ನಿಮಗೆ ಯಾರೂ ಹೇಳದ ವಿಮಾನದ ಕುರಿತ ಹತ್ತು ರಹಸ್ಯಗಳು ಇಲ್ಲಿವೆ
ನೀವು ಆಗಾಗ್ಗೆ ವಿಮಾನಗಳಲ್ಲಿ ಓಡಾಡುವ ಪ್ರಯಾಣಿಕರೇ ಇರಬಹುದು. ಆದರೆ ವಾಯುಯಾನದ ಕುರಿತ ಕೆಲವು ರಹಸ್ಯಗಳು ನಿಮಗೂ ತಿಳಿದಿರಲಾರದು. ಮೊಬೈಲ್ ಫೋನಿನಿಂದ ವಿಮಾನ ಅಫಘಾತವಾಗುವುದೇ ಮತ್ತು ಮಾಸ್ಕ್ ಎಷ್ಟು ಆಮ್ಲಜನಕ ನಿಮಗೆ ಕೊಡಬಲ್ಲದು ಎನ್ನುವ ವಿವರಗಳು ಇಲ್ಲಿವೆ.
- ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಕ್ಯಾಬಿನ್ ಬೆಳಕು ಮಂದವಾಗುವುದೇಕೆ? ತರಾತುರಿಯಲ್ಲಿ ಹೊರಗೆ ಹೋಗುವ ಅಗತ್ಯ ಬಂದಲ್ಲಿ ಕಣ್ಣುಗಳು ಹೊರಗಿನ ಕತ್ತಲೆಗೆ ಹೊಂದಿಕೊಳ್ಳಲಿ ಎನ್ನುವುದೇ ಇದರ ಉದ್ದೇಶ. ಹೀಗಾಗಿ ವಿಮಾನದಿಂದ ಹೊರಗೆ ಕಾಲಿಟ್ಟ ಕೂಡಲೇ ಕತ್ತಲಲ್ಲಿ ಪರದಾಡಬೇಕಿಲ್ಲ.
- ಮೊಬೈಲ್ ಫೋನ್ ಆಫ್ ಮಾಡಲು ಕೇಳಿಕೊಳ್ಳಲೂ ಕಾರಣವಿದೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ವಿಮಾನಕ್ಕೆ ತೊಂದರೆಯಾಗುವುದಿಲ್ಲ. ಆದರೆ ಮೊಬೈಲ್ ಸಿಗ್ನಲುಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಪೈಲಟುಗಳಿಗೆ ಬಹಳ ತೊಂದರೆ ಕೊಡುತ್ತವೆ. 100 ಫೋನುಗಳಿದ್ದರೆ ಕೆಲಸ ಇನ್ನಷ್ಟು ಹದಗೆಡುತ್ತದೆ.
- ಬ್ಯಾಗಲ್ಲಿರುವ ಹೆಡ್ ಫೋನುಗಳು ಹೊಸದಲ್ಲ! ಕಿಂಗ್ಫಿಶರ್ ಏರ್‌ಲೈನ್ಸಲ್ಲಿ ಹೆಡ್ ಫೋನ್ ಸಿಕ್ಕಿದೆಯೆ? ಅವುಗಳಲ್ಲಿ ಬಹುತೇಕ ಸ್ವಚ್ಛ ಮಾಡಿ ಮರುಬಳಕೆಗೆ ಸಿದ್ಧಪಡಿಸಲಾಗಿವೆ.
- ಕೊಡಲಾಗುವ ಮಾಸ್ಕಲ್ಲಿ ಕೇವಲ 15 ನಿಮಿಷಗಳ ಆಮ್ಲಜನಕವಷ್ಟೇ ಇರುತ್ತದೆ.
