Full Details

Update: 2016-03-28 04:56 GMT

ಹ್ಯೂಂಡೈ ಕ್ರೇಟಾ ಬಂದ ಮೇಲೆ ಮಧ್ಯಮ ಗಾತ್ರದ ಸುವ್ (SUV) ಅನ್ನು ಕೇಳುವವರೇ ಇರಲಿಲ್ಲ. ಈಗ ತನ್ನ ಉತ್ಪನ್ನದ ಹೊಸ ಕೊಡುಗೆಯನ್ನು ಮಾಲಕ ರೆನಾಲ್ಟ್ ಡಸ್ಟರ್ ಮುಂದಿಟ್ಟಿದ್ದಾರೆ.

ತನ್ನ ಸಣ್ಣ ಸುವ್ ಕಡೆಗೆ ಗಮನವನ್ನು ಮತ್ತೆ ಹರಿಸಲು ರೆನಾಲ್ಟ್ ಈಗ ಹೊಸ ರೂಪ ಕೊಟ್ಟಿರುವ ಡಸ್ಟರನ್ನು ತರುತ್ತಿದೆ. ವಿಭಿನ್ನ ಶೈಲಿ, ಸುಧಾರಿತ ಕ್ಯಾಬಿನ್ ಮತ್ತು ಧೀರ್ಘ ಸಾಧನಗಳ ಪಟ್ಟಿ ಮತ್ತು ಮೊದಲ ಬಾರಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಬರುತ್ತಿದೆ.

ಡಸ್ಟರ್‌ನ ಮೂಲ ವಿನ್ಯಾಸವು ಬದಲಾಗಿಲ್ಲ. ಆದರೆ ಅಲ್ಲಿ ಇಲ್ಲಿ ಮಾಡಿರುವ ಕೆಲವು ಬದಲಾವಣೆಗಳು ಹೊಸ ಲುಕ್ ಕೊಟ್ಟಿದೆ. ಒನ್ ಸ್ಲಾಟ್ ಡಿಸೈನ್ ಗ್ರಿಲ್ ಇದೆ. ಸ್ಕ್ವೇರ್ ಹೆಡ್ ಲೈಟ್‌ಗಳು ಹೆಚ್ಚು ವಿವರಣಾತ್ಮಕವಾಗಿವೆ. ಆದರೆ ಹಗಲು ಉರಿಯುವ ಬೆಳಕು ಸಿಗುವುದಿಲ್ಲ. ಫ್ರಂಟ್ ಮತ್ತು ರೇರ್ ಕೂಡ ಹೊಸ ಸ್ಕಫ್ ಪ್ಲೇಟ್‌ಗಳನ್ನು ಹೊಂದಿವೆ.

ಸೈಡುಗಳು ಬ್ರಷ್ ಮಾಡಿದ ಸಿಲ್ವರ್ ಕ್ಲಾಡಿಂಗ್ ಹೊಂದಿದೆ. ಫ್ಲಾಟ್ ಆಗಿರುವ ಫೂಟ್ ರೈಲ್‌ಗಳು ಡಸ್ಟರ್ ಹೆಸರಿನ ಜೊತೆಗೆ ಬಂದಿವೆ. ಹೊಸ ಸೈಡ್ ವ್ಯೆ ಮಿರರ್‌ಗಳು ಇಂಟೆಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳಲ್ಲಿವೆ. ಅದು ಈಗ ಬ್ಲಾಕ್ ಅಲಾಯ್‌ಗಳ ಮೇಲೆ ಕೂತಿದೆ. ಟೈಲ್ ಲೈಟ್‌ಗಳು ಸುಧಾರಣೆ ಕಂಡಿತ್ತು ವಿಶಿಷ್ಟ ಬ್ರೇಕ್ ಮತ್ತು ಎಸ್ ಆಕಾರದ ಸಿಗ್ನೇಚರ್ ಎಲ್‌ಇಡಿ ಲೈಟ್ ಜೊತೆಗೆ ಬರುತ್ತಿವೆ.

