ದ್ವೇಷ ಕಾರುವ ಎಕ್ಸ್ ತೊರೆಯತ್ತಿರುವ ಬಳಕೆದಾದರು!
ಕಳೆದ ವಾರ ಲಕ್ಷಗಟ್ಟಲೆ ಬಳಕೆದಾರರು ಎಲಾನ್ ಮಸ್ಕ್ ಅವರ ಎಕ್ಸ್ ಅನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಹತ್ತು ಲಕ್ಷಕ್ಕಿಂತಲೂ ಹೆಚ್ಚು ಹೊಸ ಬಳಕೆದಾರರು ಪ್ರತಿಸ್ಪರ್ಧಿ ವೇದಿಕೆಯಾಗಿರುವ ʼಬ್ಲೂಸ್ಕೈʼ (Bluesky) ಸೇರಿದ್ದಾರೆ.
ಅಮೆರಿಕ ಚುನಾವಣೆಯ ಫಲಿತಾಂಶದ ನಂತರ ಈ ಸಾಮೂಹಿಕ ವಲಸೆ ಸಂಭವಿಸಿದೆ. ಅನೇಕರು ದ್ವೇಷದ ಮಾತು, ತಪ್ಪು ಮಾಹಿತಿ ಮತ್ತು ಎಕ್ಸ್ ವೇದಿಕೆಯಲ್ಲಿ ಮಸ್ಕ್ ರಾಜಕೀಯ ಸಂಬಂಧಗಳ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಹಲವಾರು ತಿಂಗಳುಗಳಿಂದ ಬಳಕೆದಾರರು ಎಕ್ಸ್ ಅನ್ನು ತೊರೆಯುತ್ತ ಬಂದಿದ್ದಾರೆ. ಆದರೆ ಮಸ್ಕ್ ಮಾಲಕತ್ವದ ಹಿನ್ನೆಲೆಯಲ್ಲಿ ಮತ್ತು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್‌ಗೆ ಅವರು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಗಮನ ಇನ್ನೂ ಹೆಚ್ಚಿದೆ.
ಮಸ್ಕ್ ನೇತೃತ್ವದಲ್ಲಿ ಎಕ್ಸ್ ಬಲಪಂಥೀಯ ಅಭಿಪ್ರಾಯಗಳ ವೇದಿಕೆಯಾಗಿರುವುದರ ಬಗ್ಗೆ ಮತ್ತದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಬಗ್ಗೆ, ಅದರ ಮೂಲಕ ಹಾನಿಕಾರಕ ವಿಷಯಗಳು ಹರಡುವ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ಮಸ್ಕ್ ಈಗ ಟ್ರಂಪ್ ಆಡಳಿತದಲ್ಲಿ ದಕ್ಷತೆ ವಿಭಾಗದ ಮುಖ್ಯಸ್ಥರಾಗಿರುವುದರಿಂದ, ವೇದಿಕೆಯ ತಟಸ್ಥತೆ ಕಾಯ್ದುಕೊಳ್ಳುವ ಸಾಧ್ಯತೆ ಇಲ್ಲವಾಗಿದೆ.
2022ರಲ್ಲಿ ಟ್ವಿಟರ್ ಸಾರ್ವಜನಿಕ ನಂಬಿಕೆಗೆ ಅರ್ಹವಾಗಲು, ಅದು ರಾಜಕೀಯವಾಗಿ ತಟಸ್ಥವಾಗಿರಬೇಕು, ಬಲಪಂಥೀಯ ಮತ್ತು ಎಡಪಂಥೀಯ ಎರಡೂ ಆಗದೇ ಇರಬೇಕು ಎಂದು ಮಸ್ಕ್ ಹೇಳಿದ್ದರು.
ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅವರ ನಡೆಗಳು ಮತ್ತು ರಾಜಕೀಯ ಸಂಬಂಧಗಳನ್ನು ಗಮನಿಸಿದರೆ ಅವರು ಇದಕ್ಕೆ ಬದ್ಧವಾಗಿರುವುದು ಅನುಮಾನ ಎಂಬಂತಿದೆ.
