Samsung Galaxy S7 edge ಖರೀದಿಸಲು ಹೊರಟಿದ್ದೀರಾ ? ಹಾಗಾದರೆ ಇಲ್ಲಿವೆ ನಿಮಗೆ ಬೇಕಾದ ಮಾಹಿತಿಗಳು

Update: 2016-03-25 06:22 GMT

ಸ್ಯಾಮ್ಸಂಗ್ ಗಾಲಕ್ಸಿ ಎಸ್7 ಎಡ್ಜ್ ಪರಿಪೂರ್ಣ ಮೊಬೈಲ್ ಹೌದು. ಆದರೆ ಅದರ ಎಡ್ಜ್ ಸ್ಕ್ರೀನ್ ಮತ್ತು ಫಿಂಗರ್ ಪ್ರಿಂಟ್ ಸ್ಕಾನರ್ ಉತ್ತಮವಾಗಿಲ್ಲ.

ಸ್ಯಾಮ್ಸಂಗ್ ಗಾಲಕ್ಸಿ ಎಸ್7 ಎಡ್ಜ್‌ನ್ನು ಹಿಂದಿನ ಎಸ್6 ಎಡ್ಜ್‌ಗೆ ಹೋಲಿಸಿದಲ್ಲಿ ಹೊಸದೇನೂ ಕಾಣಿಸುವುದಿಲ್ಲ. ಸ್ಯಾಮ್ಸಂಗ್ ಗಾಲಕ್ಸಿ ಎಸ್7 ಎಡ್ಜ್‌ನಲ್ಲಿರುವ ಯಾವಾಗಲೂ ಆನ್ ಇರುವ ಲಕ್ಷಣ ಉತ್ತಮವಾಗಿದ್ದರೂ, ಕ್ರಾಂತಿಕಾರಿ ಏನೂ ಅಲ್ಲ. ಫೋನ್ ಕೈಯಲ್ಲಿ ಹಿಡಿಯಲು ಚೆನ್ನಾಗಿದೆ. ಆದರೆ ಯಾವಾಗ ಬೀಳುತ್ತದೋ ಎನ್ನುವ ಭಯವೂ ಇರುವಷ್ಟು ನಾಜೂಕಾಗಿದೆ.

ಡಿಸೈನ್ ವಿಷಯಕ್ಕೆ ಬಂದಲ್ಲಿ ಒಂದು ಗಮನಿಸಬಹುದಾದ ವಿಷಯವೆಂದರೆ ಕ್ಯಾಮರಾ ಬಂಪ್ ಅನ್ನು ದೂಡಲಾಗಿದೆ ಮತ್ತು ಇನ್ನೂ ತೆಳುವಾದ ಪ್ರೊಟ್ರುಶನ್ ಹೊಂದಿದೆ. ನಿರ್ದಿಷ್ಟತೆಗಳೆಂದರೆ 5.5 ಇಂಚಿನ ಡಿಸ್‌ಪ್ಲೇ, ಆಕ್ಟಾ ಕೋರ್, ಎಕ್ಸಿನೊಸ್ 8890 ಪ್ರೊಸೆಸರ್, 4ಜಿಬಿ ರ್ಯಾಂ, 32 ಜಿಬಿ ಸಂಗ್ರಹ ಸ್ಥಳ, 12 ರೇರ್ ಕ್ಯಾಮರಾ ಮತ್ತು 5 ಫ್ರಂಟ್ ಕ್ಯಾಮರಾ, 3600 ಬ್ಯಾಟರಿ. ಆಂಡ್ರಾಯ್ಡಾ 6.0 ಮಾರ್ಷ್‌ ಮಲೋ ಜೊತೆಗೆ ಟಚ್ ವಿಜ್ ಯುಐ. ಇದರ ಬೆಲೆ ರು. 56,900 ಇಡಲಾಗಿದೆ.

ಸ್ಕ್ರೀನ್ ವಿಷಯಕ್ಕೆ ಬಂದಾಗ ಎಲ್ಲವೂ ಅತ್ಯುತ್ತಮವಾಗಿದೆ. ಅಲ್ಲದೆ ಬ್ಲಾಕ್ ಲಾಕ್ ಸ್ಕ್ರೀನ್ ಮೂಲ ಮಾಹಿತಿಯಾದ, ಮಿಸ್ಡ್ ಕಾಲ್, ಹೊಸ ಸಂದೇಶ ಕೊಡುತ್ತವೆ. ಆದರೆ ಇದರಿಂದ ಬ್ಯಾಟರಿ ಹೆಚ್ಚು ಖರ್ಚಾಗುತ್ತಿಲ್ಲ. ಎಡ್ಜ್ ಸ್ಕ್ರೀನ್ ಸುಧಾರಿಸಿದೆ ಮತ್ತು ಹೆಚ್ಚು ಪರಿಣಾಮಕಾರಿ. ಎಕ್ಸಟ್ರಾ ಹೋಂಸ್ಕ್ರೀನ್ ಲೇಯರ್ ಇದ್ದ ಹಾಗಿದೆ.

