ಸ್ಮಾರ್ಟ್ ಫೋನ್ ನಿಂದಲೇ ನಿಯಂತ್ರಿಸುವ ರೈಸ್ ಕುಕ್ಕರ್ ಬಂದಿದೆ !
ಹೊಸದಿಲ್ಲಿ, ಮಾ. 31 : ತನ್ನ ಇಕೋಸಿಸ್ಟಂ ಉದ್ಯಮಕ್ಕೆ ಹೊಸ ಕೊಡುಗೆಯಾಗಿ ಕ್ಸಿಯೋಮಿ ಹೊಸ ಉಪ ಬ್ರಾಂಡ್ ಆಗಿರುವ ಎಂಐ ಇಕೋಸಿಸ್ಟಂ ಅನ್ನು ಪರಿಚಯಿಸುತ್ತಿದೆ. ಎಂಐ ಇಕೋಸಿಸ್ಟಂನಲ್ಲಿ ಕ್ಸಿಯೋಮಿ ಇಕೊಸಿಸ್ಟಂ ಸಹಯೋಗಿಗಳು ತಯಾರಿಸಿದ ಹಲವು ಉತ್ಪನ್ನಗಳಿವೆ. ಆದರೆ ಕಂಪನಿಯ ಮೊದಲ ಉತ್ಪನ್ನವನ್ನು ಎಂಐ ಇಂಡಕ್ಷನ್ ಹೀಟಿಂಗ್ ಪ್ರೆಶರ್ ರೈಸ್ ಕುಕ್ಕರ್ ಹೆಸರಲ್ಲಿ ಪರಿಚಯಿಸಲಾಗಿದೆ.
ರೂ 10,200 ಬೆಲೆಗೆ ಸಿಗುವ ಹೊಸ ರೈಸ್ ಕುಕ್ಕರ್ ಹೈ ಎಂಡ್ ಜಪಾನೀ ಇಂಡಕ್ಷನ್ ಹೀಟಿಂಗ್ ಪ್ರೆಶರ್ ರೈಸ್ ಕುಕ್ಕರ್ ಗಳಿಗಿಂತ ಶೇ 40 ಕಡಿಮೆ ಬೆಲೆಯಲ್ಲಿ ಸಿಗಲಿದೆ. Mi.com ವೆಬ್ ತಾಣದಲ್ಲಿ ಚೀನಾದಲ್ಲಿ ಮಾರಾಟವಾಗಲಿದೆ.
ಏಪ್ರಿಲ್ 6ರಂದು ಎಂಐ ಫ್ಯಾನ್ ಫೆಸ್ಟಿವಲ್ ಸಂದರ್ಭ ಇದನ್ನು ಬಿಡುಗಡೆ ಮಾಡಲಾಗುವುದು. ಎಂಐ ಇಂಡಕ್ಷನ್ ಹೀಟಿಂಗ್ ಪ್ರೆಶರ್ ರೈಸ್ ಕುಕ್ಕರ್ ವೈಫೈ ಬಳಸುವ ಸ್ಮಾರ್ಟ್ ಗಜೆಟ್ ಆಗಿದ್ದು, ಎಂಐ ಹೋಮ್ ಆಪ್ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ ಅಕ್ಕಿ, ಬ್ರಾಂಡ್ ಮತ್ತು ಮೂಲವನ್ನು ಗುರುತಿಸಲು ಬಳಕೆದಾರರು ಕುಕರ್ ಅನ್ನು ಸ್ಕಾನ್ ಮಾಡಬಹುದು. ಅಕ್ಕಿಯ ವಿಧಕ್ಕೆ ಅನುಗುಣವಾಗಿ ಸೂಕ್ತವಾಗಿ ಹೊಂದಿಕೊಳ್ಳುವ ಹೀಟಿಂಗ್ ವಿಧಾನವನ್ನು ಅನುಸರಿಸಬಹುದು.
ಇದನ್ನು ಈಗ 200 ಬ್ರಾಂಡುಗಳ ಅಕ್ಕಿಗೆ ಬಳಸಬಹುದು. ಭವಿಷ್ಯದಲ್ಲಿ ಇದನ್ನು ವಿಸ್ತರಿಸಲಾಗುವುದು. ಆಪ್ ಮೂಲಕ ಬಳಕೆದಾರರು ಖಾಸಗಿ ಆದ್ಯತೆಗಳನ್ನು ಸೆಟ್ ಮಾಡಬಹುದು. ಆಪ್‌ನಲ್ಲಿ ಕುಕರ್ ಮೂಲಕ ಬಳಸಬಹುದಾದ ಇತರ ಅಡುಗೆ ವಿಧಾನಗಳೂ ಇವೆ. ಬ್ರೌನ್ ರೈಸ್, ಕ್ರಿಸ್ಪೀ ರೈಸ್ ಮತ್ತು ಕೇಕ್ ಗಳ ವಿವರವೂ ಇದೆ. ಈ ಇತರ ಐಟಂಗಳನ್ನು ಬೇಯಿಸುವ ವಿಧಾನವನ್ನು ಬಳಕೆದಾರರು ಕಂಡುಕೊಳ್ಳಬೇಕಾಗಿಲ್ಲ. ಬದಲಾಗಿ ಅದನ್ನು ಆಪ್ ಮೂಲಕ ಸೆಟ್ ಮಾಡಬಹುದು. ಈಗ ಅದು 2450 ಬಗೆಯ ಹೀಟಿಂಗ್ ವಿಧಾನಗಳನ್ನು ಬಳಸಿಕೊಳ್ಳುತ್ತದೆ.
ಎಂಐ ಇಕೊಸಿಸ್ಟಂ ನಿರ್ಮಿಸಲು ಕ್ಸಿಯೋಮಿ ಈವರೆಗೆ ವಿನ್ಯಾಸ ಮತ್ತಿ ತಯಾರಿಕೆಯಲ್ಲಿ ಖ್ಯಾತನಾಮರಾದ 55 ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಇದರಲ್ಲಿ ಝಿಮಿಯ 29 ಕಂಪನಿಗಳು ಮತ್ತು ವಿಯೊಮಿ ಕೂಡ ಸೇರಿದೆ. ಸುಮಾರು 20 ಎಂಐ ಇಕೊಸಿಸ್ಟಂ ಕಂಪನಿಗಳು ಉತ್ಪನ್ನವನ್ನು ಬಿಡುಗಡೆ ಮಾಡಿವೆ.