ಇಲ್ಲಿದೆ One Plus 3 Specifications ವಿವರಗಳು

Update: 2016-03-28 05:22 GMT

ಒನ್ ಪ್ಲಸ್ ತನ್ನ 2016 ಫ್ಲಾಗ್‌ಶಿಪ್ ಮಾಡೆಲ್ ಮೇಲೆ ಇತ್ತೀಚೆಗೆ ಕೆಲಸ ಮಾಡುತ್ತಿದೆ. ಸಿಇಒ ಪೀಟ್ ಲಾವು ಹೇಳಿರುವ ಪ್ರಕಾರ ಒಬ್ ಪ್ಲಸ್ 3 ಜೂನ್‌ನಲ್ಲಿ ಬರಲಿದೆ. ಅದು ವರ್ಷದಲ್ಲಿ ಖರೀದಿಸಬಹುದಾದ ಅತೀ ಅಮೂಲ್ಯ ಸ್ಮಾರ್ಟ್‌ಫೋನ್ ಆಗಲಿದೆ.


A3000ಹೊಸ ವರದಿಯ ಪ್ರಕಾರ ಮುಂಬರುವ ಸ್ಮಾರ್ಟ್ ಫೋನ್ ನಿರ್ದಿಷ್ಟತೆಗಳೂ ಲಭ್ಯವಾಗಿವೆ. ಹ್ಯಾಂಡ್‌ಸೆಟ್ ಮೊಬೈಲ್ ನಂಬರ್ ಆಗಿದೆ. ಪೂರ್ಣ ಎಚ್‌ಡಿ ಡಿಸ್ಪಲೇ, ಕ್ವಾಲಕಮ್ ಸ್ನಾಪ್ ಡ್ರಾಗನ್ 820ಯಲ್ಲಿ 4ಜಿಬಿ ರಾಮ್ ಇರಲಿದೆ ಮತ್ತು 32 ಜಿಬಿ ಬಿಲ್ಟಿನ್ ಸಂಗ್ರಹವಿರಲಿದೆ. ಕ್ಯಾಮರಾಗಳ ವಿಷಯದಲ್ಲಿ ಡಿವೈಸ್ 16 ಮೆಗಾಪಿಕ್ಸಲ್ ರೇರ್ ಕ್ಯಾಮರಾವನ್ನು 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ಜೊತೆಗೆ ನಿರೀಕ್ಷಿಸಬಹುದು.

ವರದಿಯ ಪ್ರಕಾರ ಒನ್‌ಪ್ಲಸ್ 3 ನಿಮ್ಮ ನಿರೀಕ್ಷೆಯಂತೆಯೇ ಬರಲಿದೆ. ಮೂಲ ಸಂಗ್ರಹವಾದ 16 ಜಿಬಿಯಲ್ಲಿ ಸುಧಾರಣೆ ಕಂಡು 32 ಜಿಬಿಗೆ ಹೊಂದಿಕೊಂಡಿದೆ. ಈಗ ಒನ್ ಪ್ಲಸ್ 16 ಜಿಬಿ ಮತ್ತು 64 ಜಿಬಿಯಲ್ಲಿ ಲಭ್ಯವಿದೆ. ಆದರೆ ಏಪ್ರಿಲ್ 7ರ ಕಾರ್ಯಕ್ರಮದಲ್ಲಿ ಸಂಸ್ಥೆ ಒನ್‌ಪ್ಲಸ್ 3 ಬಿಡುಗಡೆ ಮಾಡುತ್ತಿಲ್ಲ ಎಂದೂ ದೃಢಪಟ್ಟಿದೆ.


ಒನ್‌ಪ್ಲಸ್ ವಿನ್ಯಾಸದಲ್ಲಿ ಅತಿಯಾದ ಬದಲಾವಣೆ ಬರಲಿದೆ. ಫೋನಿನ ವಿನ್ಯಾಸ ಬದಲಿಸುವ ಹುಚ್ಚಿನ ಬಗ್ಗೆ ಸಂಸ್ಥೆಯ ಸಿಇಒ ಪೀಟ್ ಲಾವು ಹೇಳಿದ್ದಾರೆ. ಅವರ ಪ್ರಕಾರ, ಒನ್‌ಪ್ಲಸ್ 3 ಬೆನ್ನಿಗೆ ಪರಿಪೂರ್ಣ ಕರ್ವ್ ಪಡೆಯಲು ಮೂರು ತಿಂಗಳು ಕೆಲಸ ಮಾಡಲಾಗಿದೆ. ಕೈಯಲ್ಲಿ ಚೆನ್ನಾಗಿ ನಿಲ್ಲಬೇಕು ಎನ್ನುವುದೇ ಸಂಸ್ಥೆಯ ಉದ್ದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News