- ವಿಮಾನದಲ್ಲಿ ಬಳಸುವ ಶೌಚಾಲಯಗಳು ಹೊರಗಿನಿಂದ ಬಂದ್ ಮಾಡಬಹುದು. ಸುರಕ್ಷೆಯ ದೃಷ್ಟಿಯಿಂದ ಹೀಗೆ ಮಾಡಲಾಗುತ್ತದೆ. ಯಾರಾದರೂ ಸತ್ತರೆ, ಗಾಯಗೊಂಡರೆ ಹೊರಗಿನಿಂದ ಲಾಕ್ ಮಾಡುವ ಸೌಲಭ್ಯ ಬೇಕಾಗುತ್ತದೆ.
- ಕ್ಯಾರಿ ಆನ್ ಲಗೇಜನ್ನೂ ಲಾಕ್ ಮಾಡುವುದು ಉತ್ತಮ. ಅದರಲ್ಲೂ ಕಳ್ಳತನವಾಗುವ ಸಾಧ್ಯತೆಯಿದೆ. ಕ್ಯಾಬಿನಿನಲ್ಲಿ ಯಾವಾಗಲೂ ಸೀಟಿನ ಮೇಲ್ಭಾಗದಲ್ಲೇ ಬ್ಯಾಗಿಡಲು ಸ್ಥಳ ಸಿಗುವುದಿಲ್ಲ. ದೂರ ಇಟ್ಟಾಗ ಯಾರಾದರೂ ಕೈ ಹಾಕಬಹುದು. ಹೀಗಾಗಿ ಲಾಕ್ ಮಾಡುವುದು ಉತ್ತಮ.
- ಮಿಂಚು ಬಡಿದರೆ ಏನೂ ಆಗುವುದೇ ಇಲ್ಲ. ಜನರು ಕುಳಿತುಕೊಳ್ಳುವ ಜಾಗ ಎಲೆಕ್ಟ್ರಿಕ್ ಕರೆಂಟುಗಳಿಂದ ಸುರಕ್ಷಿತವಾಗಿರುತ್ತದೆ.
- ಎಂಜಿನುಗಳು ವಿಫಲವಾದರೂ ವಿಮಾನ ಧೀರ್ಘ ಕಾಲ ಆಕಾಶದಲ್ಲಿ ಹಾರಬಹುದು. ವಿಮಾನವು ಪ್ರತೀ 5000 ಅಡಿಗೆ ಆರು ನಾಟಿಕಲ್ ಮೈಲ್ಸ್ ಹಾರಬಹುದು. ವಿಮಾನ 35,000 ಅಡಿಯಲ್ಲಿದ್ದರೆ ವಿದ್ಯುತ್ ಇಲ್ಲದೆಯೇ 42 ಮೈಲು ಹಾರಬಹುದು. ಸಿನಿಮಾದಲ್ಲಿ ತೋರಿಸುವಂತೆ ಅಲ್ಲಾಡುವುದಿಲ್ಲ.
- ವಿಮಾನ ಅಲುಗಾಡುತ್ತಾ ನೆಲಕ್ಕಿಳಿದರೆ ಪೈಲಟ್ ಸರಿಯಾಗಿ ಓಡಿಸಿಲ್ಲ ಎಂದಲ್ಲ. ಉತ್ತಮ ಹವಾಮಾನ ಇಲ್ಲದಾಗ ಹಾಗಾಗುತ್ತದೆ.
- ಮಧ್ಯ ಗಾಳಿಯಲ್ಲಿ ವಿಮಾನಗಳು ಪರಸ್ಪರ ಢಿಕ್ಕಿಯಾಗುವ ಸಾಧ್ಯತೆ ಅತೀ ಕಡಿಮೆ. ಏಕೆಂದರೆ ಪೂರ್ವಾಭಿಮುಖವಾಗಿ ಮತ್ತು ಪಶ್ಚಿಮಾಭಿಮುಖವಾಗಿ ಸಾಗುವ ವಿಮಾನಗಳು ಭಿನ್ನ ಎತ್ತರದಲ್ಲಿ ಹಾರುತ್ತವೆ.