ಒಳಭಾಗದಲ್ಲಿ ಸುಧಾರಿತ ಕ್ಯಾಬಿನ್ ಇನ್ನೂ ಉಪಯುಕ್ತವಾಗಿವೆ. ಆದರೆ ಇದು ಸುಧಾರಣೆಗೆ ಹಿಂದಿನ ಮಾಡೆಲಿಗಿಂತ ಕಡಿಮೆಯೇ ಕಾಣುತ್ತದೆ. ಹೆಚ್ಚು ಸಂಖ್ಯೆಯ ಸಿಲ್ವರ್ ಹೈಲೈಟ್‌ಗಳು ಮತ್ತು ಕ್ರೋಮ್ ಬಿಟ್ಸ್ ಇವೆ. ಸಾಕಷ್ಟು ಗ್ಲಾಸಿ ಬ್ಲಾಕ್ ಫಿನಿಶ್ ಸೆಂಟರ್ ಕನ್ಸೋಲಿನಲ್ಲಿದೆ. ಬ್ಲಾಕ್ ಮತ್ತು ಚಾಕಲೇಟ್ ಬ್ರೌನ್ ಡ್ಯುಯಲ್ ಟೋನ್ ಸ್ಕೀಮ್ ಹಿಂದಿನ ಹಗುರವಾದ ಟೋನ್‌ಗಳಿಗೆ ಹೋಲಿಸಿದರೆ ಸುಧಾರಿಸಿದೆ. ಗುಣಮಟ್ಟ ಒಟ್ಟಾರೆಯಾಗಿ ಹೇಳಿದರೆ ಒಂದು ಹೆಜ್ಜೆ ಮುಂದೆ ಹೋಗಿದೆ. ಆದರೆ ಕ್ರೇಟಾಗೆ ಹೋಲಿಸಿದರೆ ಹಿಂದೆ ಬಿದ್ದಿದೆ.


ಕ್ಯಾಬಿನ್‌ ನಲ್ಲಿ ಸಣ್ಣ ಮತ್ತು ಗುರುತರ ಬದಲಾವಣೆಗಳಾಗಿವೆ. ಹಜಾರ್ಡ್ ಲೈಟುಗಳು ಮತ್ತು ಡೋರ್ ಲಾಕ್ ಬಟನ್‌ಗಳು ಈಗ ಡ್ಯಾಶ್ ಬೋರ್ಡಲ್ಲಿ ಎತ್ತರದಲ್ಲಿವೆ ಮತ್ತು ಸೈಡ್ ವ್ಯೆ ಮಿರರ್ ಕಂಟ್ರೋಲ್‌ಗಳನ್ನು ಈಗ ಹ್ಯಾಂಡ್ ಬ್ರೇಕ್‌ನಿಂದ ಹೆಚ್ಚು ಸಮಕಾಲೀನವಾದ ಪೊಸಿಷನಿಗೆ ವಿಂಡೋ ಸ್ವಿಚ್‌ಗಳ ಕಡೆಗೆ ಚಲಿಸಲಾಗಿದೆ. ಆದರೆ ಕ್ರೂಸ್ ಕಂಟ್ರೋಲ್ ಸ್ವಿಚ್‌ಗಳನ್ನು ಮತ್ತು ಸ್ಟೀರಿಂಗ್ ಕಾಲಂಗೆ ಜೋಡಣೆಯಾಗಿರುವ ಆಡಿಯೋ ಕಂಟ್ರೋಲ್‌ಗಳು ಈಗಲೂ ಸೂಕ್ತ ಸ್ಥಳದಲ್ಲೇ ಇವೆ. ಹೊಸ ಸೀಟ್ ಫ್ಯಾಬ್ರಿಕ್ ಶ್ರೀಮಂತ ಅನುಭವ ಕೊಡುತ್ತದೆ. ಫ್ರಂಟ್ ಸೀಟ್‌ಗಳು ಉತ್ತಮ ಹಿತಕರ ಅನುಭವಕ್ಕಾಗಿ ಕೈ ಇಡುವ ಜಾಗಗಳನ್ನು ಹೊಂದಿವೆ.


RxZ ಸಾಧನಗಳ ಕಡೆಗೆ ನೋಡಿದಲ್ಲಿ ಟಾಪ್ ಸ್ಪೆಕ್ ಡಸ್ಟರ್ ನಲ್ಲಿಯೇ ಹೆಚ್ಚುವರಿಗಳು ಬಂದಿವೆ. ಇವುಗಳಲ್ಲಿ ಯಾಂತ್ರಿಕ ಕ್ಲೈಮೇಟ್ ಕಂಟ್ರೋಲ್, ಧ್ವನಿ ಗುರುತುಗಳು, ರಿವರ್ಸ್ ಕ್ಯಾಮರಾ ಮತ್ತು ಡ್ರೈವರ್ ಬದಿಯ ವಿಂಡೋ ಸ್ವಯಂಚಾಲಿತ ಮೇಲೆ ಕೆಳಗೆ ಹೋಗುವ ವ್ಯವಸ್ಥೆಯಿದೆ. ಡೆಡ್ ಪೆಡಲನ್ನು ಎಡ ಪಾದದ ವಿಶ್ರಾಂತಿಗೆ ನೀಡಲಾಗಿದೆ.
 