ಟ್ವಿಟರ್ ನ ಮಾಜಿ ಸಿಇಒ ಜ್ಯಾಕ್ ಡಾರ್ಸಿ ನೇತೃತ್ವದ ಒಂದು ಪ್ರಾಜೆಕ್ಟ್ ಆಗಿ ಆರಂಭವಾಗಿದ್ದ ಬ್ಲೂಸ್ಕೈ ಈಗ ಜನಪ್ರಿಯ ಮತ್ತು ಪರ್ಯಾಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಹೊರಹೊಮ್ಮಿದೆ. ಕಡಿಮೆ ಸಮಯದಲ್ಲಿಯೇ 1 ಕೋಟಿ 60 ಲಕ್ಷ ಬಳಕೆದಾರರನ್ನು ಪಡೆದಿದೆ. ಕಳೆದ ವಾರವಷ್ಟೇ, 24 ಗಂಟೆಗಳಲ್ಲಿ ಹತ್ತು ಲಕ್ಷ ಹೊಸ ಬಳಕೆದಾರರನ್ನು ಪಡೆದಿದೆ.
ಬ್ಲೂಸ್ಕೈ ಎಂದರೇನು?
ʼಬ್ಲೂಸ್ಕೈʼ ಒಂದು ಸಾಮಾಜಿಕ ಮಾಧ್ಯಮ ವೇದಿಕೆ. ಜನರು ಎಕ್ಸ್ ನಲ್ಲಿಯ ಹಾಗೆಯೇ ಸಂವಹನ ನಡೆಸಬಹುದು, ಪೋಸ್ಟ್ ಮಾಡುವುದು, ಉತ್ತರಿಸುವುದು ಮತ್ತು ಸಂದೇಶ ಕಳುಹಿಸುವುದು ಇಲ್ಲೂ ಸಾಧ್ಯವಿದೆ.
ಹೊಸ ಬಳಕೆದಾರರಲ್ಲಿ ಹೆಚ್ಚಿನವರು ಉತ್ತರ ಅಮೆರಿಕ ಮತ್ತು ಇಂಗ್ಲೆಂಡ್ ನವರು. ಇದರಿಂದಾಗಿ, ಸೆಪ್ಟೆಂಬರ್‌ನಲ್ಲಿ 90 ಲಕ್ಷ ಇದ್ದ ಬಳಕೆದಾರರ ಸಂಖ್ಯೆ ವಿಶ್ವದಾದ್ಯಂತ 1 ಕೋಟಿ 50 ಲಕ್ಷ ಆಗಿದೆ.
ʼಬ್ಲೂಸ್ಕೈʼ ಪ್ರಾರಂಭವಾದದ್ದು ಹೇಗೆ? ಯಾರ ಒಡೆತನದಲ್ಲಿದೆ?
ಟ್ವಿಟರ್ನ ಆಗಿನ ಮುಖ್ಯ ಕಾರ್ಯನಿರ್ವಾಹಕ ಜಾಕ್ ಡೋರ್ಸಿ ಸಾಮಾಜಿಕ ಮಾಧ್ಯಮಕ್ಕಾಗಿ ಮುಕ್ತ ಮತ್ತು ವಿಕೇಂದ್ರೀಕೃತ ಮಾನದಂಡ ರಚಿಸಲು ಡೆವಲಪರ್‌ಗಳಿಗೆ ಧನಸಹಾಯ ನೀಡುವುದಾಗಿ 2019ರಲ್ಲಿ ಘೋಷಿಸಿದ ನಂತರ ಬ್ಲೂಸ್ಕೈ ಟ್ವಿಟರ್‌ನಲ್ಲಿ ಒಂದು ಪ್ರಾಜೆಕ್ಟ್ ಆಗಿ ಪ್ರಾರಂಭವಾಯಿತು. ಬ್ಲೂಸ್ಕೈ 2021 ರಲ್ಲಿ ಸ್ವತಂತ್ರ ಕಂಪನಿಯಾಯಿತು. ಈಗ ಪ್ರಾಥಮಿಕವಾಗಿ ಮುಖ್ಯ ಕಾರ್ಯನಿರ್ವಾಹಕ ಜೇ ಗ್ರಾಬರ್ ಒಡೆತನದಲ್ಲಿದೆ.
