ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಇರೋದು ಬಟ್ಪೆ ಶಾಪಿನಲ್ಲಿ ಗೊಂಬೆಯನ್ನು ನಿಲ್ಲಿಸಿದ ಹಾಗೆ ಚಂದ ನೋಡೋದಕ್ಕಾ?
ನಗರದ ರಿಕ್ಷಾ ಚಾಲಕರಿಗೆ, ಸಿಟಿ ಬಸ್ ಚಾಲಕರಿಗೆ ಲಗಾಮು ಹಾಕುವವರಿಲ್ಲ. ಓವರ್ಟೇಕ್ ಮಾಡುವ ಭರದಲ್ಲಿ, ತಾ ಮುಂದೆ ನಾ ಮುಂದೆ ಎಂಬಂತೆ ಓಡುವ ಭರದಲ್ಲಿ ಇತರರ ಜೀವದ ಬೆಲೆ ಅವರಿಗಂತು ಅರ್ಥವಾಗಲ್ಲ. ರಿಕ್ಷಾ ಚಾಲಕರಂತೂ ಇಡೀ ನಗರವೇ ತಮ್ಮದೆಂಬಂತೆ ವರ್ತಿಸುತ್ತಾರೆ. ಸಂಚಾರಿ ನಿಯಮ ಪಾಲನೆ ಇಲ್ಲಿನ ರಿಕ್ಷಾ ಚಾಲಕರಿಗೆ, ಸಿಟಿ ಬಸ್ ಚಾಲಕ- ನಿರ್ವಾಹಕರಿಗೆ ಅನ್ವಯಿಸಿದಂತೆಯೇ ಇಲ್ಲ. ರಿಕ್ಷಾ ದರ ಪರಿಷ್ಕರಣೆಯಾದಾಗ ಡಿಸಿ ಕಚೇರಿ ಮುಂಭಾಗದಲ್ಲಿ ಹೋಗಿ ದರ ಹೆಚ್ಚು ಮಾಡ ಬೇಕು ಮಾಡಬೇಕು; ಇಲ್ಲವಾದಲ್ಲಿ ಬಡ ರಿಕ್ಷಾ ಚಾಲಕರು ಜೀವನ ಸಾಗಿಸುವುದೆಂತು ಎಂದು ಅರಚಾಡುವ ಇವರಿಗೆ ಅವರ ಜೀವನದ ಬೆಲೆ ಮಾತ್ರ ಗೊತ್ತೇ ಹೊರತು ಯಾರೋ ದ್ವಿಚಕ್ರ ವಾಹನ ಸವಾರರೋ, ಪಾದಚಾರಿಗಳ ಜೀವದ ಬೆಲೆ ತಿಳಿದಿಲ್ಲ. ಕನಿಷ್ಟ ಪಕ್ಷ ಸೌಜನ್ಯದಿಂದ ಮಾತಾಡುವ ಕಲೆಯೂ ಇವರಿಗಿಲ್ಲ. ತಮ್ಮದೆಲ್ಲಾ ಸರಿ ಎಂಬಂತೆ ಒರಟು ಪ್ರತಿಕ್ರಿಯೆ ನೀಡುತ್ತಾರೆ. ಅಚಾತುರ್ಯ ಮಾಡಿಕೊಂಡು ತಾನೇನೂ ಮಾಡಿಯೇ ಇಲ್ಲವೆಂಬಂತೆ ಎರಡನೇ ವ್ಯಕ್ತಿಗೆ ಮನ ಬಂದಂತೆ ಬೈಯ್ಯುತ್ತಾರಷ್ಟೇ.
ಇಂತಹವರ ಮಧ್ಯೆ ನಗರದಲ್ಲಿ ಸಂಚರಿಸಬೇಕು..ನಮ್ಮ ಕರ್ಮ.
ಟ್ರಾಫಿಕ್ ಪೊಲೀಸರು ಚಂದ ನೋಡೋದಕ್ಕಾ ಇರೋದು? (ಎಲ್ಲರೂ ಹೀಗಲ್ಲ)
ನಗರದ ವೃತ್ತವೊಂದರ ಬಳಿ. ಟ್ರಾಫಿಕ್ ಪೊಲೀಸ್ ಓರ್ವರು ಕರ್ತವ್ಯ ನಿರತರಾಗಿದ್ದರು. ಆದರೆ ನನಗನ್ಸುತ್ತೆ ಅವರನ್ನು ಅಲ್ಲಿ ಪೆವಿಕ್ವಿಕ್ ಹಾಕಿ ಅಂಟಿಸಿದ್ದಾರೆ ಅಂತ.
ರಿಕ್ಷಾವೊಂದು ದ್ವಿಚಕ್ರ ವಾಹನಕ್ಕೆ ಒರೆಸಿಕೊಂಡು ಹೋಗಿದೆ. ದ್ವಿಚಕ್ರ ವಾಹನ ಕೆಳಗೆ ಬಿದ್ದಾಗ್ಯೂ ಟ್ರಾಪಿಕ್ ಪೊಲೀಸ್ ಎಂಬ ಪುಣ್ಯಾತ್ಮನಿಗೆ ಕೆಳಗಿಳಿದು ಬಂದು ಸೌಜನ್ಯಕ್ಕಾದರೂ, ಬಿಡಿ ನೆಪಕ್ಕಾದರೂ ಮಾತನಾಡಿಸುವ ಮನಸ್ಸು ಉಂಟಾಗಲಿಲ್ಲ. ದುರಂತವೆಂದರೆ ಎಲ್ಲಾ ಮುಗಿದ ಮೇಲೆ ಕುಳಿತ್ತಲ್ಲಿಂದಲೇ ಕಂಪ್ಲೈಂಟ್ ಕೊಡ್ತೀರಾ ಎಂದು ಕೇಳುತ್ತಾರೆ. ತಪ್ಪು ಯಾರದೇ ಆಗಿರಲಿ. ಕೆಲವರಿಗೆ ವಾಹನ ಚಾಲನೆ ಹೊಸ ಅನುಭವ. ಅಪಘಾತಗಳು ನಡೆದಂತಹ ಸಂದರ್ಭಗಳಲ್ಲಿ ಭಯದಿಂದ ಏನು ಮಾಡಬೇಕೆಂದು ತೋಚುವುದಿಲ್ಲ. ಅನುಭವಿಗಳಾದರೂ ಒಮ್ಮೊಮ್ಮೆ ಇದು ಸಾಮಾನ್ಯವೇ. ಆಗ ಸಹಾಯಕ್ಕೆ.ಬರಬೇಕಾದವರು ಇದೇ ಟ್ರಾಫಿಕ್ ಪೊಲೀಸರೇ ತಾನೇ? ' ಪೊಲೀಸ್' ಅಂದ ಮೇಲೆ ಕರ್ತವ್ಯಪ್ರಜ್ಞೆಯಾದರೂ ಜಾಗೃತಗೊಳ್ಳಬೇಕಿತ್ತು ತಾನೇ? ಒಟ್ಟಾರೆ ಉಢಾಫೆ ತೋರುವ ಇವರದಿನ್ನೆಂತ ಟ್ರಾಫಿಕ್ ನಿಭಾಯಿಸುತ್ತಾರೋ ದೇವರೇ ಬಲ್ಲ.
ಧನ್ಯಾ ಬಾಳೆಕಜೆ ( Facebook ನಿಂದ )