ಎಸ್6 ಅತ್ಯುತ್ತಮ ಕ್ಯಾಮರಾ. ಅದನ್ನು ಉತ್ತಮಪಡಿಸುವ ಹಾದಿ ಇರದು ಎಂದುಕೊಂಡಿದ್ದರೂ ಸ್ಯಾಮ್ಸಂಗ್ ಮಾಡಿದೆ. ಕಡಿಮೆ ಬೆಳಕಿನ ಫೋಟೋಗ್ರಫಿಯಲ್ಲಿ ಈಗಿನ ವರ್ಷನ್ ಚೆನ್ನಾಗಿದೆ. ಆಪಲ್ ಐಫೋನ್ 6ಎಸ್ ಪ್ಲಸ್ ಗಿಂತಲೂ ಮುಂದಿದೆ. ಚಿತ್ರಗಳನ್ನು ನೋಡಿದರೆ ಡಿಎಸ್‌ಎಲ್‌ಆರ್ ಕ್ಯಾಮರಾದಲ್ಲಿ ತೆಗೆದ ಹಾಗೆ ಕಾಣಿಸುತ್ತವೆ. ಕ್ಯಾಮರಾ ಆಫ್ ಕೂಡ ಸುಧಾರಿಸಿದೆ. ವರ್ಚುವಲ್ ಶಾಟ್ ಮೊದಲಾದ ವಿಶಿಷ್ಟ ಮೋಡ್ ಗಳಿವೆ. ಪ್ರೊ ಮೋಡ್ ನಮ್ಮ ಸೃಜನಶೀಲ ಅಗತ್ಯಗಳಿಗೆ ಸಾಕಷ್ಟಾಗಿದೆ.

ಗೇಮಿಂಗ್, ಅಲ್ಟ್ರಾ ಹೈ ಡೆಫಿನಿಷನ್ ವಿಡಿಯೋ ಹೀಗೆ ಬಹಳ ಕೆಲಸ ಮಾಡಿದರೂ ಫೋನ್ ಸುಸ್ತಾಗುವುದಿಲ್ಲ. ಇದು ಅತ್ಯುತ್ತಮ ಅಂಶ. ಬ್ಯಾಟರಿಯನ್ನು ನಂಬಬಹುದು. 4ಜಿ ನೆಟ್ವರ್ಕಲ್ಲಿ ಅತಿಯಾಗಿ ಬಳಸಿದ ಮೇಲೂ 12 ಗಂಟೆಗಳ ಕಾಲ ಬ್ಯಾಟರಿ ಬಾಳ್ವಿಕೆ ಬರುತ್ತದೆ. ಸ್ಕ್ರೀನ್ ಬೆಳಕನ್ನು ಸ್ವಲ್ಪ ಕಡಿಮೆ ಮಾಡಿದರೆ ಇನ್ನು ಸ್ವಲ್ಪ ಹೊತ್ತು ಬಳಸಬಹುದು. ಶೇ5ರಷ್ಟು ಬ್ಯಾಟರಿ ಇದ್ದಾಗಲೂ ಒಂದು ಗಂಟೆ ಫೋನ್ ಬಳಸಬಹುದು.


ಆದರೆ ಫೋನಿನ ಫಿಂಗರ್ ಪ್ರಿಂಟ್ ಸ್ಕಾನರ್ ವಿಫಲವಾಗಿದೆ. ಇದನ್ನು ಸ್ಯಾಮ್ಸಂಗ್ ತಕ್ಷಣ ಸರಿಪಡಿಸಬೇಕು. ಅಲ್ಲದೆ ಕಡಿಮೆ ಲೈಟಲ್ಲಿ ಫೋಟೋಗಳನ್ನು ಝೂಮ್ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಅದನ್ನುಳಿದರೆ ಈ ಫೋನ್ ಪರಿಪೂರ್ಣವಾಗಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News