ನೀವು ಜೇಬಲ್ಲಿಡುವುದು ಮೊಬೈಲ್ ಅಲ್ಲ, ಅಪಾಯವನ್ನು !

Update: 2016-03-26 04:50 GMT

ನಿಮ್ಮ ಫೋನನ್ನು ಪಾಕೆಟಲ್ಲಿ ಇಡುವುದು ಸುರಕ್ಷಿತವಲ್ಲ. ಹಾಗೆಂದು, ಮೊಬೈಲ್ ಫೋನುಗಳು ನಾಜೂಕಾಗಿ ತಯಾರಾಗುತ್ತಿರುವುದಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ. ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದೆ. ಧೀರ್ಘ ಕಾಲ ಮೊಬೈಲ್ ಬಳಸಿದಲ್ಲಿ ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆಗಳು ಬರುತ್ತವೆ ಎನ್ನಲಾಗುತ್ತದೆ.

ಅಧ್ಯಯನವೊಂದು ಹೇಳಿರುವ ಪ್ರಕಾರ ಮೊಬೈಲಿನಿಂದ ಹೊರಸೂಸುವ ಎಲಕ್ಟ್ರೋಮ್ಯಾಗ್ನೆಟಿಕ್ ತರಂಗಗಳು ಧೀರ್ಘಕಾಲದ ನಷ್ಟವನ್ನು ತರುತ್ತವೆ. ಲೀಗ್ ಆಫ್ ನೇಷನ್ಸ್ ಹೆಲ್ತ್ ಉಪಾಧ್ಯಕ್ಷ ನಿಖೊಲೈ ಕೊನೊನೊವ್ ಪ್ರಕಾರ, ದೇಹದ ಆಗುಹೋಗುಗಳ ಮುಖ್ಯ ನಿಯಂತ್ರಕ ಕೇಂದ್ರೀಯ ನರವ್ಯೆಹ ವ್ಯವಸ್ಥೆಗೆ ಮೊಬೈಲ್ ತರಂಗಗಳಿಂದ ಹಾನಿಯಾಗುವ ಸಾಧ್ಯತೆಯಿದೆ.

ಜೇಬಲ್ಲಿಡುವುದು ಅಪಾಯಕಾರಿ

ಫೋನಿನ ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳ ಪ್ರಮುಖ ಗುರಿ ಕೇಂದ್ರೀಯ ನರವ್ಯೆಹ ವ್ಯವಸ್ಥೆಯಾಗಿದ್ದರೂ, ಸಂತಾನೋತ್ಪತ್ತಿಯ ಮತ್ತು ಎಂಡೋಕ್ರೈನ್ ವ್ಯವಸ್ಥೆಗಳೆರಡೂ ಅಪಾಯದಲ್ಲಿವೆ. ಅಲ್ಲದೆ ಫೋನ್ ಅತಿಯಾಗಿ ಬಳಸುವುದರಿಂದ ಆಗುವ ಸಮಸ್ಯೆ ಕಂಡುಹಿಡಿಯುವುದೂ ಸುಲಭವಲ್ಲ. ಆದರೆ ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳು ರಕ್ತ ಕ್ಯಾನ್ಸರ್, ಹಾರ್ಮೋನ್ ಸಂಬಂಧಿ ರೋಗಗಳು ಮತ್ತು ಮೆದುಳಿನ ಕ್ಯಾನ್ಸರ್ ಉಂಟು ಮಾಡಬಹುದು. ಕೇಂದ್ರೀಯ ನರವ್ಯೆಹಕ್ಕೆ ಹಾನಿಯಾದಲ್ಲಿ ಪೂರ್ಣ ವ್ಯವಸ್ಥೆಯೇ ಕುಸಿಯಲಿದೆ.

ಏನು ಮಾಡಬಹುದು?

ಫೋನ್ ದೇಹಕ್ಕೆ ಹಾನಿಯುಂಟು ಮಾಡಬಹುದಾಗಿದ್ದರೂ, ಅದನ್ನು ಎಸೆಯಬೇಕಾಗಿಲ್ಲ. ಸ್ಮಾರ್ಟ್‌ಫೋನ್‌ಗಳು ನಮ್ಮ ಇಂದಿನ ಅತೀ ಅಗತ್ಯವಾಗಿವೆ. ಅವುಗಳನ್ನು ಎಸೆಯುವ ಬದಲಾಗಿ ಬಳಕೆಯನ್ನು ಕಡಿಮೆ ಮಾಡುವ ದಾರಿ ಹುಡುಕಬೇಕು. ನಿಮ್ಮ ಪರಿಸ್ಥಿತಿ ವಿಶ್ಲೇಷಿಸಿಕೊಂಡು ಏನು ನಿಮಗೆ ಉತ್ತಮ ಎಂದು ತಿಳಿದುಕೊಳ್ಳಿ. ಮುಖ್ಯವಾಗಿ ಗರ್ಭ ಧರಿಸಿದ್ದಲ್ಲಿ ಸಾಧ್ಯವಾದಷ್ಟು ಫೋನ್ ಬಳಕೆ ಕಡಿಮೆ ಮಾಡಬೇಕು. ಏಕೆಂದರೆ ತರಂಗಗಳು ಸಂತಾನೋತ್ಪತ್ತಿ ವ್ಯವಸ್ಥೆಗೆ ಹಾನಿಯುಂಟು ಮಾಡಬಹುದು. ಹೀಗಾಗಿ ಉಡುಗೆಯ ಪಾಕೆಟಿನಲ್ಲಿ ಮೊಬೈಲ್ ಇಡಲೇಬೇಡಿ. ಬಳಸದೆ ಇದ್ದಾಗ ದೇಹಕ್ಕೆ ಸಂಪರ್ಕಿಸದಂತೆ ಬ್ಯಾಗಲ್ಲಿ ಹಾಕಿಕೊಳ್ಳುವ ಅಭ್ಯಾಸವಿರಲಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News