ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ

Update: 2016-03-20 18:31 GMT

ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯರ ಕೊಡುಗೆಗಳ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ. ಕೆಲವೊಮ್ಮೆ ಈ ಚರ್ಚೆಗಳು ಅತಿರೇಕಕ್ಕೆ ಹೋಗುತ್ತಿದೆ. ಪುರಾಣಗಳನ್ನು, ಕಟ್ಟುಕತೆಗಳನ್ನೆಲ್ಲ ಆಧರಿಸಿ, ಎಲ್ಲಕ್ಕೂ ಭಾರತವೇ ಮೊದಲು ಎನ್ನುವ ಮನಸ್ಥಿತಿ ಸೃಷ್ಟಿಯಾಗುತ್ತಿದೆ. ವಿಜ್ಞಾನ ಸಮಾವೇಶದಲ್ಲಿ ಅಜ್ಞಾನವನ್ನೇ ವಿಜ್ಞಾನ ಎಂದು ಪ್ರತಿಪಾದಿಸುವ ಶಕ್ತಿಗಳು ಹೆಚ್ಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ‘ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ’ ಎನ್ನುವ ಪುಟ್ಟ ಕೃತಿಯ ಮೂಲಕ ಡಾ. ಎಸಂ. ಬಾಲಚಂದ್ರರಾವ್ ಅವರು ಕೆಲವು ಕುತೂಹಲಕಾರಿ ಅಂಶಗಳನ್ನು ಮಂಡಿಸಿದ್ದಾರೆ. ಒಂದೆಡೆ ಕೀಳರಿಮೆ, ಮಗದೊಂದೆಡೆ ಅತಿ ವೈಭವೀಕರಣ ಇವುಗಳ ನಡುವೆ ಭಾರತದ ಪ್ರಾಚೀನ ಕಾಲದಲ್ಲಿ ನಿಜಕ್ಕೂ ಪ್ರತಿಪಾದಿಸಲ್ಪಟ್ಟ ಕೆಲವು ವಿಷಯಗಳು ನಗಣ್ಯವಾಗುತ್ತಿದೆ. ಅವುಗಳನ್ನು ಮುಂದಿಡುವ ಪ್ರಯತ್ನವನ್ನು ರಾವ್ ಮಾಡಿದ್ದಾರೆ. ಎರಡು ವಿರುದ್ಧ ಧೋರಣೆಗಳನ್ನು ತೊರೆದು ವಾಸ್ತವವಾಗಿ ಭಾರತೀಯರು ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ನೀಡಿದ ವಿಶಿಷ್ಟ ಕೊಡುಗೆಯನ್ನು ಸ್ಥೂಲವಾಗಿ, ವಿಮರ್ಶಾತ್ಮಕವಾಗಿ ಪರಿಚಯಿಸಲು ಯತ್ನಿಸಿದ್ದಾರೆ.

ಮಾಯಾ ಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ ಪರಂಪರೆ, ಮಹಾವೀರಾಚಾರ್ಯ ಮತ್ತು ಭಾಸ್ಕರಾಚಾರ್ಯ, ವೇದಿಕ್ ಮ್ಯಾಥಮೆಟಿಕ್ಸ್, ಪಾರಸೀ-ಸಂಸ್ಕೃತ ಮಣಿಪ್ರವಾಳ, ರಾಮಾಯಣದಲ್ಲಿ ಗ್ರಹಗತಿ, ಶುಕ್ರ ಸಂಕ್ರಮಣ ಮುಂತಾದವುಗಳು ಈ ಹೊತ್ತಿಗೆಯಲ್ಲಿರುವ ಕುತೂಹಲಕರ ಬರಹಗಳು. ನವಕರ್ನಾಟಕ ಪ್ರಕಾಶ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News