ಇದು ಎಕ್ಸ್ ಗಿಂತ ಗೆ ಹೇಗೆ ಭಿನ್ನ?
ಬ್ಲೂಸ್ಕೈ ಬಳಕೆದಾರರಿಗೆ ತಮ್ಮ ಅನುಭವವನ್ನು ಅಭಿವ್ಯಕ್ತಿಸಲು ಅವಕಾಶ ನೀಡುತ್ತದೆ. ನೀವು ನೋಡುವುದನ್ನು ವ್ಯಕ್ತಗೊಳಿಸುವ ಅಲ್ಗಾರಿದಮ್ ಅನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಇದು ಒಳಗೊಂಡಿದೆ.
ಕಸ್ಟಮ್ ಫೀಡ್‌ಗಳನ್ನು ರಚಿಸಲು ನೆರವಾಗುತ್ತದೆ, ಬ್ಲೂಸ್ಕೈ ಬಳಕೆದಾರರಿಗೆ ವೆಬ್‌ಸೈಟ್ ವಿಳಾಸಗಳನ್ನು ತಮ್ಮ ಹ್ಯಾಂಡಲ್‌ಗಳಾಗಿ ಹೊಂದಲು ಅನುಮತಿಸುತ್ತದೆ.
ಇದು ಕಂಪನಿಯ ವೆಬ್‌ಸೈಟ್ ಅನ್ನು ತಮ್ಮ ಹ್ಯಾಂಡಲ್‌ನಲ್ಲಿ ಹೊಂದಬಹುದಾದ ಪತ್ರಕರ್ತರು, ಕ್ರೀಡಾಪಟುಗಳು ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ ವೆರಿಫಿಕೇಷನ್ ಸಾಧನವಾಗಿಯೂ ಇರಲಿದೆ.
ಟ್ರೋಲ್‌ಗಳನ್ನು ʼಬ್ಲೂಸ್ಕೈʼ ಹೇಗೆ ನಿಭಾಯಿಸಲಿದೆ?
ಎಕ್ಸ್ ತನ್ನ ಬಳಕೆದಾರರ ಅನುಭವವನ್ನು ಅನಿಯಂತ್ರಿತಗೊಳಿಸಿದಂತಿದೆ. ಬಳಕೆದಾರರು ನಿರ್ಬಂಧಿಸಿರುವ ಸಾರ್ವಜನಿಕ ಖಾತೆಗಳ ಪೋಸ್ಟ್ಗಳನ್ನು ನೋಡಲು ಅವಕಾಶವಾಗುವಂತೆ ಅದರ ಬ್ಲಾಕ್ ನ ಕಾರ್ಯ ಬದಲಾಯಿಸಲಾಗಿದೆ. ಆದರೆ ಬ್ಲೂಸ್ಕೈ ತನ್ನ anti-toxicity ವೈಶಿಷ್ಟ್ಯಗಳ ಬಗ್ಗೆ ಹೇಳಿದೆ. ಬಳಕೆದಾರರು ತಮ್ಮ ಮೂಲ ಪೋಸ್ಟ್ ಅನ್ನು ಬೇರೊಬ್ಬರ ಉಲ್ಲೇಖದ ಪೋಸ್ಟ್ ನಿಂದ ಬೇರ್ಪಡಿಸಲು ಅವಕಾಶ ನೀಡುತ್ತದೆ. ಅನಗತ್ಯ ಸಂವಾದಗಳನ್ನು ತಡೆಯಲು ಅವಕಾಶವಿದೆ.
