ಎಲ್ಲಾ ವಾಚುಗಳ ಚಿತ್ರಗಳಲ್ಲಿ 10:10 ಎಂದೇ ಸಮಯ ತೋರಿಸುವುದು ಏಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ!

Update: 2016-03-26 05:13 GMT

ವಾಚುಗಳ ಅಂಗಡಿಯಲ್ಲಿ ಮಾರಾಟಕ್ಕಿರುವ ಎಲ್ಲಾ ವಾಚುಗಳು ಅಥವಾ ಗಡಿಯಾರಗಳು ಒಂದೇ ಸಮಯವನ್ನು ತೋರಿಸುತ್ತವೆ. ಒಂದು ವಾಚಿನ ಪ್ರಚಾರ ಚಿತ್ರವನ್ನು ನೋಡಿದರೂ ಅದರಲ್ಲಿ 10:10 ಎಂದೇ ಸಮಯವಿರುತ್ತದೆ.

ವಾಚು ಮಾರಾಟ ಮಾಡುವ ಅಂತರ್ಜಾಲ ವೆಬ್‌ತಾಣಗಳಲ್ಲಿ ವಾಚಿಗಾಗಿ ಹುಡುಕಾಡಿದರೆ ನೂರಾರು ಚಿತ್ರಗಳು ಬರುತ್ತವೆ. ಆದರೆ ಇದೇ 10:10 ಸಮಯವನ್ನು ಇಡದೆ ಇರುವ ವಾಚನ್ನು ಹುಡುಕುವುದು ಕಷ್ಟ.

ಇದಕ್ಕೆ ಮುಖ್ಯ ಕಾರಣ ವಾಚಿನ ಬ್ರಾಂಡ್ ಮತ್ತು ಲೋಗೋ ಸರಿಯಾಗಿ ಕಾಣಬೇಕು ಎನ್ನುವುದೇ ಆಗಿದೆ. ವಾಚ್ ಮುಳ್ಳುಗಳು ಹೀಗೆ ನಿಂತಿದ್ದಾಗ ಬ್ರಾಂಡ್ ಮತ್ತು ಲೋಗೋ ಮೇಲೆ ಹೆಚ್ಚು ಗಮನ ಬೀಳುತ್ತದೆ ಎಂದು ವಾಚ್ ಡೀಲರ್ ಟೊರ್ನೆವೊದ ಕಾರ್ಯಕಾರಿ ಉಪಾಧ್ಯಕ್ಷ ಆಂಡ್ರ್ಯೂ ಬ್ಲಾಕ್ ಹೇಳಿದ್ದಾರೆ.

ಬಹುತೇಕ ಬ್ರಾಂಡ್ ಲೋಗೋಗಳು ವಾಚ್ ಮುಖದ ಮೇಲ್ಗಡೆಯೇ ಇರುವ ಕಾರಣ 12:05 ಅಥವಾ 1:20 ಎಂದು ಬರೆದರೆ ಅಡ್ಡವಾಗಿಬಿಡುತ್ತದೆ. 4:40 ಎಂದು ಬರೆದರೆ ಮುಳ್ಳುಗಳು ಲೋಗೋದಿಂದ ಪೂರ್ಣ ಹೊರಗಿರುತ್ತವೆ. ಹೀಗಾಗಿ ಗ್ರಾಹಕರನ್ನು ಹೆಚ್ಚು ಆಕರ್ಷಿಸುವುದಿಲ್ಲ ಎನ್ನುವುದು ಉಲಿಸ್ಸೆ ನಾರ್ದಿನ್ ಸಂಸ್ಥೆಯ ಜಾಹೀರಾತು ಮತ್ತು ಪ್ರಚಾರ ಮುಖ್ಯಸ್ಥೆ ಸುಸಾನೆ ಹುರ್ನಿ ಹೇಳಿದ್ದಾರೆ.

ಟೈಮೆಕ್ಸ್ ಸಾಮಾನ್ಯವಾಗಿ ತಮ್ಮ ವಾಚನ್ನು 10:09:36  ಸಮಯಕ್ಕೆ ನಿಗದಿಪಡಿಸುತ್ತದೆ. ತಮ್ಮ ಎಲ್ಲಾ ಜಾಹೀರಾತಲ್ಲೂ ಅವರು ಇದೇ ಸಮಯ ಇಟ್ಟಿದ್ದಾರೆ.

ಅತೀ ಅಧಿಕೃತವಾಗಿ ಆಕರ್ಷಕ ವಾಚಿನ ಚಿತ್ರವಾಗಬೇಕೆಂದರೆ 10:10ಕ್ಕೆ ಸಮಯ ನಿಗದಿಪಡಿಸುವುದೂ ಉತ್ತಮ ಆಯ್ಕೆಯಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News