10 ಸಾವಿರ ರೂ.ಗೆ ಉತ್ತಮ ಸ್ಮಾರ್ಟ್ ಫೋನ್ ಸಿಗುವುದಿಲ್ಲ ಎಂದು ಹೇಳಿದವರು ಯಾರು? ಇಲ್ಲಿವೆ ಕೆಲವು ಅತ್ಯುತ್ತಮ ಆಯ್ಕೆಗಳು

Update: 2016-03-24 08:12 GMT

ಹೊಸ ಮೊಬೈಲ್‌ನ ಹುಡುಕಾಟದಲ್ಲಿದ್ದೀರಾ? 20 ಸಾವಿರಕ್ಕಿಂತ ಕಡಿಮೆ ಬೆಲೆಯ ಉತ್ತಮ ಮೊಬೈಲ್ ಸಿಗುವುದು ಕಡಿಮೆ ಎನ್ನುವುದು ಬಹುತೇಕ ಜನರ ನಂಬಿಕೆ. ಆದರೆ ಕಡಿಮೆ ಬಜೆಟ್‌ನ ಉತ್ತಮ ಸ್ಮಾರ್ಟ್ ಫೋನ್‌ಗಳೂ ಇವೆ.

ನಿಮ್ಮ ಬಜೆಟ್ 10 ಸಾವಿರದ ಮಿತಿಯಲ್ಲಿದ್ದರೂ ಉತ್ತಮ ಫೋನ್‌ಗಳನ್ನು ನೀವು ಒಯ್ಯಬಹುದು. ಯಾವುದು? ಆಯ್ಕೆಗಳು ಇಲ್ಲಿವೆ ನೋಡಿ.

1. ಕ್ಸಿಯೋಮಿ ರೆಡ್ಮಿ ನೋಟ್-3 (ಬೆಲೆ: 9,999)


ನವೆಂಬರ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಫೋನ್ ಇದು. ಎಚ್‌ಡಿ ಡಿಸ್‌ಪ್ಲೇ, 1.4 ಜಿಎಚ್‌ಝೆಡ್ ಹೆಕ್ಸಾಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗರ್ 650 ಪ್ರೊಸೆಸರ್, 2 ಜಿಬಿ ರ್ಯಾಮ್ ಇದರ ವೈಶಿಷ್ಟ್ಯ. ಈ ಬೆಲೆಯಲ್ಲಿ ಅತ್ಯುತ್ತಮ ಆಯ್ಕೆಗಳಲ್ಲೊಂದು. ಉತ್ತಮ ಡಿಸ್‌ಪ್ಲೇ ಹಾಗು ಬ್ಯಾಟರಿ ಬಾಳಿಕೆ. ಆದರೆ ಕ್ಯಾಮೆರಾ ಇನ್ನಷ್ಟು ಸುಧಾರಿಸಬೇಕು.


ಮೀಝು ಎಂ2 (ಬೆಲೆ: 6,999)

ನೋಡಲು ಆಕರ್ಷಕ. ಉತ್ತಮ ಕ್ಷಮತೆ ಹಾಗೂ ಸಾಕಷ್ಟು ಸ್ಪೇಸ್; ಕೊಟ್ಟ ಹಣಕ್ಕೆ ಉತ್ತಮ ಪ್ರತಿಫಲ ಇದು ಧನಾತ್ಮಕ ಅಂಶಗಳಾದರೆ, ಇದರ ಸಾಫ್ಟ್‌ವೇರ್ ತೀರಾ ಸಂಕೀರ್ಣವಾಗಿರುವುದು ಹಾಗೂ ಕ್ಯಾಮೆರಾ ಕ್ಷಮತೆ ಸಾಮಾನ್ಯ ಎನ್ನುವುದು ಋಣಾತ್ಮಕ ಅಂಶಗಳು.

ಕೂಲ್‌ಪ್ಯಾಡ್ ನೋಟ್ 3 ಲೈಟ್ (ಬೆಲೆ: 6,999)

ಜನವರಿಯಲ್ಲಿ ಮಾರುಕಟ್ಟೆಗೆ ಬಂದ ಐದಿಂಚಿನ ಫೋನ್. 1.3 ಜಿಎಚ್‌ಝೆಡ್ ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂಟಿ6735 ಪ್ರೊಸೆಸರ್ ಹಾಗೂ 3 ಜಿಬಿ ರ್ಯಾಮ್ ಹೊಂದಿದೆ. 16 ಜಿಬಿ ಸ್ಟೋರೇಜ್ ಅವಕಾಶ. 32 ಜಿಬಿ ವರೆಗೂ ವಿಸ್ತರಣೆ ಸಾಧ್ಯತೆ ಇದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಇದರ ವೈಶಿಷ್ಟ್ಯ. ಬ್ಯಾಟರಿ ಬಾಳಿಕೆಯೂ ಅಧಿಕ.

ಇಂಟೆಕ್ಸ್ ಕ್ಲೌಡ್ ಫ್ಲ್ಯಾಷ್ (9,999)

ಎರಡು ಮೈಕ್ರೊಸಿಮ್‌ನ ಸ್ಮಾರ್ಟ್‌ಫೋನ್. ಆಂಡ್ರಾಯ್ಡಾ 5.1 ಮೂಲಕ ಇಂಟೆಕ್ಸ್ ಕ್ಲೌಡ್ ಫ್ಲ್ಯಾಷ್ ಕಾರ್ಯನಿರ್ವಹಿಸುತ್ತದೆ. 2,300 ಎಂಎಎಚ್‌ನ ಅಂತರ್ಗತ ಬ್ಯಾಟರಿ. 123.5 ಗ್ರಾಂ ತೂಕ. ಉತ್ತಮ ಕ್ಷಮತೆ ಹಾಗೂ ಡಿಸ್‌ಪ್ಲೇ. ಆದರೆ ಬ್ಯಾಟರಿ ಬಾಳಿಕೆ ಅಷ್ಟಕ್ಕಷ್ಟೇ.

ಯೂ ಯುನೀಕ್

720/1280 ಪಿಕ್ಸೆಲ್ ಡಿಸ್‌ಪ್ಲೇ, 4.7 ಇಂಚಿನ ಸ್ಕ್ರೀನ್. ಉತ್ತಮ ನೊಟ. ಆದರೆ ಕ್ಯಾಮೆರಾ ಗುಣಮಟ್ಟ ಸಾಮಾನ್ಯ.

ವೈವಿಧ್ಯಮಯ ಶ್ರೇಣಿಗಳಲ್ಲಿ ಇವು ಕೆಲ ಉತ್ತಮ ಆಯ್ಕೆಗಳು. ಇದರ ಜತೆಗೆ ಮೀಝು ಎಂ 2 ನೋಟ್, ಮೊಟೊರೋಲಾ ಮೋಟೊ ಜಿಯಂಥ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News