ಮೈಕ್ರೋಸಾಫ್ಟ್ ಬಗ್ಗೆ ನಿಮಗೆಲ್ಲ ಗೊತ್ತಿದೆ ಎಂದು ನೀವು ತಿಳಿದಿದ್ದರೆ ಒಮ್ಮೆ ಇದನ್ನು ಓದಿ

Update: 2016-07-26 18:31 GMT

ನೀವು ಬಯಸುತ್ತೀರೋ ಇಲ್ಲವೋ, ಆದರೆ ಮೈಕ್ರೋಸಾಫ್ಟ್ ಎಲ್ಲೆಡೆಯೂ ಇದೆ. 1970ರಲ್ಲಿ ಸೂಪರ್ ಹಾಟ್ ಸ್ಟಾರ್ಟಪ್ ಆರಂಭವಾದಂದಿನಿಂದ 1990ರಲ್ಲಿ ಜಗತ್ತನ್ನೇ ವ್ಯಾಪಿಸಿರುವ ಸಂಸ್ಥೆ ಈಗ ಸಿಇಒ (ಕಾರ್ಯ ನಿರ್ವಾಹಕ ಅಧಿಕಾರಿ) ಸತ್ಯ ನಡೇಲ ಅವರ ನೇತೃತ್ವದಲ್ಲಿ ಪುನಶ್ಚೇತನ ಪಡೆಯುತ್ತಿದೆ. ಆದರೆ ನಿಮಗೆ ಕಂಪ್ಯೂಟರ್ ಉದ್ಯಮದ ಅತೀ ದೊಡ್ಡ ಹೆಸರಿನ ಬಗ್ಗೆ ನಿಮಗೆಷ್ಟು ಗೊತ್ತಿದೆ?


- ಮೈಕ್ರೋಸಾಫ್ಟ್ ಆಪಲ್ ಸಂಸ್ಥೆಯನ್ನು ದಿವಾಳಿಯಾಗುವುದರಿಂದ ರಕ್ಷಿಸಿದೆ. 1997ರಲ್ಲಿ 150 ದಶಲಕ್ಷ ಡಾಲರ್ ಹೂಡಿಕೆ ಮಾಡುವ ಮೂಲಕ ಆಪಲ್ ಸಂಸ್ಥೆಯನ್ನು ರಕ್ಷಿಸಿದೆ. ಆಪಲ್ ಸಿಇಒ ಆದ ಸಮಯದಲ್ಲಿ ಸ್ಟೀವ್ ಜಾಬ್ಸ್ ಇದನ್ನು ಘೋಷಿಸಿದಾಗ ನೆರೆದವರು ಟೀಕಿಸಿದ್ದರು.

- ಬಿಲ್ ಗೇಟ್ಸ್ 1987 ರಲ್ಲಿ ಅತೀ ಚಿಕ್ಕ ವಯಸ್ಸಿನ ಬಿಲಿಯನೇರ್ ಎಂದು ಘೋಷಿಸಲ್ಪಟ್ಟಿದ್ದರು. 1987ರಲ್ಲಿ 31ನೇ ವಯಸ್ಸಿನಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅತೀ ಚಿಕ್ಕ ವಯಸ್ಸಿನ ಬಿಲಿಯನೇರ್. 1995ರಲ್ಲಿ 12.9 ದಶಕೋಟಿ ಲಾಭದ ಮೂಲಕ ಜಗತ್ತಿನ ಶ್ರೀಮಂತ ವ್ಯಕ್ತಿ ಎನಿಸಿದ್ದರು.

- ಮೈಕ್ರೋಸಾಫ್ಟ್ 12,000 ಮಿಲಿಯನೇರ್ ಗಳನ್ನು ರೂಪಿಸಿದೆ. ಗೇಟ್ಸ್ ಹೊರತಾಗಿ ಮೈಕ್ರೋಸಾಫ್ಟ್ ಅಭೂತಪೂರ್ವ ಪ್ರಗತಿಯಿಂದ ಕನಿಷ್ಠ ಇನ್ನಿಬ್ಬರು ಬಿಲಿಯನೇರ್ ಗಳು ಮತ್ತು 12,000 ಮಿಲಿಯನೇರ್ ಗಳು ಸೃಷ್ಟಿಯಾಗಿದ್ದಾರೆ. ಮಾಜಿ ಸಿಇಒ ಸ್ಟೀವ್ ಬಾಲ್ಮರ್ 2014ರಲ್ಲಿ ಎಲ್‌ಎ ಕ್ಲಿಪರ್ಸ್‌ ಖರೀದಿಸಿದ್ದರು.


- ಬಿಲ್ ಗೇಟ್ಸ್ ಮತ್ತು ಪೌಲ್ ಅಲನ್ ಕಂಪನಿಯ ಮೊದಲ ಲೋಗೋ ಸೃಷ್ಟಿಸಿದರು. ಒ ಶಬ್ದವನ್ನು ಬ್ಲಿಬೆಟ್ ಎಂದೂ ಕರೆದಿದ್ದರು. - ರೋಲಿಂಗ್ ಸ್ಟೋನ್ಸ್ ಹಾಡು ವಿಂಡೋಸ್ 95ನ ಥೀಮ್ ಹಾಡಾಗಿತ್ತು. ಪ್ರಸಿದ್ಧ ನಿರ್ಮಾಪಕ ಮತ್ತು ಸಂಗೀತಗಾರ ಬ್ರಿಯಾನ್ ಎನೊ ವಿಂಡೋಸ್ ಸ್ಟಾರ್ಟಪ್ ಧ್ವನಿ ರಚಿಸಿದ್ದರು. ವಿಂಡೋಸ್ 95 ಸಂಗೀತದ ಜೊತೆಗೆ ಸಮೀಪ ಸಂಬಂಧ ಹೊಂದಿತ್ತು.