ಎಕ್ಸ್ ಬಿಟ್ಟು ಜನರು ಬ್ಲೂಸ್ಕೈಗೆ ಏಕೆ ಹೋಗುತ್ತಿದ್ದಾರೆ?
ಎಕ್ಸ್ ಮತ್ತು ಅದರ ಮಾಲಕ ಎಲಾನ್ ಮಸ್ಕ್ ಕುರಿತು ಹೆಚ್ಚುತ್ತಿರುವ ಅಸಮಾಧಾನ ಬ್ಲೂಸ್ಕೈಗೆ ಪ್ರಯೋಜನ ತಂದಿದೆ. ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ಮಸ್ಕ್ ಮುಖ್ಯ ಪಾತ್ರ ವಹಿಸಿದ್ದರು.
ಸೆಪ್ಟೆಂಬರ್‌ನಲ್ಲಿ ಬ್ರೆಝಿಲ್‌ನಲ್ಲಿ ʼಎಕ್ಸ್ʼ ಅನ್ನು ನಿಷೇಧಿಸಿದ ನಂತರ 30 ಲಕ್ಷ ಹೊಸ ಬಳಕೆದಾರರು ಬ್ಲೂಸ್ಕೈ ಸೇರಿದ್ದಾರೆ. ನಂತರ ಯಾರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೊ ಅವರ ಪೋಸ್ಟ್ ನೋಡಲು ಅವಕಾಶ ಇರುತ್ತದೆ ಎಂದು ಎಕ್ಸ್ ಪ್ರಕಟಿಸಿದ ನಂತರ ಮತ್ತೆ ಎರಡು ದಿನಗಳಲ್ಲಿ 12 ಲಕ್ಷ ಬಳಕೆದಾರರು ಬ್ಲೂಸ್ಕೈ ಸೇರಿದ್ದಾರೆ.
ಬಾಟ್ಗಳ ಕಾರಣದಿಂದ ಸೈಟ್ ಅನ್ನು ಬಳಸುವುದು ಕಷ್ಟವಾಗುತ್ತಿದೆ ಎಂದೂ ಎಕ್ಸ್ ಬಳಕೆದಾರರು ದೂರುತ್ತಿದ್ದಾರೆ.
ಈಗಾಗಲೇ ಬ್ಲೂಸ್ಕೈ ಬಳಸುತ್ತಿರುವವರು ಗಣ್ಯರು ಯಾರು?
ಯುಕೆ ಸಚಿವ ಜೆಸ್ ಫಿಲಿಪ್ಸ್, ಲಿಬರಲ್ ಡೆಮಾಕ್ರಟ್ ತಂತ್ರಜ್ಞಾನದ ವಕ್ತಾರ ಲಾಯ್ಲಾ ಮೊರಾನ್ ಮತ್ತು ಲೇಬರ್‌ನ ಡಯೇನ್ ಅಬಾಟ್ ಸೇರಿದಂತೆ ಹಲವಾರು ಸಂಸದರು ಈಗಾಗಲೇ ಇದರ ಬಳಕೆದಾರರಾಗಿದ್ದಾರೆ. ಅಮೆರಿಕದ ನಟ ಜೇಮೀ ಲೀ ಕರ್ಟಿಸ್ ತನ್ನ ಖಾತೆ ನಿಷ್ಕ್ರಿಯಗೊಳಿಸಿ ಎಕ್ಸ್ ಅನ್ನು ತೊರೆಯುವ ನಿರ್ಧಾರದ ಬಗ್ಗೆ ಹೇಳಿದ್ದಾರೆ. ಟಿವಿ ನಿರೂಪಕ ಕ್ರಿಸ್ ಪ್ಯಾಕ್‌ಹ್ಯಾಮ್, ಹಾಸ್ಯನಟ ದಾರಾ ಓಬ್ರಿಯಾನ್ ಕೂಡ ಬ್ಲೂಸ್ಕೈನಲ್ಲಿದ್ದಾರೆ.