ಜೇಬಿಗೆ ಮಾತ್ರವಲ್ಲ , ನಿಮ್ಮ ಕಣ್ಣಿಗೂ ದುಬಾರಿಯಾಗಲಿದೆ ಕಾಂಟ್ಯಾಕ್ಟ್ ಲೆನ್ಸ್ ಗಳ ಮೋಹ !
ಹೊಸ ಅಧ್ಯಯನವೊಂದು ಹೇಳಿರುವ ಪ್ರಕಾರ ಕಾಂಟಾಕ್ಟ್ ಲೆನ್ಸ್ ಗಳು ಕಣ್ಣಿನ ಸಹಜವಾದ ಮೈಕ್ರೊಬಿಯಲ್ ಪರಿಸರವನ್ನು ಬದಲಿಸುತ್ತದೆ ಮತ್ತು ಕಣ್ಣಿನ ಸೋಂಕುಗಳ ಸಮಸ್ಯೆಯನ್ನು ಏರಿಸುತ್ತದೆ.
ಸಂಶೋಧಕರ ಪ್ರಕಾರ ಕಾಂಟಾಕ್ಟ್ ಲೆನ್ಸ್ ಗಳು ಕಣ್ಣಿನ ಮೈಕ್ರೊಬಯೋಮ್ ಅನ್ನು ಚರ್ಮದ ರೀತಿ ಮಾಡುತ್ತವೆ. ಅದರಲ್ಲಿ ಚರ್ಮದ ಬ್ಯಾಕ್ಟೀರಿಯಗಳ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ ಕಣ್ಣಿನ ಸೋಂಕುಗಳು ಹೆಚ್ಚಾಗುವ ಸಾಧ್ಯತೆಯಿದೆ.
ಈ ಬದಲಾವಣೆಗಳು ಹೇಗೆ ಆಗುತ್ತವೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬ್ಯಾಕ್ಟೀರಿಯಗಳು ಬೆರಳಿನಿಂದ ಲೆನ್ಸಿಗೆ ಅಥವಾ ಕಣ್ಣಿನ ಮೇಲ್ಮೈಗೆ ವರ್ಗಾವಣೆಯಾಗಿವೆಯೇ ಅಥವಾ ಲೆನ್ಸ್ ಗಳು ಐ ಬ್ಯಾಕ್ಟೀರಿಯ ಸಮುದಾಯದ ಮೇಲೆ ಚರ್ಮದ ಬ್ಯಾಕ್ಟೀರಿಯ ಪರವಾಗಿ ಒತ್ತಡ ಹೇರುತ್ತವೆಯೇ ಎನ್ನುವುದು ತಿಳಿದಿಲ್ಲ ಎಂದು ನ್ಯೂಯಾರ್ಕ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಹಿರಿಯ ಅಧ್ಯಯನಕಾರರಾದ ಮಾರಿಯಾ ಡೊಮಿನ್ಗುವೆಜ್ ಬೆಲೊ ಹೇಳಿದ್ದಾರೆ.
ಈ ಅಧ್ಯಯನ ತಂಡವು ಕಣ್ಣಿನ ಸೋಂಕು ಇರುವ 58 ವಯಸ್ಕರ ಮೇಲೆ ಅಧ್ಯಯನ ನಡೆಸಿದ್ದಾರೆ. ಅವರು ತಲಾ 9 ಲೆನ್ಸ್ ಧರಿಸುವ ಮತ್ತು 11 ಲೆನ್ಸ್ ಧರಿಸದ ವ್ಯಕ್ತಿಗಳನ್ನೂ ಅಧ್ಯಯನ ಮಾಡಿದ್ದಾರೆ.