ರೋಲಿಂಗ್ ಸ್ಟೋನ್ಸ್ ಸ್ಟಾರ್ಟ್ ಮಿ ಅಪ್ ಆಪರೇಟಿಂಗ್ ಸಿಸ್ಟಂನ ಅಧಿಕೃತ ಹಾಡಾಗಿತ್ತು. ಸೂಪರ್ ಡಿಲಕ್ಸ್ ಸಿಡಿ ವರ್ಷನ್ ವೀಜರ್‌ನ ಬಡ್ಡಿ ಹೋಲಿ ಸಂಗೀತ ವಿಡಿಯೋ ಹೊಂದಿತ್ತು.

- ಎಕ್ಸೆಲ್ ಮೈಕ್ರೋಸಾಫ್ಟ್‌ನ ಮೊದಲ ಅದ್ಭುತ ಆಪ್.  ಮೈಕ್ರೋಸಾಫ್ಟ್ ಮೊದಲ ಕಿಲ್ಲರ್ ಆಫ್ ಮೈಕ್ರೋಸಾಫ್ಟ್ ಎಕ್ಸಲ್ ಸ್ಪ್ರೆಡ್ ಶೀಟ್ ಚಾಂಪಿಯನ್ಸ್ ಆಪಲ್ ವಿಸಿಕಾಲ್ಕ್ ಮತ್ತು ಲೋಟಸ್ 1-2-3ಯನ್ನು ಹಿಂದೆ ಹಾಕಿದ್ದವು. ಎಕ್ಸಲ್ ಇಲ್ಲದಿದ್ದರೆ ಯಾವುದೂ ಸಾಧ್ಯವಾಗುತ್ತಿರಲಿಲ್ಲ.

- ಮೈಕ್ರೋಸಾಫ್ಟ್ ಉದ್ಯೋಗಿಗಳು ತಮ್ಮ ಪತಿ ಮತ್ತು ಪತ್ನಿಯನ್ನು ವಾರ್ಷಿಕವಾಗಿ ಸಂಭ್ರಮಾಚರಣೆಗೆ ಕಚೇರಿಗೆ ಕರೆ ತರುತ್ತಾರೆ. ಪ್ರತೀ ವರ್ಷ ಅವರು ಕಂಪೆನಿಯಲ್ಲಿದ್ದುದಕ್ಕೆ ಒಂದು ಪೌಂಡ್ ಎನ್ನುವುದು ಪರಂಪರೆ.

- ಮೈಕ್ರೋಸಾಫ್ಟ್ ಬಳಿ 48,313 ಪೇಟೆಂಟುಗಳಿವೆ. ಅದರಲ್ಲಿ ಒಂದು ಹೊಲೊಲೆನ್ಸ್ ಹೆಡ್ ಸೆಟ್‌ಗೂ ಇದೆ. ಇದು ಭವಿಷ್ಯದ ಅನ್ವೇಷಣೆ ಎನ್ನಲಾಗಿದೆ.

- ಮೈಕ್ರೋಸಾಫ್ಟ್ ಮೊದಲ ಸ್ಮಾರ್ಟ್ ವಾಚ್ ತಂದಿದೆ. 1994ನಲ್ಲಿ ಟೈಮಾಕ್ಸ್ ಮತ್ತು ಮೈಕ್ರೋಸಾಫ್ಟ್ ಡಾಟಾಲಿಂಕ್ 150 ವಾಚನ್ನು ಜತೆಯಾಗಿ ವಿನ್ಯಾಸಗೊಳಿಸಿತ್ತು. ಅದು ಮೊದಲ ಸ್ಮಾರ್ಟ್ ವಾಚ್ ಆಗಿದ್ದು, ಆಪಲನ್ನು 12 ವರ್ಷಗಳ ಹಿಂದೂಡಿತ್ತು. ಆರಂಭದಲ್ಲಿ ರಿಯಲ್ ಟೈಮ್ ಟ್ರಾನ್ಸಲೇಶನ್, ಟಾಬ್ಲೆಟ್ ಕಂಪ್ಯೂಟರ್ಸ್‌, ಇಂಟರ್ನೆಟ್ ಇರುವ ಟಿವಿ ಗಜೆಟುಗಳನ್ನು ತಂದಿತ್ತು. ಅವುಗಳಲ್ಲಿ ಬಹುತೇಕ ಮಾರುಕಟ್ಟೆಯಲ್ಲಿ ವಿಫಲವಾಗಿವೆ.

- ಬಿಲ್ ಗೇಟ್ಸ್ ಮನೆ ಕ್ಸನಾಡು 2.0 ಬೆಲೆ 123 ಮಿಲಿಯ ಡಾಲರುಗಳೆನ್ನಲಾಗಿದೆ. 1998ರಲ್ಲಿ ಗೇಟ್ಸ್ ವಾಷಿಂಗ್ಟನ್‌ನ ಮೆಡಿನಾದ 66,000 ಚದರ ಅಡಿಯ ಕ್ಸನಾಡು 2.0 ಎಸ್ಟೇಟನ್ನು 2 ದಶಲಕ್ಷ ಡಾಲರಿಗೆ ಖರೀದಿಸಿದರು.


- ಮೈಕ್ರೋಸಾಫ್ಟ್ ಉದ್ಯೋಗಿಗಳು ಪ್ರತೀ ವರ್ಷ 23 ದಶಲಕ್ಷ ಉಚಿತ ಪಾನೀಯ ಕುಡಿಯುತ್ತಾರೆ. ಅವುಗಳಲ್ಲಿ ಬಹುತೇಕ ಹಾಲು ಮತ್ತು ಕಿತ್ತಳೆರಸವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News