ಇಂಜಿನ್ ಆಯ್ಕೆಗಳು ಬದಲಾಗಿಲ್ಲ. ಹೊಸ ರೂಪದ ಡಸ್ಟರಲ್ಲಿ ಪೆಟ್ರೋಲ್ ಎಂಜಿನ್,  ಡೀಸಲ್ ಎಂಜಿನ್  ಲಭ್ಯವಿದೆ. ಎಲ್ಲಾ ಎಂಜಿನ್ ಆಯ್ಕೆಗಳು ಫ್ರಂಟ್ ವೀಲ್ ಡ್ರೈವ್ ನಲ್ಲಿ ಸ್ಟಾಂಡರ್ಡ್ ಆಗಿ ಬರುತ್ತವೆ.

ಡೀಸಲ್ ಎಂಜಿನ್ ಮಾತ್ರ ಹೊರತಾಗಿದೆ. ಅದು ಆಲ್ ವೀಲ್ ಡ್ರೈವ್ ಆಯ್ಕೆ ಹೊಂದಿದೆ. ಫ್ರಂಟ್ ವೀಲ್ ಡ್ರೈವ್ ಡಸ್ಟರ್ ಅನ್ನು ಆಯ್ಕೆಯ ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸಮಿಶನ್ ಜೊತೆಗೆ ಖರೀದಿಸಬಹುದು. ವ್ಯವಸ್ಥೆಯನ್ನು ರೆನಾಲ್ಟ್ ಈಸೀ ಆರ್ ಎಂದು ಕರೆದಿದೆ. ಅತಿಯಾದ ಟ್ರಾಫಿಕಲ್ಲಿ ಚಲಾಯಿಸುವಾಗ ಇದು ಉತ್ತಮ. ಸರಾಸರಿ ಪ್ರತೀ ದಿನ ಚಾಲನಾ ಸ್ಥಿತಿ, ಗೇರ್ ಶಿಫ್ಟ್‌ಗಳನ್ನು ಎಎಂಟಿ ಬಾಕ್ಸಲ್ಲಿ ನೋಡಬಹುದು.

ಗೇರ್ ಶಿಫ್ಟ್‌ಗಳು ಮತ್ತು ಗೇರ್ ಬಾಕ್ಸ್ ಕ್ರೆಟಾಗೆ ಸಮನಾದ ಆಟೋಮ್ಯಾಟಿಕ್ ಟ್ರಾನ್ಸಮಿಶನ್ ಹೊಂದಿಲ್ಲ. ಆದರೆ ಎಎಂಟಿ ಕಾರ್ಯಗಳಿಗೆ ಹೊಂದಿಕೊಂಡಲ್ಲಿ ಹಿತಕರವಾದ ಅನುಭವ ಖುಷಿಕೊಡುತ್ತದೆ. ಮುಖ್ಯವಾಗಿ ಬಂಪರಿನಿಂದ ಬಂಪರಿಗೆ ಚಾಲನೆ. ಅಲ್ಲದೆ, ಮೊದಲ ಎಎಂಟಿ ಹಿಲ್ ಅಸಿಸ್ಟ್ ಜೊತೆಗೆ ಬರುವ ಕಾರಣ ಏರುಹಾದಿಯಲ್ಲಿ ಸುಲಭವಾಗಿ ದಾಟಬಹುದು.

ಚಾಲನೆ ಮತ್ತು ನಿಯಂತ್ರಣ ಡಸ್ಟರ್ ಸಾಮರ್ಥ್ಯಗಳಲ್ಲಿ ಒಂದು. ಹೊಸ ಆವೃತ್ತಿಯಲ್ಲೂ ಹಾಗೇ ಇದೆ. ಕೆಟ್ಟ ರಸ್ತೆಗಳಲ್ಲಿ ಸ್ವಲ್ಪ ಸ್ಟೀರಿಂಗ್ ಏರುತಗ್ಗು ಹೊರತುಪಡಿಸಿ ಉತ್ತಮವಾದ ಸಸ್ಪೆನ್ಷನ್ ಕಾರಿನ ಹೈಲೈಟ್. ಕಡಿಮೆ ವೇಗಗಳಲ್ಲಿ ಡಸ್ಟರ್ ದೃಢವಾಗಿರುತ್ತದೆ ಮತ್ತು ಎಲ್ಲವನ್ನೂ ಹೈ ಸ್ಪೀಡಲ್ಲಿ ಮುಗಿಸುತ್ತದೆ. ಮುಖ್ಯವಾಗಿ ಕಠಿಣ ರಸ್ತೆಗಳಲ್ಲಿ ಸ್ಥಿರತೆ ವಿಷಯದಲ್ಲಿ ಡಸ್ಟರ್ ಸಮೀಪ ಬರುವುದಿಲ್ಲ. ಆಲ್ ವೀಲ್ ಡ್ರೈವ್ ವಿಭಾಗವು ಅದರ ಸ್ವತಂತ್ರ ರೇರ್ ಸಸ್ಪೆನ್ಷನ್ ದೃಢವಾಗಿ ಕಾಲೂರಿದೆ. ಆದರೆ ಅದಕ್ಕೆ ಎಎಂಟಿ ಆಯ್ಕೆಯಿಲ್ಲ.


