ಟ್ವಿಟರ್‌ಗೆ ಇಂದು ಹತ್ತರ ಸಂಭ್ರಮ: ನಿಮಗಾಗಿ ಈ ಉಪಯುಕ್ತ ಮಾಹಿತಿಗಳು

Update: 2016-03-21 06:36 GMT

ಸೋಮವಾರ 10 ವರ್ಷಗಳನ್ನು ಕಳೆದಿರುವ ಟ್ವಿಟರ್ ಜಾಗತಿಕ ಸಾಮಾಜಿಕ ತಾಣವಾಗಿ ಬೆಳೆದಿದೆ. ಈ ವೇದಿಕೆ ಬಳಸಿ ಸಂದೇಶ ಕಳುಹಿಸುವಲ್ಲಿನ ಲಾಭಾಂಶಗಳು ಇಲ್ಲಿವೆ.

 ಇತಿಹಾಸ

2006 ಮಾರ್ಚ್ 21ರಂದು ಟ್ವಿಟರ್ ಅಸ್ತಿತ್ವಕ್ಕೆ ಬಂತು. ಸಹಸಂಸ್ಥಾಪಕ ಜಾಕ್ ಡೋರ್ಸೆ ಮೊದಲ ಟ್ವೀಟ್ ಮಾಡಿ, ನನ್ನ ಟ್ವಿಟರ್ ಸೆಟ್ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಮೊದಲ ಮಾನವೀಯ ಟ್ವೀಟ್ ಅನ್ನೂ ಸಹಕಾರ್ಮಿಕರನ್ನು ಆಹ್ವಾನಿಸುತ್ತಿದ್ದೇನೆ ಎಂದು ಹೇಳಿ ಕರೆದಿದ್ದರು.


ಟ್ವಿಟರನ್ನು ಬಿಜ್ ಸ್ಟೋನ್, ಇವಾನ್ ವಿಲಿಯಮ್ಸ್ ಮತ್ತು ಡೋರ್ಸೆ ಜೊತೆಗೂಡಿ ಸಂಸ್ಥಾಪಿಸಿದ್ದಾರೆ. ರಿಯಲ್ ಟೈಮ್ ಸ್ಟಾಟಿಸ್ಟಿಕ್ಸ್ ಪ್ರಕಾರ ಸುಮಾರು 500 ದಶಲಕ್ಷ ಟ್ವೀಟ್‌ಗಳು ಪ್ರತೀದಿನ ಹೋಗುತ್ತವೆ. ವರ್ಷಕ್ಕೆ ಸುಮಾರು 200 ದಶಕೋಟಿ ಟ್ವೀಟ್ ಬೀಳುತ್ತವೆ.

ಬಳಕೆದಾರ ನೆಲೆ


ಟ್ವಿಟರ್ ಯಶಸ್ಸನ್ನು ಅಂದಾಜಿಸುವ ಮುಖ್ಯ ಅಂಕಿ ಅಂಶವೆಂದರೆ ಮಾಸಿಕ ಸಕ್ರಿಯ ಬಳಕೆದಾರರು. ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿ ಅದು 320 ದಶಲಕ್ಷವಾಗಿದೆ. ಟ್ವಿಟರ್ ಹೇಳುವ ಪ್ರಕಾರ ಇದರಲ್ಲಿ ಅತ್ಯಧಿಕ ಎಂದರೆ 254 ದಶಲಕ್ಷ ಬಳಕೆದಾರರು ಅಮೆರಿಕದ ಹೊರಗಿದ್ದಾರೆ. ಸುಮಾರು 500 ದಶಲಕ್ಷ ಮಂದಿ ಲಾಗ್ ಮಾಡದೆಯೇ ಟ್ವಿಟರ್ ಬಳಸುತ್ತಿದ್ದಾರೆ ಎಂದೂ ಸಂಸ್ಥೆ ಹೇಳಿದೆ. ವೆಬ್‌ತಾಣವನ್ನು ಪ್ರತೀ ತಿಂಗಳು ಒಂದು ದಶಲಕ್ಷ ಮಂದಿ ನೋಡುತ್ತಾರೆ.
ಟ್ವಿಟರ್ ತಾರೆಯರು

ಕೆಲ ದಿನಗಳವರೆಗೆ ಟ್ವಿಟರ್ ರಾಣಿಯಾಗಿ ಮೆರೆದದ್ದು ಗಾಯಕಿ ಕೇಟಿ ಪೆರ್ರಿ. ಆಕೆಯ ಬೆಂಬಲಿಗರ ಸಂಖ್ಯೆ 84 ದಶಲಕ್ಷ. ಜಸ್ಟಿನ್ ಬೈಬರ್ ಎರಡನೇ ಸ್ಥಾನದಲ್ಲಿ 77 ದಶಲಕ್ಷ ಮತ್ತು ಟೇಲರ್ ಸ್ವಿಫ್ಟ್ ಮೂರನೇ ಸ್ಥಾನದಲ್ಲಿ 72 ದಶಲಕ್ಷ ಬೆಂಬಲಿಗರನ್ನು ಹೊಂದಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನಾಲ್ಕನೇ ಸ್ಥಾನದಲ್ಲಿ 71 ದಶಲಕ್ಷ ಬೆಂಬಲಿಗರನ್ನು ಹೊಂದಿದ್ದಾರೆ.

ವಿಜ್ಞಾನಿಗಳೂ ಇದ್ದಾರೆ


ಟ್ವಿಟರ್ ಬಳಕೆ ಪತ್ರಕರ್ತರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು, ತಾರೆಯರು ಮತ್ತು ಸಂಶೋಧನಾ ವಿಜ್ಞಾನಿಗಳೂ ಬಳಸುತ್ತಾರೆ. ಟ್ವೀಟ್ ಅನ್ನು ವಿಶ್ಲೇಷಿಸುವುದರಿಂದ ರಾಜಕೀಯ ಪ್ರಭಾವಗಳು ಮತ್ತು ರೋಗಗಳ ಹರಡುವಿಕೆಯ ಬಗ್ಗೆಯೂ ಮಾಹಿತಿ ಸಿಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಟ್ವಿಟರ್‌ನಿಂದ ಆಫ್ರಿಕಾದಲ್ಲಿ ಎಬೋಲ ಹರಡಿದ್ದನ್ನು ತಿಳಿದು ತಕ್ಷಣವೇ ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ ಎನ್ನಲಾಗಿದೆ.
 

ಸ್ಪರ್ಧಿಗಳು
ಫೇಸ್ಬುಕ್ ಮತ್ತುಇನ್‌ಸ್ಟಾಗ್ರಾಂ. ಫೇಸ್ಬುಕ್ (1.5 ದಶಕೋಟಿ ಬಳಕೆ) ನೇತೃತ್ವದ ಇನ್‌ಸ್ಟಾಗ್ರಾಂ (400 ದಶಲಕ್ಷ) ನಂತರ ಮೂರನೇ ಸ್ಥಾನದಲ್ಲಿ ಟ್ವಿಟರ್ ಇದೆ.

ಹಣಕಾಸು


2015ರಲ್ಲಿ ಟ್ವಿಟರ್ ಸುಮಾರು 2.2 ದಶಕೋಟಿ ಡಾಲರ್ ಲಾಭ ತಂದುಕೊಟ್ಟಿದೆ. ಬಹುತೇಕ ಜಾಹೀರಾತು ಆದಾಯ. 2014ರಲ್ಲಿ ಈ ಆದಾಯ 1.4 ದಶಕೋಟಿ ಡಾಲರ್ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News