112 : ಭಾರತದ ನೂತನ ಸರ್ವ ತುರ್ತು ಸೇವೆಗಳ ಏಕೈಕ ನಂಬರ್

Update: 2016-03-30 06:03 GMT

ಅಮೆರಿಕದಲ್ಲಿ 911 ಇರುವಂತೆ ಭಾರತದಲ್ಲೂ ಶೀಘ್ರವೇ ತುರ್ತು ಸಮಯದಲ್ಲಿ ಪೊಲೀಸ್, ಅಂಬ್ಯುಲೆನ್ಸ್, ಅಗ್ನಿಶಾಮಕ ದಳ ಮೊದಲಾದವುಗಳಿಗೆ ಕರೆ ಮಾಡಲು ಒಂದೇ ಸಂಖ್ಯೆ ಇರಲಿದೆ. ಟ್ರಾಯ್ ಈಗ 112ನ್ನು ಅಧಿಕೃತ ತುರ್ತು ಸಂಖ್ಯೆಯಾಗಿ ದೇಶವಿಡೀ ಮುಂದಿಡಲಿದೆ. ಆದರೆ ಇದರಿಂದ ಏನುಪಯೋಗ?

ತುರ್ತು ಸಂಖ್ಯೆ ಎಂದರೇನು?


ತುರ್ತು ಸಂಖ್ಯೆಯು ನಾಗರಿಕರಿಗೆ ನಗರದಲ್ಲಿ ಆರೋಗ್ಯ, ಅಪರಾಧ, ಪ್ರಾಕೃತಿಕ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ನೆರವಾಗುತ್ತದೆ. ಗಂಭೀರ ಸ್ಥಿತಿಗಳಲ್ಲಿ ಜನರ ನೆರವು ಪಡೆಯಲು ಬೇಡುವ ಬದಲಾಗಿ ಇದಕ್ಕೆ ಕರೆಮಾಡಬಹುದು.


ಈಗ ಭಾರತದಲ್ಲಿ ಎಷ್ಟು ತುರ್ತು ಸಂಖ್ಯೆಗಳಿವೆ?

ಈಗ ಪೊಲೀಸರಿಗೆ 100, ಅಗ್ನಿಶಾಮಕ ದಳಕ್ಕೆ 101, ಅಂಬ್ಯುಲೆನ್ಸಿಗೆ 102 ಮತ್ತು ಪ್ರಾಕೃತಿಕ ವಿಕೋಪದಂತಹ ತುರ್ತುಗೆ 108ಕ್ಕೆ ಕರೆ ಮಾಡಬೇಕು. ಮಹಿಳೆಯರಿಗೆ ನೆರವಾಗಲು ದೆಹಲಿಯಲ್ಲಿ 181, ಮಕ್ಕಳು ಮತ್ತು ಮಹಿಳೆ ಕಾಣೆಯಾದಲ್ಲಿ 1094, ಮಹಿಳೆ ವಿರುದ್ಧ ಅಪರಾಧಕ್ಕೆ 1096ಗೆ ಕರೆ ಮಾಡಬೇಕಿದೆ. ಉತ್ತರಪ್ರದೇಶದ ಪೊಲೀಸ್ ಮುಖ್ಯಕಚೇರಿಗೆ 1090 ಸಂಖ್ಯೆ ಇದೆ. 

 ಆಲ್ ಇನ್ ಒನ್ ತುರ್ತು ಸಂಖ್ಯೆ ಎಂದರೇನು?


112ನ್ನು ಭವಿಷ್ಯದಲ್ಲಿ ತಂದಲ್ಲಿ ಯಾವುದೇ ತುರ್ತು ಸಂದರ್ಭದಲ್ಲೂ ಅದಕ್ಕೆ ಕರೆ ಮಾಡಬಹುದು ಮತ್ತು ನೆರವನ್ನು ತಕ್ಷಣವೇ ಒದಗಿಸಬಹುದು. ಪ್ರತ್ಯೇಕ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.


ಹೊಸ ತುರ್ತು ಸಂಖ್ಯೆ ಹೇಗೆ ಕೆಲಸ ಮಾಡುತ್ತದೆ?


112ಕ್ಕೆ ಕರೆ ಮಾಡಿದಾಗ ಪ್ರತಿನಿಧಿ ನೀವು ಸಹಾಯ ಕೇಳಿದ ಇಲಾಖೆಗೆ ಸಂಪರ್ಕಿಸುತ್ತಾನೆ. ಈ ಸಂಖ್ಯೆಯನ್ನು ಮೊಬೈಲ್ ಮತ್ತು ಲ್ಯಾಂಡ್ ಲೈನ್ ಎರಡರಿಂದಲೂ ಮಾಡಬಹುದು. ಸಕ್ರಿಯ ಫೋನ್ ನಂಬರಿಗೆ ಔಟ್‌ಗೋಯಿಂಗ್ ಇಲ್ಲದಾಗಲೂ ಈ ನಂಬರ್‌ಗೆ ಕರೆ ಮಾಡಬಹುದು. ಕರೆ ಮಾಡಿದ ಕೂಡಲೇ ಸ್ಥಳ ಪತ್ತೆಯಾಗಿ ಸಮೀಪದ ನೆರವಿನ ಕೇಂದ್ರಕ್ಕೆ ಸುದ್ದಿ ನೀಡಲಾಗುತ್ತಿದೆ. ಈ ಸೇವೆಯನ್ನು ಕಾಲ್ ಸೆಂಟರ್ ರೀತಿಯಲ್ಲಿ ನಿಭಾಯಿಸಲಾಗುವುದು. ಹಿಂದಿ, ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ನೆರವು ನೀಡಲಾಗುವುದು.


ಈಗಿನ ತುರ್ತು ಸಂಖ್ಯೆಗಳೇನಾಗುತ್ತವೆ?


112 ತಂದ ವರ್ಷದೊಳಗೆ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಉಳಿದೆಲ್ಲ ಸಂಖ್ಯೆಗಳನ್ನು ನಿವಾರಿಸಲಾಗುವುದು. ಹೊಸ ಸಂಖ್ಯೆಯ ಬಗ್ಗೆ ಜನರಿಗೆ ತಿಳಿ ಹೇಳಿದ ನಂತರ ಇದನ್ನು ಮಾಡಲಾಗುವುದು.


ಹೊಸ ಸಂಖ್ಯೆ ಯಾವಾಗ ಸಿಗಲಿದೆ?


ಹಿಂದಿನ ಅಂದಾಜಿನ ಪ್ರಕಾರ ಒಂದು ವರ್ಷವಾಗಬಹುದು. ಆದರೆ ಈಗಿನ ಮಾಹಿತಿಯಂತೆ ಕೆಲವೇ ತಿಂಗಳಲ್ಲಿ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News