110PS ಡಸ್ಟರ್ 2014ರಲ್ಲಿ ಬಿಡುಗಡೆಯಾದಾಗ ಪವರ್ ಟ್ರೈನ್‌ಗೆ ಆಘಾತವಾಗಿತ್ತು. ಹೊಸ ಕಾರಲ್ಲೂ ಅದು ಇದೆ. ಎಂಜಿನ್ ಉತ್ತಮ ಎಳೆತದ ಶಕ್ತಿ ಹೊಂದಿದೆ. ಕಡಿಮೆ ಟರ್ಬೋ ಲ್ಯಾಗ್ ಹೊಂದಿದೆ ಮತ್ತು ಈಗ ಮೌನವಾಗಿದೆ. ಎಎಂಟಿ ಗೇರ್ ಬಾಕ್ಸ್ ಡಸ್ಟರ್ ಪ್ರದರ್ಶನವನ್ನು ಸ್ವಲ್ಪ ಕಡಿಮೆ ಮಾಡಿದೆ. ಆದರೆ ಎಂಜಿನ್ ಟಾರ್ಕ್ ಪ್ರವೃತ್ತಿಯಲ್ಲಿ ಮರುಮಾತಿಲ್ಲ. ಗೇರ್ ಲಿವರನ್ನು ಮ್ಯಾನುವಲ್ ಮೋಡಿಗೆ ತಳ್ಳಿ ಎಎಂಟಿ ಗೇರ್ ಬಾಕ್ಸ್ ಡಲ್ಲಿಂಗ್ ಎಫೆಕ್ಟನ್ನು ಕಡಿಮೆ ಮಾಡಬಹುದು.


AMT RxL ಎಎಂಟಿ ಹೆದ್ದಾರಿಗಳಲ್ಲೂ ಖುಷಿ ಕೊಡುತ್ತದೆ. ಆರು ಗೇರ್ ಸಂಯೋಜನೆ ಸರಳವಾಗಿ ಮುಂದೆ ಸಾಗಲು ನೆರವಾಗುತ್ತದೆ. ರೆನಾಲ್ಟ್ ಹಲವಾರು ಡಸ್ಟರ್ ದೌರ್ಬಲ್ಯಗಳನ್ನು ತೆಗೆದು ಹಾಕಿದೆ. ಕ್ಯಾಬಿನ್ ಚೆನ್ನಾಗಿದೆ. ವಿನ್ಯಾಸಗಳು ಸುಧಾರಣೆ ಕಂಡು ತಾಜಾತನ ಪಡೆದಿವೆ. ಈ ಬದಲಾವಣೆಗಳು ಡಸ್ಟರ್ ಅನುಭವವನ್ನು ಬದಲಿಸಿಲ್ಲ. ಎಎಂಟಿ ಗೇರ್ ಬಾಕ್ಸ್ ವಿಷಯಕ್ಕೆ ಬಂದರೆ ಇತರ ಸ್ವಯಂಚಾಲಿತ ಗೇರ್ ಬಾಕ್ಸ್ ಕೊಡುವ ಸರಾಗ ಕೊಡುವುದಿಲ್ಲ. ಆದರೆ ಎರಡು ಪೆಡಲ್ ಹಿತವನ್ನು ಚೆನ್ನಾಗಿ ಕೊಡುತ್ತದೆ. ಅಲ್ಲದೆ ಎಎಂಟಿ ಇಂಧನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ವೆಚ್ಚದಲ್ಲಿ ಲಾಭ ಕೊಡುತ್ತದೆ. ಡಸ್ಟರ್ ಬೆಲೆ ರು 11.66 ಲಕ್ಷ (ದೆಹಲಿ ಶೋರೂಂ). ಡಸ್ಟರ್ ಅನ್ನು ಕ್ರೇಟಾ ತರಹ ಅತ್ಯಾಧುನಿಕ ಆಗಿರದೆ ಇರಬಹುದು. ಆದರೆ ಅದರ ಹೊಸ ಮತ್ತು ವಿಸ್ತರಿತ ಸುಧಾರಣೆ ಉತ್ತಮವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News