ್ಜೆಟನ್ನು ಹೋಂಸ್ಕ್ರೀನಿಗೆ ಇಡಿ. ಇಲ್ಲಿ ನೀವು ನೊಟಿಫಿಕೇಶನ್ ಲಾಗ್ ಆರಿಸಬಹುದು.
- ಸೈಲೆಂಟ್ ಮೋಡ್‌ನಲ್ಲಿರೋ ಸ್ಮಾರ್ಟ್ ಫೋನನ್ನೂ ಕಂಡುಹಿಡಿಯಬಹುದು. ಆಗ ಆಂಡ್ರಾಯ್ಡಾ ಡಿವೈಸ್ ಮ್ಯಾನೇಜರ್ ಬಳಸಿಕೊಂಡಿರಬೇಕು. ಇದನ್ನು ಡಾಟಾ ಪಡೆಯಲು ಮತ್ತು ಡಿಲೀಟ್ ಮಾಡಲೂ ಮತ್ತು ಫೋನ್ ಕಳೆದು ಹೋದಾಗ ಲಾಕ್ ಮಾಡಲೂ ಬಳಸಬಹುದು. ಇದನ್ನು ಸಕ್ರಿಯಗೊಳಿಸಲು ಬ್ರೌಸರ್‌ನಲ್ಲಿ ಫೈಂಡ್ ಮೈ ಫೋನ್ ಅಂತ ಟೈಪ್ ಮಾಡಿದಾಗ ಜಿಮೈಲ್ ಐಡಿ ಕೇಳುತ್ತದೆ. ಆಂಡ್ರಾಯ್ಡಾ ಫೋನಿಗೆ ಬಳಸಿದ ಜಿಮೈಲ್ ಐಡಿ ಹಾಕಿದಾಗ ರಿಂಗ್, ಲಾಕ್ ಮತ್ತು ಡಿಲೀಟ್ ಮಾಡುವ ಆಯ್ಕೆ ಸಿಗುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆರಿಸಿಕೊಳ್ಳಿ.